
ಕಂಪ್ಲಿ: ಬಳ್ಳಾರಿ ಜಿಲ್ಲೆ ಕನ್ನಡ ಹಿತರಕ್ಷಕ ಸಂಘದ 56ನೇ ವಾರ್ಷಿಕೋತ್ಸವ ಹಾಗೂ 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪಟ್ಟಣದ ವೀರಶೈವ ಸಂಘದ ಆವರಣದಲ್ಲಿ ಶನಿವಾರ ಜರುಗಿದ ಸಮಾರಂಭದಲ್ಲಿ ಇತಿಹಾಸ ಸಂಶೋಧಕ ಹಾಗೂ ಉಪನ್ಯಾಸಕ ಶರಣಬಸಪ್ಪ ಕೋಲ್ಕಾರ್ ಅವರು ಕಂಪ್ಲಿ ನೆಲದ ಭವ್ಯ ಇತಿಹಾಸ ಮತ್ತು ಕನ್ನಡ ನಾಡು-ನುಡಿಯ ಶ್ರೀಮಂತಿಕೆಯನ್ನು ಬಿಚ್ಚಿಟ್ಟರು.
ಕಂಪ್ಲಿ ತಾಲೂಕು ಮಟ್ಟದಲ್ಲಿ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕನ್ನಡ ಮಾಧ್ಯಮದ ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕೆ.ಜ್ಯೋತಿ, ಎ.ಸುಮಯ್ಯ ನಾಜ್, ಜಿ.ಮಾನಸ ಮತ್ತು ಎನ್.ಸಂಧ್ಯಾ ಅವರಿಗೆ ಸನ್ಮಾನಿಸಲಾಯಿತು.
ಅದೇ ರೀತಿ ಆಂಗ್ಲ ಮಾಧ್ಯಮದ ದ್ವಿತೀಯ ಭಾಷೆ ಕನ್ನಡ ವಿಷಯದಲ್ಲಿ 100 ಕ್ಕೆ 100 ಅಂಕ ಗಳಿಸಿದ ಶಾರದಾ ವಿದ್ಯಾ ನಿಕೇತನ, ಶ್ರೀ ವಿದ್ಯಾಸಾಗರ ವಸತಿ ಪ್ರೌಢಶಾಲೆ, ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಚೇತನ ವಿದ್ಯಾನಿಕೇತನ, ಕ್ಲೀನ್ ಮೇರಿ ಪ್ರೌಢ ಶಾಲೆ, ಸಾಹಿತಿ ಪ್ರೌಢಶಾಲೆ, ಬೈಟ್ ವೇ ಪ್ರೌಢಶಾಲೆ, ನಿವೇದಿತಾ ಪ್ರೌಢಶಾಲೆ ಹಾಗೂ ರೇನೋ ಗ್ಲೋಬಾಲ್ ಪ್ರೌಢಶಾಲೆಯ ನೂರಾರು ಸಾಧಕ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ವಿವಿಧ ರಂಗದ ಸಾಧಕರಿಗೆ ಸನ್ಮಾನ :
ವಿಶೇಷ ಸಾಧನೆಗಾಗಿ ನೃತ್ಯ ಸಂಯೋಜಕ ಎಂ.ಎಸ್.ಮುನ್ನ, ಕುಸ್ತಿ ಪಟು ಇದಂಗಿ ಹುಲುಗಪ್ಪ, ಚಲನಚಿತ್ರ ನಿರ್ಮಾಪಕ ಶಂಕರ ಮೆಟ್ರಿ, ಕರ್ನಾಟಕ ಜಾನಪದ ಅಕಾಡೆಮಿಯ 2026ನೇ ಸಾಲಿನ ಪ್ರಶಸ್ತಿ ಪುರಸ್ಕೃತರಾದ ಎನ್. ಹುಸೇನ್ ಭಾಷ (ತಾಷಾರಾಂಡೋಲ್) ಹಾಗೂ ಸಾವಯವ ಕೃಷಿಕ ಎಂ.ಎಂ.ಬಸವರಾಜ, ರೈಫಲ್ ಶೂಟಿಂಗ್ ತರಬೇತುದಾರ ಸಿ.ಡಿ.ಚಿನ್ನರಾಜು, ಅಂತರಾಷ್ಟ್ರೀಯ ವಿಕಲಚೇತನ ಕ್ರೀಡಾಪಟು ರವಿಶಂಕರ್, ಯೋಗ ಉಪನ್ಯಾಸಕ ಡಿ.ಮಹೇಶ್ ಬಾಬು, ಯೋಗ ತರಬೇತಿದಾರರಾದ ಡಿ.ಮೌನೇಶ್, ನಾಗಪ್ಪ ಕಂಬಳಿ ಹಾಗೂ ಸಾಮಾಜಿಕ ಸಾಧನೆಗಾಗಿ ಕಾಲಿಂಗವರ್ಧನ ಹಾದಿಮನಿ ಅವರಿಗೆ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಜೆ.ಎನ್.ಗಣೇಶ್, ತಾಲೂಕು ವೀರಶೈವ ಸಂಘದ ಅಧ್ಯಕ್ಷರಾದ ಎಸ್.ಎಂ.ನಾಗರಾಜ ಸ್ವಾಮಿ, ಇತಿಹಾಸ ಸಂಶೋಧಕ ಹಾಗೂ ಉಪನ್ಯಾಸಕ ಶರಣಬಸಪ್ಪ ಕೋಲ್ಕಾರ್, ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಉಪಸ್ಥಿತರಿದ್ದರು.
ಕನ್ನಡ ಹಿತರಕ್ಷಕ ಸಂಘದ ಅಧ್ಯಕ್ಷ ಬೂದುಗುಂಪಿ ಅಂಬಣ್ಣ, ಕಾರ್ಯದರ್ಶಿ ಸಿ.ಯಂಕಪ್ಪ, ಗೌರವ ಅಧ್ಯಕ್ಷ ಕ.ಮ.ಹೇಮಯ್ಯ ಸ್ವಾಮಿ, ಖಜಾಂಚಿ ಮಾ. ಶ್ರೀನಿವಾಸ ಹಾಗೂ ಪದಾಧಿಕಾರಿಗಳಾದ ಕೆ. ಮೆಹಬೂಬ್ , ಬಂಗಿ ದೊಡ್ಡ ಮಂಜುನಾಥ, ಅಂಬಿಗರ ಮಂಜುನಾಥ ಶಾಮ್ ಸುಂದರ್, ಇಂದ್ರಜಿತ್ ಸಿಂಗ್, ಅಯೋಧ್ಯೆ ವೆಂಕಟೇಶ ಉಪಸಿತರಿದ್ದರು.
ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.
ವರದಿ : ಜಿಲಾನಸಾಬ್ ಬಡಿಗೇರ್



















