ಚಿಲೂರಬಡ್ನಿ ಸರ್ಕಾರಿ ಶಾಲೆಯ ಶಿಕ್ಷಕನಿಗೆ ಒಲಿದ ಸುದೀರ್ಘ ಸೇವಾ ಪದಕ.
ಪ್ರಾಮಾಣಿಕತೆ, ದಕ್ಷತೆಯ ಸೇವೆಗೆ ಸಂದ ಉನ್ನತ ಗೌರವ
ಸವಣೂರು : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ, ಸ್ಕೌಟಿಂಗ್ ಕ್ಷೇತ್ರದಲ್ಲಿ 25 ವರ್ಷಗಳ ಕಾಲ ಸುದೀರ್ಘ ಹಾಗೂ ಅನನ್ಯ ಸೇವೆ ಸಲ್ಲಿಸಿದ ಚಿಲೂರಬಡ್ನಿಯ ಪಿಎಂ ಶ್ರೀ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ ಶಿಕ್ಷಕ ಹಾಗೂ ಎಲ್.ಟಿ. (ಸ್ಕೌಟ್) ವಿದ್ಯಾಧರ ಯು. ಕುತನಿ ಅವರಿಗೆ ಸವಣೂರಿನಲ್ಲಿ ಸೇವಾ ಪ್ರಮಾಣಪತ್ರ ಹಾಗೂ ಪದಕ ನೀಡಿ ಗೌರವಿಸಲಾಯಿತು.
ಸೇವೆಯ ನಿರಂತರತೆಗೆ ಸಂದ ಮನ್ನಣೆ
ಸ್ಕೌಟ್ ಮತ್ತು ಗೈಡ್ಸ್ ಕ್ಷೇತ್ರದಲ್ಲಿ ಅವರು ತೋರಿದ ಪ್ರಾಮಾಣಿಕತೆ, ದಕ್ಷತೆ, ಸೇವಾ ಮನೋಭಾವನೆ ಹಾಗೂ ಸಮಯ ಪ್ರಜ್ಞೆಯ ನಿರಂತರ ಸೇವೆಯನ್ನು ಪರಿಗಣಿಸಿ ಈ ಉನ್ನತ ಗೌರವವನ್ನು ನೀಡಲಾಗಿದೆ.
ವಿದ್ಯಾಧರ ಕುತನಿ ಅವರ ಈ ಸಾಧನೆಗೆ ಚಿಲೂರಬಡ್ನಿ ಶಾಲೆಯ ಮುಖ್ಯಗುರುಗಳಾದ ಎನ್.ಎಸ್. ಹಿರೇಮಠ, ಶಾಲಾ ಶಿಕ್ಷಕ ವೃಂದ, ಎಸ್‌ಡಿಎಂಸಿ ಅಧ್ಯಕ್ಷರಾದ ಮುತ್ತಪ್ಪ ತುರಬಿ ಹಾಗೂ ಸರ್ವ ಸದಸ್ಯರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯ ಆಯುಕ್ತರಾದ ಮೋಹನ್ ದಂಡಿನ, ಜಿಲ್ಲಾ ಸ್ಥಳಿಕ ಆಯುಕ್ತರಾದ ಎಂ.ಎಫ್. ಬಾರ್ಕಿ, ಜಿಲ್ಲಾ ಕಾರ್ಯದರ್ಶಿ ಪಿ.ಆರ್. ಚಿಕ್ಕಳ್ಳಿ, ಪ್ರಮುಖರಾದ ಎಂ.ಆರ್. ಪಾಟೀಲ್, ಜಿಲ್ಲಾ ತರಬೇತಿ ಆಯುಕ್ತರಾದ ಶೋಭಾ ಪಾಟೀಲ, ಜಿಲ್ಲಾ ಸಂಘಟಕರಾದ ಅನ್ನಪೂರ್ಣ ಕಟಗಿ, ಸವಣೂರು ತಾಲೂಕು ಅಧ್ಯಕ್ಷರಾದ ನಂದೀಶ ಹಾವನಗಿ ಸೇರಿದಂತೆ ಜಿಲ್ಲೆ ಹಾಗೂ ತಾಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















