ಕಂಪ್ಲಿ: ಧಾರವಾಡದಲ್ಲಿ ನವೆಂಬರ್ 19 ರಿಂದ 21ರವರೆಗೆ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಕುಸ್ತಿ ಪಂದ್ಯಾವಳಿಯಲ್ಲಿ ಕಂಪ್ಲಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ (ಕಲಾ ವಿಭಾಗ) ವಿದ್ಯಾರ್ಥಿನಿ ಕುಮಾರಿ ಬಿಂಗಿ ತೇಜಸ್ವಿನಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
72 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಇವರು ಚಿನ್ನದ ಪದಕದೊಂದಿಗೆ ತಾಲೂಕಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಮಾರಪ್ಪ, ಉಪನ್ಯಾಸಕರು, ಸಿಬ್ಬಂದಿ ವರ್ಗ, ಪೋಷಕರು, ಬೀರಲಿಂಗೇಶ್ವರ ದೈಹಿಕ ಶಿಕ್ಷಕರು ಹಾಗೂ ತರಬೇತುದಾರ ವಿನಾಯಕ್ ವೆಂಕಂಜಿ ಅಭಿನಂದಿಸಿ, ರಾಷ್ಟ್ರಮಟ್ಟದಲ್ಲೂ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















