ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪಾಲಕರ ಸಹಕಾರವಿದ್ದಾಗ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತದೆ: ಡಾ. ಎಸ್.ಶಿವರಾಜ

ಸಿಂಧನೂರು- ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿದ್ದು ಪಾಲಕ-ಪೋಷಕರ ಸಹಕಾರ ಇದ್ದಾಗ ಮಾತ್ರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತದೆ ಎಂದು ಸರ್ಕಾರಿ ಆದರ್ಶ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್ ಶಿವರಾಜ ಅಭಿಪ್ರಾಯಪಟ್ಟರು.
ಅವರು ಸೋಮವಾರದಂದು ನಗರದ ಪಿಎಂ ಶ್ರೀ ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ) ಶಾಲೆಯಲ್ಲಿ ಪ್ರಸ್ತುತ ಸಾಲಿನ ಮೊದಲನೆಯ ಸಮುದಾಯದತ್ತ ಶಾಲೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ‘ತಾಯಂದಿರ ಮತ್ತು ಪೋಷಕರ ಸಭೆ’ಯನ್ನು ಉದ್ದೇಶಿಸಿ ಮಾತನಾಡುತ್ತಾ, ಒಂದೇ ಕೈಯಿಂದ ಚಪ್ಪಾಳೆ ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಕೇವಲ ಶಿಕ್ಷಕರ ಪ್ರಯತ್ನದಿಂದ ಮಕ್ಕಳಿಗೆ ಸರ್ವತೋಮುಖ ಶಿಕ್ಷಣ ದೊರೆಯಲು ಸಾಧ್ಯವಿಲ್ಲ. ಕಾರಣ ಪ್ರತಿಯೊಬ್ಬ ತಾಯಂದಿರು ಪೋಷಕರು ತಮ್ಮ ಮಕ್ಕಳಿಗೆ ನಿರಂತರವಾಗಿ ಕಾಳಜಿ ವಹಿಸಬೇಕು. ಶಾಲೆಯಲ್ಲಿ ಕೇವಲ ಐದರಿಂದ ಆರು ತಾಸುಗಳನ್ನು ಮಾತ್ರ ಪಾಠ-ಪ್ರವಚನಗಳಲ್ಲಿ ತೊಡಗುತ್ತಾರೆ. ಆದರೆ ಉಳಿದ ಸಮಯವನ್ನು ಮನೆಗಳಲ್ಲಿಯೇ ಕಳೆಯುವುದರಿಂದ ಮಕ್ಕಳನ್ನು ಮನೆಯಲ್ಲಿ ಸೂಕ್ತವಾಗಿ ನಿರ್ವಹಣೆ ಮಾಡಬೇಕು ಎಂದರು. ಅತ್ಯಂತ ಕಡಿಮೆ ವೆಚ್ಚದಲ್ಲಿ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಪಾಲಕರು ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದರು.
ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ವೀರೇಶ ಗೋನವಾರ ಅವರು ಮಾತನಾಡುತ್ತಾ, ಪ್ರೌಢಶಾಲೆಯ ಹಂತದ ವಿದ್ಯಾರ್ಥಿಗಳನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಬೇಕು. ಮಕ್ಕಳಿಗೆ ಗದರಿಸುವುದರ ಜೊತೆಗೆ ಪ್ರೀತಿಯನ್ನು ತೋರಿಸಬೇಕು. ಮಕ್ಕಳಿಗಾಗಿ ದಿನದಲ್ಲಿ ಒಂದೆರಡು ಗಂಟೆಗಳನ್ನು ವ್ಯಯ ಮಾಡಬೇಕು. ಮಕ್ಕಳ ಪ್ರತಿಯೊಂದು ಚಲನ ವಲನಗಳನ್ನು ನಿರಂತರವಾಗಿ ಗಮನಿಸುತ್ತಿರಬೇಕು. ಅವರ ವರ್ತನೆಗಳಲ್ಲಿ ಏನಾದರೂ ವ್ಯತಿರಿಕ್ತ ಬದಲಾವಣೆಗಳಾದರೆ ತಕ್ಷಣವೇ ಶಿಕ್ಷಕರ ಗಮನಕ್ಕೆ ತರಬೇಕು. ನಿಮ್ಮ ಮಕ್ಕಳ ಕಲಿಕೆಯ ಹಾಗೂ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಶಾಲೆಯ ಜೊತೆಗೆ ಕೈಜೋಡಿಸಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು.
ಮನೆಯಲ್ಲಿ ಮಕ್ಕಳ ನಿರ್ವಹಣೆ, ಮಕ್ಕಳ ಮಾನಸಿಕತೆ ಮತ್ತು ವರ್ತನೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಕನ್ನಡ ಭಾಷಾ ಶಿಕ್ಷಕರಾದ ಭೀಮರೆಡ್ಡಿ, ಗಣಿತ ಶಿಕ್ಷಕರಾದ ಸಾವನ್ ಕೆ ವಿಷಯಗಳನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಸದಸ್ಯರಾದ ಶೇಖರಯ್ಯ ಸ್ವಾಮಿ ಜವಳಗೇರಾ, ಶಾಲಾ ಶಿಕ್ಷಕರಾದ ಮೌನೇಶಪ್ಪ, ಬಸವರಾಜ ಆನೆಗುಂದಿ, ಮಲ್ಲಪ್ಪ ಕೆ, ದೀಪಿಕಾ ಪಾಟೀಲ್, ಜಡೇಶ, ಉಮೇಶ, ಅಕ್ಕಮಹಾದೇವಿ ಸೇರಿದಂತೆ ಇತರರು ವೇದಿಕೆಯ ಮೇಲಿದ್ದರು.
ಶಾಲೆಯ ಪಾಲಕರ ವೀರಭದ್ರಪ್ಪ ವಕೀಲರು, ಶಂಕ್ರಪ್ಪ ಬಿ.ವಜ್ರಬಂಡಿ ಉಪನ್ಯಾಸಕರು, ವಿನೋದ ಸೇರಿದಂತೆ ಇತರರು ಮಾತನಾಡಿದರು.

ಸಂವಾದ: ಶಾಲಾ ತರಗತಿಗಳಲ್ಲಿ ಕಲಿಕೆ ಮತ್ತು ಮಕ್ಕಳು ಮನೆಯಲ್ಲಿ ಎದುರಿಸುತ್ತಿರುವ ವಿವಿಧ ವಿಷಯಗಳ ಕುರಿತು ಪಾಲಕರೊಂದಿಗೆ ಸಂವಾದ ನಡೆಸಲಾಯಿತು. ತಮ್ಮ ಮಕ್ಕಳ ಕಲಿಕಾ ಕೊರತೆಗಳು, ಮಕ್ಕಳ ಮನೆಗೆಲಸ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಲಹೆಗಳನ್ನು ನೀಡಿದರು.

ಫಲಿತಾಂಶ ಹಂಚಿಕೆ: ಇದೇ ಸಂದರ್ಭದಲ್ಲಿ ಆಯಾ ವಿಷಯಗಳ ಶಿಕ್ಷಕರು ಶಾಲೆಯ ಆರರಿಂದ ಹತ್ತನೇ ತರಗತಿವರೆಗಿನ ಶಾಲಾ ಮಕ್ಕಳ ಪ್ರಥಮ ಸೆಮಿಸ್ಟರ್‌ನ ಫಲಿತಾಂಶವನ್ನು ಹಂಚಿಕೊಳ್ಳಲಾಯಿತು.

ಉಚಿತ ಪಠ್ಯಪುಸ್ತಕ ವಿತರಣೆ: ಇದೇ ಮೊದಲ ಬಾರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸರಬರಾಜು ಮಾಡಿದ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!