ನಿರ್ಜನಹಾದಿ, ನಿಶ್ಯಬ್ದ ರಾತ್ರಿ,
ನಡೆದಾಡುತ್ತಿದ್ದೇನೆ ಒಬ್ಬನೇ ಮಾತ್ರ
ಬೀದಿ ದೀಪಗಳು ನಿದ್ದೆ ಹೋಗಿವೆ
ನನ್ನ ಹೆಜ್ಜೆ ಸದ್ದು ಮಾತ್ರ ಎಚ್ಚರವಿದೆ.
ಎಡಬದಿ ಕಬ್ಬಿನ ಗದ್ದೆ ಮೌನವಾಗಿದೆ,
ಬಲಬದಿ ಮನಸು ಏನೋ ಹುಡುಕಿದೆ. ಯಾರೂ ಇಲ್ಲದ ಈ ದಾರಿಯಲ್ಲಿ,
ನೂರು ಪ್ರಶ್ನೆಗಳು ನನ್ನ ಎದೆಯಲ್ಲಿ.
ಈ ಹಾದಿ ಕೇಳುತ್ತೆ – ಎಲ್ಲಿಗೆ ಹೋಗುತ್ತೀಯಾ?
ನಾನು ಹೇಳ್ತೀನಿ – ಗೊತ್ತಿಲ್ಲ,
ಆದರೂ ನಡೆಯುತ್ತಿದ್ದೇನೆ.
ಸೋಲು ಗೆಲುವಿನ ಲೆಕ್ಕ ಇಲ್ಲ ಇಲ್ಲಿ,
ನಡೆಯುವುದೊಂದೇ ಸತ್ಯ ಇಲ್ಲಿ.
ಒಂಟಿಯಾಗಿ ನಡೆಯುವುದೆಂದರೆ ದುಃಖವಲ್ಲ,
ಅದು ತನ್ನನ್ನು ತಾನು ಕಂಡುಕೊಳ್ಳುವ ಕಲೆ.
ನಿರ್ಜನ ಹಾದಿ ಖಾಲಿ ಇಲ್ಲ.
ಅದರ ತುಂಬೆಲ್ಲಾ ನನ್ನ ಕನಸುಗಳೇ ಇವೆ.
ದೂರದಲ್ಲಿ ಒಂದು ಬೆಳಕು ಕಾಣುತ್ತಿದೆ,
ಅದು ಬಹುಶಃ ನನ್ನ ಮನೆಯ ದೀಪವಿರಬೇಕು.
ಅಥವಾ ಲಕ್ಷ್ಮಿಯ ಕಣ್ಣಿನ ಹೊಳಪಿರಬೇಕು,
ನಿರ್ಜನ ಹಾದಿಯ ಕೊನೆಯಲ್ಲಿ ಬದುಕು ಇದೆ.
- ನಂದಿನಿ




















