ಹುನಗುಂದ : ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾನಗರ ಹುನಗುಂದದಲ್ಲಿ ಎನ್ ಎಸ್ ಎಸ್ ದಿನಾಚರಣೆ ನಿಮಿತ್ತವಾಗಿ ಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯ ಜೊತೆಗೆ ಮುಖ್ಯ ಅತಿಥಿಯಾಗಿ ಪ್ರಾಚಾರ್ಯರಾದ ಶ್ರೀ ಶರಣಪ್ಪ ಹೂಲಗೇರಿ ರಾಷ್ಟ್ರೀಯ ಸೇವಾ ಯೋಜನೆ ಯುವಕರಲ್ಲಿ ದೇಶ ಪ್ರೇಮ ಶಿಸ್ತು ಹಾಗೂ ಬದ್ಧತೆ ಯನ್ನು ಮೂಡಿಸುತ್ತದೆ. ಮಹಾತ್ಮ ಗಾಂಧೀಜಿಯವರ ಕನಸನ್ನು ನನಸು ಮಾಡುವ ಸದುದ್ದೇಶದಿಂದ ಅವರ ಜನ್ಮ ಶತಮಾನೋತ್ಸವ ಸವಿ ನೆನಪಿಗಾಗಿ 1969 ರಲ್ಲಿ ದೇಶದಾದ್ಯಂತ ಎನ್ ಎಸ್ ಎಸ್ ಘಟಕಗಳು ಪ್ರಾರಂಭಗೊಂಡವು.
ವೈಯಕ್ತಿಕ ಸ್ವಚ್ಛತೆ ಪರಿಸರ ಸಂರಕ್ಷಣೆ, ಆರೋಗ್ಯದ ಅರಿವುಗಳು ಮೂಡಿಸುವದು ಮುಖ್ಯ ಎಂದು ಹೇಳಿದರು. ಕಾರ್ಯಕ್ರಮ ಅಧಿಕಾರಿ ಆಯ್ ಎಚ್ ನಾಯಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸ್ವಯಂ ಸೇವಕ ಮಲ್ಲಪ್ಪ ದಿಂಡೂರ ನಿರೂಪಣೆ ಮಾಡಿದರೆ, ಹಿರಿಯ ಉಪನ್ಯಾಸಕರಾದ ಎಚ್ ಟಿ ಅಗಸಿಮುಂದಿನ ವಂದಿಸಿದರು.



















