
ಕುಶಾಲನಗರ: ಪಿ.ಎಂ. ಶ್ರೀ ಶಾಲೆಯ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕೆ.ಆರ್.ಪ್ರಿಶ ಎಂಬ ಪ್ರತಿಭಾನ್ವಿತ ವಿದ್ಯಾರ್ಥಿನಿ 1 ರಿಂದ 4 ನೇ ತರಗತಿಯ ವಿಭಾಗದಿಂದ ಆಯ್ಕೆಗೊಂಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ – ಕಲೋತ್ಸವ 2026 -27 ರ ಸ್ಪರ್ಧೆಯಲ್ಲಿ ಭಾಗವಹಿಸಿ ಭಗವದ್ಗೀತೆಯ ದ್ವಾದಶೋಧ್ಯಾಯದ ಭಕ್ತಿಯೋಗದ ಶ್ಲೋಕಗಳನ್ನು ಪಠಿಸಿ ಪ್ರಥಮ ಬಹುಮಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
ಈ ಬಾಲಕಿ ಅತ್ತೂರು ಗ್ರಾಮದ, ಕ.ರ.ವೇ.
ಉಪಾಧ್ಯಕ್ಷರಾದ ಕೆ.ಆರ್.ರಾಜೇಶ್ ಹಾಗೂ ಎಸ್. ದಿವ್ಯ ದಂಪತಿಯ ಪುತ್ರಿ.
ವರದಿ: ಪ್ರಿತುನ್ ಪೂವಣ್ಣ




















