ಮಳೆಯಿಲ್ಲ ಬೆಳೆಯಿಲ್ಲ ಹೊಲದಲ್ಲಿ
ದಣಿಯಲು ಕೆಲಸವಿಲ್ಲ ಕೈಗಳಿಗಿಲ್ಲಿ
ವಲಸೆ ಹೋಗುವಂತಿಲ್ಲ
ದನಗಳಿಗಾಗಿಯೇ ಉಳಿವೆವು ಊರಲ್ಲಿ
ಒಣಮೇವು ಕೊಂಡು ಬಣವಿಗಿಲ್ಲಿ
ದನಕರ ಮೇಯಿಸಿ ಮಮತೆಯಲ್ಲಿ
ರೊಟ್ಟಿ ಮೊಸರುಂಡು ಮನೆಯಲ್ಲಿ
ಸುಮ್ಮನಿರುವೆವು ಬರದ ಕೋಪಕ್ಕಿಲ್ಲಿ
ಹೊಳೆವ ಬೆಳಕು ಪೂರ್ವದಲ್ಲಿ
ಬರವಿಲ್ಲ ರವಿಗೆ ಬೆಳಗಲಿಲ್ಲಿ
ಹಳೆಕಾಳು ತೈಲವಾಗಿ ಹಣತೆಯಲ್ಲಿ
ಬೆಳಗುತಿವೆ ನಲಿದು ದೀಪಾವಳಿಯಲ್ಲಿ
ವ್ಯಾಪಾರ ವ್ಯವಹಾರದ ಜಾಗದಲ್ಲಿ
ಬಣ್ಣಗಳು ಕುಣಿದು ಹಿಗ್ಗಿನಲ್ಲಿ
ಐಸಿರಿ ತೋರಿ ಕಂಗಳಲ್ಲಿ
ಬರವನ್ನೇ ಮರೆಸಿವೆ ಹಬ್ಬದಲ್ಲಿ
ಹೂವು ಕುಂಬಳ ಬಾಳೆಗಳಿಲ್ಲಿ
ಬರವಿಲ್ಲದೆ ಮಾರಿ ದುಬಾರಿಯಲ್ಲಿ
ಜಗಮಗಿಸುವ ದೀಪಗಳ ಬೆಳಕಿನಲ್ಲಿ
ಬರವೆಲ್ಲಿ ಎನ್ನುವಂತಿದೆ ದೀಪಾವಳಿಯಲ್ಲಿ
- ಕಲ್ಲಪ್ಪ ಕವಳಕೇರಿ ಮಂಗಳೂರು✍️
(ಕೊಪ್ಪಳ ಜಿಲ್ಲೆ )



















