ಸಹಕಾರಿ ಸಿಬ್ಬಂದಿಗಳ ಜ್ಞಾನಾಭಿವೃದ್ಧಿಗೆ ನೌಕರರ ಸಂಘದ ವಿನೂತನ ಪ್ರಯತ್ನ – ರಾಜ್ಯಾಧ್ಯಕ್ಷ ಅಮರೇಶ ಸ್ವಾಮಿ.
ಸಹಕಾರ ಸಪ್ತಾಹ – 2026ರ ಅಂಗವಾಗಿ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಮತ್ತು ಸೌಹಾರ್ದ ಸಹಕಾರಿ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಹಕಾರ ಸಂಘಗಳ ಮತ್ತು ಸೌಹಾರ್ದ ಸಹಕಾರಿ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗಾಗಿ ರಾಜ್ಯಮಟ್ಟದ ಸಹಕಾರಿ ವಿಕಾಸನ ಪರೀಕ್ಷೆ – 2026 ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷರಾದ ಅಮರೇಶ ಸ್ವಾಮಿ ಅವರು ತಿಳಿಸಿದ್ದಾರೆ.
ಸಹಕಾರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಜ್ಞಾನಾಭಿವೃದ್ಧಿ, ವೃತ್ತಿಪರ ಕೌಶಲ್ಯ ವೃದ್ಧಿ ಹಾಗೂ ಸಹಕಾರ ಕಾಯ್ದೆ, ನಿಯಮಗಳು, ಉಪವಿಧಿಗಳು ಮತ್ತು ಸಹಕಾರ ಚಳವಳಿಯ ಕುರಿತು ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಈ ಪರೀಕ್ಷೆಯನ್ನು ಆಯೋಜಿಸಲಾಗಿದೆ.
ರಾಜ್ಯದ ಎಲ್ಲಾ ಮಾನ್ಯತೆ ಪಡೆದ ಸಹಕಾರ ಸಂಘಗಳು ಹಾಗೂ ಸೌಹಾರ್ದ ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಈ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಪರೀಕ್ಷೆಯ ಪ್ರಮುಖ ವಿವರಗಳು :
ಪರೀಕ್ಷೆಯ ಹೆಸರು: ಸಹಕಾರಿ ವಿಕಾಸನ ಪರೀಕ್ಷೆ – 2026
ನೋಂದಣಿಯ ಕೊನೆಯ ದಿನಾಂಕ: 12-11-2026
ಪರೀಕ್ಷಾ ಶುಲ್ಕ: ಪ್ರತಿ ಅಭ್ಯರ್ಥಿಗೆ ₹100/-
ಪರೀಕ್ಷೆಯ ದಿನಾಂಕ: ನಂತರ ತಿಳಿಸಲಾಗುವುದು.
ಪರೀಕ್ಷಾ ಸ್ಥಳ: ನಂತರ ತಿಳಿಸಲಾಗುವುದು.
ಈ ಕುರಿತು ಮಾತನಾಡಿದ ಸಂಘದ ರಾಜ್ಯಾಧ್ಯಕ್ಷರಾದ ಅಮರಯ್ಯ ಸ್ವಾಮಿ ಸಾಲಿಮಠ ಅವರು, ಸಹಕಾರ ಕ್ಷೇತ್ರದ ಸಿಬ್ಬಂದಿಗಳು ಕೇವಲ ದೈನಂದಿನ ಆಡಳಿತಾತ್ಮಕ ಕಾರ್ಯಗಳಿಗೆ ಸೀಮಿತವಾಗದೆ, ಸಹಕಾರ ಕಾಯ್ದೆ, ನಿಯಮಗಳು ಹಾಗೂ ಸಹಕಾರ ತತ್ವಗಳ ಬಗ್ಗೆ ಸಮಗ್ರ ಜ್ಞಾನ ಹೊಂದುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ, ಜ್ಞಾನ ಮತ್ತು ವೃತ್ತಿಪರ ಸಾಮರ್ಥ್ಯವನ್ನು ಬೆಳೆಸಲು ಈ ಪರೀಕ್ಷೆ ಸಹಕಾರಿಯಾಗಲಿದೆ. ರಾಜ್ಯದ ಎಲ್ಲಾ ಸಹಕಾರಿ ಸಂಘಗಳ ಆಡಳಿತ ಮಂಡಳಿಗಳು, ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಚಿರಂಜೀವಿ – ಪ್ರಧಾನ ಕಾರ್ಯದರ್ಶಿಗಳು
ಮೊಬೈಲ್: 97391 89676
ಶಿವ ಜ್ಞಾನಪ್ಪ – ಸಹಕಾರ್ಯದರ್ಶಿಗಳು
ಮೊಬೈಲ್: 99014 42103.



















