ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಂಸ್ಕೃತಿಯ ಸಡಗರ: ಬೆಳಗೋಡ್ ಹಾಳ್‌ನಲ್ಲಿ 101 ಮುತ್ತೈದೆಯರಿಗೆ ಉಡಿ ತುಂಬಿದ ಶಾಸಕರ ಪತ್ನಿ ಶ್ರೀದೇವಿ ಗಣೇಶ್

ತಾಯಂದಿರಿಗೆ ತವರು ಮನೆಯ ಪ್ರೀತಿಯ ಉಡುಗೊರೆ.

ಕಂಪ್ಲಿ: ಪ್ರತಿಯೊಬ್ಬ ಮಹಿಳೆಗೂ ತನ್ನ ತವರು ಮನೆಯಿಂದ ಬರುವ ಸೀರೆ ಮತ್ತು ಉಡಿ ತುಂಬುವ ಶಾಸ್ತ್ರ ಕೇವಲ ಸಂಪ್ರದಾಯವಲ್ಲ, ಅದೊಂದು ಭಾವನಾತ್ಮಕ ಬೆಸುಗೆ. ಮಹಿಳೆಯೇ ಇಡೀ ಕುಟುಂಬದ ಆಧಾರ ಸ್ತಂಭವಾಗಿದ್ದು, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ದೇಶದ ಅತ್ಯುತ್ತಮ ಪ್ರಜೆಯನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ಅವಳ ಮೇಲಿದೆ ಎಂದು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರ ಧರ್ಮಪತ್ನಿ ಶ್ರೀಮತಿ ಶ್ರೀದೇವಿ ಜಿ.ಎನ್.ಗಣೇಶ್ ಅಭಿಪ್ರಾಯಪಟ್ಟರು.

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ನಂ.10 ಮುದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಗೋಡ್‌ ಹಾಳ್ ಗ್ರಾಮದ ಶ್ರೀ ಕೆಂಚಮ್ಮ ದೇವಸ್ಥಾನದ ಮುಂಭಾಗದಲ್ಲಿ ಈ ಭವ್ಯ ಕಾರ್ಯಕ್ರಮ ಜರುಗಿತು. ದಿವಂಗತ ಜೆ.ಎನ್.ವೆಂಕೋಬಣ್ಣ ಹೊಸಪೇಟೆ ಅವರ ಪುಣ್ಯ ಸ್ಮರಣೆಯ ಆಶೀರ್ವಾದದೊಂದಿಗೆ, ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಫೌಂಡೇಶನ್ ಹಾಗೂ ಯುವ ಮುಖಂಡ ದೊಡ್ಡ ಬಸವರಾಜ ಬಡಗಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದ ಅಂಗವಾಗಿ ಈ ಸಡಗರದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶುಭ ಶುಕ್ರವಾರದ ಸಾಯಂಕಾಲದ ಸುಸಂದರ್ಭದಲ್ಲಿ 101 ಜನ ಮುತ್ತೈದೆಯರಿಗೆ ಉಚಿತ ಸೀರೆ ವಿತರಿಸಿ, ಉಡಿ ತುಂಬುವ ಮಂಗಳಮಯ ಕಾರ್ಯಕ್ರಮಕ್ಕೆ ಶ್ರೀಮತಿ ಶ್ರೀದೇವಿ ಚಾಲನೆ ನೀಡಿದರು.

ಬೆಳಗೋಡ್ ಹಾಳ್ ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಶ್ರೀದೇವಿ ಗಣೇಶ್, “ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಉಡಿ ತುಂಬುವ ಪದ್ಧತಿಗೆ ವಿಶೇಷ ಗೌರವವಿದೆ. ಇಂತಹ ಶ್ರೇಷ್ಠ ಸಂಪ್ರದಾಯವನ್ನು ಗ್ರಾಮೀಣ ಭಾಗದಲ್ಲಿ ಇಂದಿಗೂ ಜೀವಂತವಾಗಿಟ್ಟಿರುವುದು ಹೆಮ್ಮೆಯ ಸಂಗತಿ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಒಂದು ಸುಂದರ ಮತ್ತು ಸದೃಢ ಸಮಾಜ ನಿರ್ಮಾಣ ಸಾಧ್ಯ. ಮಗು ಬೆಳೆದು ದೇಶದ ಉತ್ತಮ ಪ್ರಜೆಯಾಗಬೇಕಾದರೆ ತಾಯಿಯೇ ಮೊದಲ ಗುರು” ಎಂದು ತಿಳಿಸಿದರು.

ನವೆಂಬರ್ 15ಕ್ಕೆ ಉಚಿತ ಸಾಮೂಹಿಕ ವಿವಾಹ ಮಹೋತ್ಸವ:

ನಂತರ ಮಾತನಾಡಿದ ಯುವ ಮುಖಂಡ ದೊಡ್ಡ ಬಸವರಾಜ ಬಡಗಿ ಅವರು, ಬೆಳಗೋಡ್ ಹಾಳ್ ಗ್ರಾಮದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂತಹ ಬೃಹತ್ ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗುತ್ತಿದೆ. ನವೆಂಬರ್ 15ರಂದು ಈ ಕಲ್ಯಾಣ ಮಹೋತ್ಸವ ನಡೆಯಲಿದ್ದು, ಇದರ ಮುನ್ನಡೆಯಾಗಿ ಶಾಸಕರ ಧರ್ಮಪತ್ನಿ ಶ್ರೀಮತಿ ಶ್ರೀದೇವಿ ಅತ್ತಿಗೆ ರವರ ದಿವ್ಯ ಸಮ್ಮುಖದಲ್ಲಿ 101 ಮಹಿಳೆಯರಿಗೆ ಗೌರವಪೂರ್ವಕವಾಗಿ ಉಡಿ ತುಂಬುವ ಶಾಸ್ತ್ರವನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕರ ಪತ್ನಿ ಶ್ರೀಮತಿ ಶ್ರೀದೇವಿ ಗಣೇಶ್ ಅವರನ್ನು ಗ್ರಾಮದ ಮಹಿಳೆಯರು ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ ಅತ್ಯಂತ ಪ್ರೀತಿಯಿಂದ ಸನ್ಮಾನಿಸಿ ಗೌರವಿಸಿದರು. ಈ ಮಂಗಳಕರ ಪ್ರಸಂಗದಲ್ಲಿ ಪ್ರಮುಖ ಮುಖಂಡರಾದ ವೈ.ವಿರುಪಣ್ಣ, ನಬೀ ಸಾಬ್, ಕೆ.ಗಂಗಾಧರ, ರಾಮಕೃಷ್ಣ, ರೇಣುಕಪ್ಪ, ಸುಭಾನ್, ಮಹಾಂತೇಶ, ದುರುಗಪ್ಪ, ರವಿಕುಮಾರ, ಮರಿಸ್ವಾಮಿ, ಬಡಿಗಿ ದುರುಗಪ್ಪ, ಬಡಗಿ ಹನುಮಂತಪ್ಪ,ದೇವರಾಜ್, ಗುರುಬಸವ, ಸಣ್ಣ ದುರುಗಪ್ಪ, ಲಕ್ಷ್ಮಣ, ಮಂಜುನಾಥ, ಹಾಗೂ ಮಹಿಳಾ ಮುಖಂಡರಾದ ಶಂಕ್ರಮ್ಮ, ಮರಿಯಮ್ಮ, ಜಿನಿಗಮ್ಮ, ಲಕ್ಷ್ಮಿ, ಶಾರದಮ್ಮ, ಮಲ್ಲಮ್ಮ, ಹುಲಿಗೆಮ್ಮ,ಹನುಮಂತಮ್ಮ, ರಾಧಾ, ರಾಧಿಕಾ, ಪಾರ್ವತಿ, ಮಂಜುಳಾ, ಮರಿಯಮ್ಮ, ಶರಣಮ್ಮ ಸೇರಿದಂತೆ ನೂರಾರು ಗ್ರಾಮೀಣ ಮಹಿಳೆಯರು, ಯುವಕರು ಮತ್ತು ಮುಗ್ಧ ಮಕ್ಕಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ಹೆಚ್ಚಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!