ಕಂಪ್ಲಿ: ಪಟ್ಟಣದ ವೀರಶೈವ ಭವನದ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯಲಿರುವ ಎರಡನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಷ್ಟ್ರಧ್ವಜ, ನಾಡಧ್ವಜ ಮತ್ತು ಪರಿಷತ್ತಿನ ಬಾವುಟಗಳ ಧ್ವಜಾರೋಹಣ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಜಿಲ್ಲಾಧ್ಯಕ್ಷರ ಮಾತುಗಳು :
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ನಿಷ್ಠಿ ರುದ್ರಪ್ಪ ಅವರು ಹಾಗೂ ತಾಲೂಕು ಅಧ್ಯಕ್ಷರಾದ ಷಣ್ಮುಖಪ್ಪ ಚಿತ್ರಗಾರ್ ಅವರು, “ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ ಬೆಳೆಸುವಲ್ಲಿ ಇಂತಹ ಸಾಹಿತ್ಯ ಸಮ್ಮೇಳನಗಳು ಇಂದಿನ ಅತ್ಯಗತ್ಯವಾಗಿವೆ” ಎಂದು ಅಭಿಪ್ರಾಯಪಟ್ಟರು.
ಸಮ್ಮೇಳನಾಧ್ಯಕ್ಷರು: ಬಂಗಿ ದೊಡ್ಡ ಮಂಜುನಾಥ್.
ಪ್ರಮುಖರಾದ ಬಸವನಗೌಡ, ವೆಂಕಟರೆಡ್ಡಿ, ಬಸವರಾಜ್, ಕಾಳಿಂಗ, ವರ್ಧನ, ಹೇಮಯ್ಯಸ್ವಾಮಿ, ರಾಘವೇಂದ್ರ. ಸುನಿಲ್ ಕುಮಾರ್, ರಾಜು, ಜಿಲಾನ ಬಡಿಗೇರ್ , ಎಸ್. ರಾಮಪ್ಪ, ಮುದುಕಪ್ಪ, ಶ್ಯಾಮ್ ಸುಂದರ್.
ಕಸಾಪ ಪದಾಧಿಕಾರಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ವಾದ್ಯ ತಂಡಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶ್ರೀ ವಿವೇಕಾನಂದ ಶಾಲೆ ಕೋಟೆ ಕಂಪ್ಲಿಯ ವಿದ್ಯಾರ್ಥಿಗಳು ರಾಷ್ಟ್ರಧ್ವಜ, ನಾಡಗೀತೆಯನ್ನು ಹಾಡಿ ಗೌರವ ವಂದನೆ ಸಲ್ಲಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















