ನಿರುತ್ತರ ಬದುಕಿನಲಿ ಪ್ರಶ್ನೆಗಳೇ ಎಲ್ಲಾ.
ಗೋಚರಿಸದ ದಿನಗಳಲಿ ಪ್ರಶ್ನೆಗಳೇ ಎಲ್ಲಾ.
ಉರಿವ ಬೆಂಕಿಯ ನೋವು ಯಾರಿಗೂ ತಿಳಿಯದು.
ಬೇಡವೆಂದರೂ ಸಿಗುವ ಸೋಲಲಿ ಪ್ರಶ್ನೆಗಳೇ ಎಲ್ಲಾ.
ಪಾಪ ಎಷ್ಟೊಂದು ಕ್ಷಣಿಕ ಈ ಹೂವಿನ ಆಯಸ್ಸು.
ಏನಿದು ದುರಂತ ಹೂವಿನ ಹುಟ್ಟಲಿ ಪ್ರಶ್ನೆಗಳೇ ಎಲ್ಲಾ.
ತೇಲಿಬಂದವು ಅಗಣಿತ ಜೀವಗಳು ನದಿಗಳಲಿ
ಈಗ ಮಡಿವಂತಿಗೆಯ ಮನಸಲಿ ಪ್ರಶ್ನೆಗಳೇ ಎಲ್ಲಾ.
ಸೊನ್ನೆಯೊಂದಿರದಿದ್ದರೆ ಲೆಕ್ಕದಲಿ ಲೆಕ್ಕವೇನದು?
ಕಂಡಿವೆ ಸರಿದ ಸಮಯದಲಿ ಪ್ರಶ್ನೆಗಳೇ ಎಲ್ಲಾ
- ರವಿ.ವಿಠ್ಠಲ. ಆಲಬಾಳ.
(ಕನ್ನಡಿಗ ರವಿ)




















