ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿ: ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನೂತನ ಸಾರಥಿ ಪಟ್ಟ; ಅಧ್ಯಕ್ಷರಾಗಿ ಗಂಗಾಧರ, ಉಪಾಧ್ಯಕ್ಷರಾಗಿ ಸುನಿತಾ ಸರ್ವಾನುಮತದಿಂದ ಆಯ್ಕೆ.

ಕಂಪ್ಲಿ: ಮಕ್ಕಳ ಉಜ್ವಲ ಭವಿಷ್ಯ ಹಾಗೂ ಶಾಲೆಯ ಮೂಲಸೌಕರ್ಯದ ಪ್ರಗತಿಗೆ ಪೂರಕವಾಗಿ ಇಲ್ಲಿನ ಎಂ.ಡಿ. ಕ್ಯಾಂಪ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ (SDMC) ಹೊಸ ರಕ್ತ ತುಂಬಲಾಗಿದೆ. ಬುಧವಾರ ನಡೆದ ಮಹತ್ವದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಗಂಗಾಧರ ಹಾಗೂ ಉಪಾಧ್ಯಕ್ಷರಾಗಿ ಸುನಿತಾ ಅವರು ಸರ್ವಾನುಮತದಿಂದ ಅಯ್ಕೆಯಾಗಿದ್ದಾರೆ.
ಪಟ್ಟಣದ 22ನೇ ವಾರ್ಡ್‌ನಲ್ಲಿರುವ ಈ ಶಾಲೆಯ ಆವರಣದಲ್ಲಿ ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣಾಭಿಮಾನಿಗಳ ಸಮ್ಮುಖದಲ್ಲಿ ಸಭೆ ಜರುಗಿತು. ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳ ಜೊತೆಗೆ ಒಟ್ಟು 16 ಜನ ಉತ್ಸಾಹಿ ಸದಸ್ಯರ ಬಲಿಷ್ಠ ತಂಡವನ್ನು ಒಮ್ಮತದಿಂದ ರಚಿಸಲಾಯಿತು.

ಸದಸ್ಯರ ಬಳಗ :
ಸಮಿತಿಯ ನೂತನ ಸದಸ್ಯರಾಗಿ ಸುರೇಶ, ಶಂಕರ್, ಚಿನ್ನ ರಾಮುಡು, ಅಂಜಿ, ವೆಂಕಟೇಶ, ರಾಮಾಂಜಿನಿ, ಆನಂದ, ರೇಣುಕಾ, ಯಶೋಧಾ, ಲಕ್ಷ್ಮಿ, ನೀಲಮ್ಮ, ಹುಲಿಗೆಮ್ಮ, ಕೃಷ್ಣವೇಣಿ, ಹುಲಿಗೆಮ್ಮ, ಶಬೀನಾ ಬಾನು ಮತ್ತು ಸಣ್ಣ ಮೂರ್ತಿ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಮಾಲಾರ್ಪಣೆ, ಹೂಗುಚ್ಛ ನೀಡಿ ಗೌರವ :
ಆಯ್ಕೆಯಾದ ತಕ್ಷಣವೇ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಹೂಮಾಲೆ ಹಾಕಿ, ಶಾಲೆಯ ಪ್ರಗತಿಗೆ ಒಟ್ಟಾಗಿ ಶ್ರಮಿಸುವಂತೆ ಹಾರೈಸಿ ಗೌರವಿಸಲಾಯಿತು.
ಈ ಸಮಿತಿ ರಚನೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ದೊಡ್ಡ ಬಸಪ್ಪ, ಪುರಸಭೆಯ ಮಾಜಿ ಸದಸ್ಯ ಆಂಜನೇಯ, ಶಾಲೆಯ ಮುಖ್ಯಶಿಕ್ಷಕಿ ನಾಗರತ್ನ ಹಾಗೂ ಸಹ ಶಿಕ್ಷಕರು ಭಾಗವಹಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!