
ಕೊರಟಗೆರೆ: ಹೊಳವನಹಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಪ್ರಬಲ ಆಕಾಂಕ್ಷಿ , ಸಮಾಜ ಸೇವಕರು ಹಾಗೂ ಎಂ.ಎನ್.ಜೆ ಗ್ರೂಪ್ ಮಾಲೀಕರಾದ ಮಂಜಣ್ಣ ನವರು ಸುಪ್ರಸಿದ್ಧ ಶ್ರೀ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನೂತನವಾಗಿ ನಿರ್ಮಾಣವಾಗುತ್ತಿರುವ ರಾಜಗೋಪುರದ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದರು.
ದೇವಾಲಯದ ಧರ್ಮದರ್ಶಿ ಎಲ್. ರಾಜಣ್ಣ ನವರ ಮುಖಾಂತರ ನಗದು ರೂಪದಲ್ಲಿ ದೇಣಿಗೆಯನ್ನು ಹಸ್ತಾಂತರಿಸಲಾಯಿತು.
ನಂತರ ಮಾತನಾಡಿದ ಮಂಜಣ್ಣ ನವರು, “ದೇವಾಲಯಕ್ಕೆ ರಾಜಗೋಪುರ ಕಳಶವಿದ್ದಂತೆ. ಇಂತಹ ಪುಣ್ಯದ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕು. ದೇವಾಲಯದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ನಾನು ಸಹ ನಿಮ್ಮ ಜೊತೆ ಕೈಜೋಡಿಸಿ ಸಂಪೂರ್ಣ ಸಹಕಾರ ನೀಡುತ್ತೇನೆ” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೂರಾರು ಅಭಿಮಾನಿಗಳು, ಕಾರ್ಯಕರ್ತರು, ಭಕ್ತರು ಉಪಸ್ಥಿತರಿದ್ದರು. ಪೂಜಾ ಕಾರ್ಯಕ್ರಮದ ನಂತರ ನೆರೆದಿದ್ದ ಭಕ್ತರು ಹಾಗೂ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ದೇವಾಲಯದ ಧರ್ಮದರ್ಶಿಗಳು ಮಂಜಣ್ಣ ಅವರ ಸೇವೆಯನ್ನು ಶ್ಲಾಘಿಸಿ, ದೇವರ ಕೃಪೆ ಸದಾ ಇರಲಿ ಎಂದು ಹಾರೈಸಿದರು.
ಪೂಜಾ ಕಾರ್ಯಕ್ರಮದಲ್ಲಿ ಎಂ. ಎನ್. ಜೆ. ಮಂಜುನಾಥ್, ಆಪ್ತ ಸಹಾಯಕ ಭಾನುಪ್ರಕಾಶ್ ಸೇರಿದಂತೆ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಓಬಳರಾಜು,ತಾ. ಪಂ. ಮಾಜಿ ಸದಸ್ಯ ಎಲ್ ವಿ ಪ್ರಕಾಶ್,ಉಮಾಶಂಕರಾದ್ಯ, ರಂಗನಾಥ್,ಮರುಡಪ್ಪ, ಚಂದ್ರಣ್ಣ, ಎಚ್ ಸಿ.ಮಂಜುನಾಥ್ ಸುರೇಶ್,ಕಾಳಿಚರಣ್, ರಾಮಕೃಷ್ಣಯ್ಯ ಲಕ್ಷ್ಮೀಪತಣ್ಣ ಸೇರಿದಂತೆ ಇನ್ನೂ ಅನೇಕ ಭಕ್ತಾದಿಗಳು ಹಾಗೂ ಅಭಿಮಾನಿಗಳು ಇದ್ದರು.
ವರದಿ : ಪ್ರಸನ್ನ ಕುಮಾರ್.ಎಸ್. ಕೊರಟಗೆರೆ


















