ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪಾರಂಪರಿಕ ಜಲನಿಧಿಗೆ ಮರುಜೀವ: ಪುರಾತನ ಭಾವಿ ಜೀರ್ಣೋದ್ಧಾರ, ಪೌರಾಯುಕ್ತರಿಂದ ಲೋಕಾರ್ಪಣೆ

ಗಂಗಾವತಿ: ನಗರದ 31ನೇ ವಾರ್ಡಿನ ವಿರುಪಾಪುರ ನಗರದಲ್ಲಿರುವ ಶ್ರೀ ತ್ರಿಕೂಟ ಬಸವೇಶ್ವರ ದೇವಸ್ಥಾನದ ಹತ್ತಿರ ನೂರಾರು ವರ್ಷಗಳ ಇತಿಹಾಸವಿದ್ದು, ಕಾಲಕ್ರಮೇಣ ಮುಚ್ಚಿಹೋಗಿದ್ದ (ಹೂತುಹೋಗಿದ್ದ) ಪ್ರಾಚೀನ ಬಾವಿಯೊಂದನ್ನು ದೇವಸ್ಥಾನ ಕಮಿಟಿಯ ಸದಸ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಯಶಸ್ವಿಯಾಗಿ ಪುನರ್ ನಿರ್ಮಿಸಿ ಲೋಕಾರ್ಪಣೆ ಮಾಡಲಾಯಿತು.
ಉದ್ಘಾಟನೆಗೂ ಮುನ್ನ ಬಾವಿಯಿಂದ ನೀರನ್ನು ಹೊರ ತೆಗೆದು, ಆ ನೀರಿನಿಂದ ಬಾವಿಯ ಸುತ್ತಲೂ ಶುದ್ಧೀಕರಣಗೊಳಿಸಲಾಯಿತು. ನಂತರ ಕುಂಕುಮ ಅಭಿಷೇಕ, ಗಂಗಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಪುನರ್ ನಿರ್ಮಾಣಗೊಂಡ ಬಾವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ನಗರಸಭೆಯ ಪೌರಾಯುಕ್ತರಾದ ರಾಮರೆಡ್ಡಿ ಅವರು ಬಾವಿಯ ರಿಬ್ಬನ್ ಕಟ್ ಮಾಡುವುದರ ಮೂಲಕ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಪುರಾತನ ಕಾಲದ ಬಾವಿಗಳನ್ನು ರಕ್ಷಿಸುವುದು ಹಾಗೂ ನೆಲ-ಜಲ ಪರಂಪರೆಯನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ ಮತ್ತು ಸರ್ಕಾರದ ಧ್ಯೇಯವಾಗಿದೆ. ನಾವು ಅದನ್ನು ಉಳಿಸಿಕೊಂಡು ಹೋಗಬೇಕು. ಈ ಕಾರ್ಯದಲ್ಲಿ ತಾವು ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಈ ಕೆಲಸಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಬಾವಿಯ ಜೀರ್ಣೋದ್ಧಾರಕ್ಕೆ ನಗರಸಭೆಯಿಂದಲೂ ಸಹಾಯ ಮಾಡಲಾಗಿದೆ” ಎಂದು ತಿಳಿಸಿದರು.
ನಂತರ ಶ್ರೀ ತ್ರಿಕೂಟ ಬಸವೇಶ್ವರ ದೇವಸ್ಥಾನದ ಸದಸ್ಯರು ಹಾಗೂ ಸಾರ್ವಜನಿಕರು ಮಾತನಾಡಿ, “ಈ ಬಾವಿ ತುಂಬಾ ಪುರಾತನವಾದದ್ದು. ಸುಮಾರು ಎರಡು ನೂರು ವರ್ಷಗಳ ಹಿಂದೆ ಇದರ ನೀರನ್ನು ಕುಡಿಯಲು ಹಾಗೂ ಪ್ರತಿಯೊಂದು ಅವಶ್ಯಕತೆಗೂ ಬಳಸುತ್ತಿದ್ದರು. ನಾವು ಕೂಡ ಈ ನೀರನ್ನು ಕುಡಿದು ಬೆಳೆದಿದ್ದೇವೆ. ಧಾರ್ಮಿಕ ಕಾರ್ಯಕ್ರಮಗಳು, ಮದುವೆ ಹಾಗೂ ಇತರೆ ಶುಭ ಸಮಾರಂಭಗಳ ಗಂಗಾಪೂಜೆಗಾಗಿ ಸುತ್ತಮುತ್ತಲಿನವರೆಲ್ಲರೂ ಇಲ್ಲಿಗೆ ಬರುತ್ತಿದ್ದರು. ಇಂತಹ ಸತ್ಕಾರ್ಯವನ್ನು ಕೈಗೊಂಡಿರುವುದು ನಮಗೆ ತುಂಬಾ ಹೆಮ್ಮೆ ತಂದಿದೆ. ಇದನ್ನು ಸಾರ್ವಜನಿಕರು ಮತ್ತು ಮುಂದಿನ ಪಿಳಿಗೆಯವರು ಉಳಿಸಿಕೊಂಡು ಹೋಗಬೇಕು ಎನ್ನುವುದು ನಮ್ಮೆಲ್ಲರ ಆಶಯ” ಎಂದರು.
ಈ ಕಾರ್ಯಕ್ರಮದಲ್ಲಿ ಶ್ರೀ ತ್ರಿಕೂಟ ಬಸವೇಶ್ವರ ದೇವಸ್ಥಾನದ ಸದಸ್ಯರಾದ ಚಂದ್ರಶೇಖರ ನಾಯಕ, ಕೆ. ಅಂಬ್ರೇಶ, ಪರಶುರಾಮ ನಾಯಕ, ಅಶೋಕ ಗುಡಿಕೋಟಿ, ಉಮೇಶ ನಾಯಕ, ಯಮುನೂರಪ್ಪ ನಾಯಕ, ಬಸವರಾಜ ಬೋವಿ, ಕೆ. ಶರಣಪ್ಪ, ಕೆ. ವೀರಭದ್ರಪ್ಪ ಹಾಗೂ ಹಿರಿಯರಾದ ಮುಕ್ಕಣ್ಣ, ಕೆ. ವಿರೂಪಾಕ್ಷಪ್ಪ, ಬಸವರಾಜ ನಾಯಕ ಹಾಗೂ ಸ್ಥಳೀಯ ಮಹಿಳೆಯರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!