ಕುಶಾಲನಗರ: ಕರ್ನಾಟಕ ರಕ್ಷಣಾ ವೇದಿಕೆಯ ಕುಶಾಲನಗರ ತಾಲ್ಲೂಕು ಘಟಕದ ಮಾಸಿಕ ಸಭೆಯು ತಾಲ್ಲೂಕು ಘಟಕದ ಅಧ್ಯಕ್ಷರಾದ ಬಿ.ಜೆ.ಅಣ್ಣಯ್ಯರವರ ನೇತೃತ್ವದಲ್ಲಿ ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಮುಖಂಡರುಗಳು, ಪದಾಧಿಕಾರಿಗಳು, ಸದಸ್ಯರುಗಳು ಇದ್ದು ಸಂಘಟನೆಯ ಆಗುಹೋಗುಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸುವುದರೊಂದಿಗೆ ನೂತನ ಸದಸ್ಯರುಗಳಾಗಿ ಉಸ್ಮಾನ್ ಮತ್ತು ಎಂ.ಕೆ. ಜಕ್ರೀಯರವರನ್ನು ಸಂಘಟನೆಗೆ ಸೇರ್ಪಡೆಗೊಳಿಸಲಾಯಿತು.
ಸಂಘಟನೆಯಲ್ಲಿ ಸುದೀರ್ಘ ಕಾಲಗಳಿಂದ ಉತ್ತಮವಾಗಿ ಸೇವೆ ನಿರ್ವಹಿಸಿದ ತಾಲ್ಲೂಕು ಘಟಕದ ಉಪಾಧ್ಯಕ್ಷರಾದ ಎಸ್.ಎಸ್.ಫಯಾಜ್ ಉದ್ದೀನ್ ರವರನ್ನು ಎಲ್ಲರ ಸಹಮತದೊಂದಿಗೆ ಕೊಡಗು ಜಿಲ್ಲಾ ಘಟಕಕ್ಕೆ ಆಯ್ಕೆ ಮಾಡಲಾಯಿತು.
ವರದಿ: ಪ್ರಿತುನ್ ಪೂವಣ್ಣ



















