ಉತ್ತತ್ತಿ ಮಾರುವ ಬುಟ್ಟಿಯಲ್ಲಿ
ರಥವೇ ಬಂದಿದೆ ಅಭಿಮಾನದಲ್ಲಿ
ತಾಯಿಯ ಶ್ರದ್ಧೆಯ ಶ್ರಮಕ್ಕಿಲ್ಲಿ
ಭಗವಂತ ನಿಂತಾನ ಒಲಿದಿಲ್ಲಿ
ರಥದ ದರುಶನದ ಭಾಗ್ಯಕ್ಕಿಲ್ಲಿ
ಜನಸಾಗರ ಹರಿದು ಅಂಗಳದಲ್ಲಿ
ಉತ್ತತ್ತಿ ಸಮರ್ಪಿಸಿ ಭಗವಂತನಿಗಿಲ್ಲಿ
ಸಾರ್ಥಕವೆನ್ನುವರು ನೋಡಿದ ಕಂಗಳಲ್ಲಿ
ತಾಯಿ ಕರಮುಗಿದು ರಥಕ್ಕಿಲ್ಲಿ
ನಾಲ್ಕು ರೂಪಾಯಿ ಸಿಗಲೆಂದು ವ್ಯಾಪಾರದಲ್ಲಿ
ಹಿಡಿತುಂಬ ಉತ್ತತ್ತಿಯಿಟ್ಟು ದಯೆಯಲ್ಲಿ
ಬಿಲ್ಲಿಗೆ ಬಿಲ್ಲಿ ಸೇರಿಸಿದಳು ಶ್ರಮದಲ್ಲಿ
ಮಕ್ಕಳಾಟ ಬರಿದಾದ ಮನೆಯಲ್ಲಿ
ಕೂಡಿಟ್ಟ ರೂಪಾಯಿಯೇ ಜಾತ್ರೆಯಿಲ್ಲಿ
ಬಿಡಿಗಾಸು ಹಿಡಿದು ಕರದಲ್ಲಿ
ಸಾರ್ಥಕವೆಂದಳು ಜಾತ್ರೆ ತೃಪ್ತಿಯಲ್ಲಿ
ಮಕ್ಕಳು, ತಾಯಿಯ ಕಂಗಳಲ್ಲಿ
ಮಹಾರಥ ತಲೆ ಮೇಲಿನ ಬುಟ್ಟಿಯಲ್ಲಿ
ತಾಯಿ ಬಂದು ನಿಂತಾಗ ಮನೆಯಲ್ಲಿ
ಮಹಾರಥವನ್ನೇ ಕಂಡರು ಮಕ್ಕಳು ತಾಯಿಯಲ್ಲಿ
- ಕಲ್ಲಪ್ಪ ಕವಳಕೇರಿ ಮಂಗಳೂರು✍️
( ಕೊಪ್ಪಳ ಜಿಲ್ಲೆ )




















