ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಮ್ಮೆರಾಯನಿಗೆ ಆರತಿ, ಗೌರಮ್ಮನಿಗೆ ಹರಕೆ; ಮುದ್ದಾಪುರದಲ್ಲಿ ದೀಪಾವಳಿ ಹಬ್ಬದ ಸಡಗರದ ಸಡಲಿಕೆ ಇಲ್ಲದ ಹಳ್ಳಿ ಸೊಬಗು.

ಕಂಪ್ಲಿ: ಕಾಲ ಬದಲಾದ್ರೂ ನಮ್ಮ ಹಳೇ ಕಾಲದ ನಂಬಿಕೆ, ನಡಾವಳಿಗಳು ಮಾತ್ರ ಮಾಸಿಲ್ಲ ಅನ್ನೋದಕ್ಕೆ ಕಂಪ್ಲಿ ಸೀಮೆಯ ದೀಪಾವಳಿ ಹಬ್ಬದ ಈ ಸಂಭ್ರಮವೇ ಸಾಕ್ಷಿ. ಬೆಳಕಿನ ಹಬ್ಬದ ಸಡಗರದ ನಡುವೆಯೇ, ಇಲ್ಲಿನ ಹಳ್ಳಿಗಾಡಿನ ಮಣ್ಣಿನ ವಾಸನೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವ ಅಪರೂಪದ ಆಚರಣೆಗಳು ಇಂದಿಗೂ ಜೀವಂತವಾಗಿವೆ.
ತಾಲ್ಲೂಕಿನ ನಂ. 10 ಮುದ್ದಾಪುರ ಗ್ರಾಮದಲ್ಲಿ ಬಲಿಪಾಡ್ಯಮಿಯ ದಿನದಂದು ಕಂಡುಬಂದ ಹಳ್ಳಿ ಸೊಬಗಿನ ವಿಶೇಷ ವರದಿ ಇಲ್ಲಿದೆ.

ಎಮ್ಮೆರಾಯನಿಗೆ ಸಿಂಗಾರ, ಭಕ್ತಿ ಗೌರವ

ಹೈನುಗಾರಿಕೆಯನ್ನೇ ನಂಬಿ ಬದುಕುವ ಇಲ್ಲಿನ ಗೌಳಿ ಸಮುದಾಯದ ಜನರಿಗೆ ದೀಪಾವಳಿ ಬಂತೆಂದರೆ ಎಲ್ಲಿಲ್ಲದ ಸಂಭ್ರಮ. ಬಲಿಪಾಡ್ಯಮಿಯ ದಿನದಂದು ತಮಗೇ ಅನ್ನ ನೀಡುವ ಕರಾವಳಿ-ಎಮ್ಮೆಗಳನ್ನು ದೇವರೆಂದೇ ಭಾವಿಸಿ ಪೂಜಿಸುವುದು ಇವರ ತಲೆತಲಾಂತರದ ರೂಢಿ. ಗ್ರಾಮದ ಸುಮಾರು 70 ಗೌಳಿ ಕುಟುಂಬಗಳು ಸಾಕಿರುವ 200ಕ್ಕೂ ಹೆಚ್ಚು ಎಮ್ಮೆಗಳಿಗೆ ಅಂದು ಮೈತೊಳೆದು, ಕೊಂಬುಗಳಿಗೆ ಬಣ್ಣ ಹಚ್ಚಿ, ಹೂವಿನ ಹಾರ ಹಾಕಿ ಸಕಲ ಸಡಗರದಿಂದ ಶೃಂಗರಿಸಲಾಗುತ್ತದೆ.
ಮನೆ ಅಂಗಳದಲ್ಲಿ ಪಾಂಡವರ ಪ್ರತೀಕವಾಗಿ ಇಡುವ ಮೂರ್ತಿಗಳ ಮುಂದೆ ಈ ಎಮ್ಮೆಗಳು ಮೊಣಕಾಲೂರಿ ನಮಸ್ಕರಿಸುವ ದೃಶ್ಯ ನೋಡುಗರ ಕಣ್ಣಿಗೆ ಹಬ್ಬ.
ಈ ಭಕ್ತಿ ಸಮರ್ಪಣೆಯ ನಂತರ, ಬಸವೇಶ್ವರ ದೇವಸ್ಥಾನದಿಂದ ಮಾರೆಷ್ಟು ದೇವಸ್ಥಾನದವರೆಗೆ ಇಡೀ ಊರೇ ಸೇರಿ ಎಮ್ಮೆಗಳ ಭವ್ಯ ಮೆರವಣಿಗೆ ನಡೆಸಿ ಹಬ್ಬದ ಕಳೆಯನ್ನು ಹೆಚ್ಚಿಸುತ್ತಾರೆ.

ಇದೇ ವೇಳೆ ಗೌಳಿ ಸಮುದಾಯದ ಹೆಣ್ಣುಮಕ್ಕಳು ತಮ್ಮ ಸಂಸಾರದ ಒಳಿತಿಗಾಗಿ, ಪತಿ-ಮಕ್ಕಳ ಆಯುಷ್ಯ ಆರೋಗ್ಯಕ್ಕಾಗಿ ಗೌರಮ್ಮನ ವ್ರತವನ್ನು ಅತ್ಯಂತ ನಿಷ್ಠೆಯಿಂದ ಆಚರಿಸುತ್ತಾರೆ. ಹರಕೆ ಹೊತ್ತ ಮುತ್ತೈದೆಯರು ಭಕ್ತಿಭಾವದಿಂದ ಪೂಜೆ ಸಲ್ಲಿಸಿ, ಹಳ್ಳಿಯ ಸೌಭಾಗ್ಯದ ಸಂಕೇತವಾಗಿ ಈ ಆಚರಣೆಯನ್ನು ಇಂದಿಗೂ ಹಸಿರಾಗಿಟ್ಟಿದ್ದಾರೆ.
ನಾಗರಿಕತೆಯ ಅಬ್ಬರದಲ್ಲಿ ಗ್ರಾಮೀಣ ಸೊಗಡಿನ ಇಂತಹ ಆಚರಣೆಗಳು ಮರೆಯಾಗುತ್ತಿರುವ ಈ ದಿನಗಳಲ್ಲಿ, ಮುದ್ದಾಪುರದ ಗೌಳಿ ಸಮುದಾಯದವರು ತಮ್ಮ ಸಾಂಪ್ರದಾಯಿಕ ಮೆರುಗನ್ನು ಉಳಿಸಿಕೊಂಡು ಬಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!