ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕುಶಾಲನಗರದ ದಿ ನೆಸ್ಟ್ ವುಡ್ ಡೆಕೋರ್ ಮಳಿಗೆಯ ನಾಮಪಲಕದಲ್ಲಿ ಕನ್ನಡ ಕಡೆಗಣನೆ: ಕ.ರವೇ.ಯಿಂದ ತರಾಟೆ, ದಂಡ ಪಾವತಿ

ಕುಶಾಲನಗರ: ತಾವರೆಕೆರೆ ಪಕ್ಕದಲ್ಲಿರುವ ಕೆ ಜಿ ಎಸ್ ಸ್ವಾಮಿಲ್ ಮಳಿಗೆಯಲ್ಲಿ “ದಿ ನೆಸ್ಟ್ ವುಡ್ ಡೆಕೋರ್” ಎಂಬ ಮಳಿಗೆಯಲ್ಲಿ ಕನ್ನಡ ನಾಮಫಲಕ ಕೇವಲ ೧೦ಭಾಗದಷ್ಟಿದ್ದು‌ ಆಂಗ್ಲ ಭಾಷೆ ೯೦ ಭಾಗದಷ್ಟು ಇರುವುದು ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಗಮನಕ್ಕೆ ಬಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸರ್ಕಾರವೂ ಕನ್ನಡ ನಾಮಫಲಕವನ್ನು ೬೦% ಭಾಗದಷ್ಟು ಹಾಕಲೇಬೇಕೆಂದು ಆದೇಶ ಮಾಡಿದ್ದರೂ ಅಂಗಡಿ ಮಾಲೀಕರಿಗೆ ಇದು ತಿಳಿದಿದೆಯೋ ಇಲ್ಲವೋ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ ಈ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಿದೆ. ಇದನ್ನು ಅರಿತ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಅಂಗಡಿಯ ಮಾಲೀಕರಿಗೆ ತಿಳಿ ಹೇಳಲು ಹೋದಾಗ ಅಂಗಡಿಯ ಮಾಲೀಕರು ಮತ್ತು ಅವರ ಮಕ್ಕಳು ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಜೊತೆ ಮಾತಿನ ಚಕಾಮಕಿ ನಡೆಯಿತು.

ನಂತರ ಪುರಸಭೆಯ ಅಧಿಕಾರಿಗಳಿಗೆ ರಕ್ಷಣಾ ವೇದಿಕೆ ಪದಾಧಿಕಾರಿಗಳು ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಬರುವುದಾಗಿ ತಿಳಿಸಿದರು .ಸ್ಥಳಕ್ಕೆ ಭೇಟಿ ನೀಡಿದ ಪುರಸಭೆಯ ಅಧಿಕಾರಿಗಳಾದ ನಿಶಾ ರಾಘವನ್ ಮತ್ತು ಉದಯಕುಮಾರ್ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಜೊತೆ ಮಾತನಾಡಿ ಅಂಗಡಿಯ ಮಾಲೀಕರಿಗೆ ಕನ್ನಡ ನಾಮಫಲಕ ಇಲ್ಲದ ಕಾರಣ 2000 ಸಾವಿರ ರೂಪಾಯಿ ದಂಡವನ್ನು ಹಾಕಿದ್ದಾರೆ. ಹಾಗೂ ಒಂದು ವಾರದೊಳಗೆ ಆಂಗ್ಲ ಭಾಷೆ ನಾಮ ಫಲಕವನ್ನು ತೆರವುಗೊಳಿಸದಿದ್ದರೆ ದೊಡ್ಡ ಮೊತ್ತದ ತಂಡವನ್ನು ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕ.ರವೇ.
ಕುಶಾಲನಗರ ಮಹಿಳಾ ತಾಲ್ಲೂಕು ಗೌರವಾಧ್ಯಕ್ಷ ಪುಟ್ಟಮ್ಮ,ತಾಲ್ಲೂಕು ಅಧ್ಯಕ್ಷರು ಪುಟ್ಟಸ್ವಾಮಿ ,ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಕೆ. ಚಂದ್ರು, ಮಹಿಳಾ ತಾಲ್ಲೂಕು ಜಂಟಿ ಕಾರ್ಯದರ್ಶಿ ಪ್ರೇಮ, ಜಿಲ್ಲಾ ಕಾರ್ಯದರ್ಶಿ ಸತೀಶ್, ರಾಜೇಗೌಡ, ಕಾರ್ತಿಕ್ ,ರಮೇಶ್ ಆವರ್ತಿ ಹಾಗೂ ಸುಂದರೇಶ್ ಇತರರು ಉಪಸ್ಥಿತರಿದ್ದರು.

ವರದಿ : ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!