ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಳೆಯ ಸಂಪ್ರದಾಯಕ್ಕೆ ಹೊಸ ಮೆರುಗು: ಎತ್ತಿನ ಗಾಡಿಯಲ್ಲಿ ಮದುಮಗನ ಅದ್ದೂರಿ ಮೆರವಣಿಗೆ

‘ಉಳುವ ಯೋಗಿ ನೋಡಿರಲಿ’ ಹಾಡಿಗೆ ರೈತರ ಭರ್ಜರಿ ಕುಣಿತ !

ಕಾಳಗಿ ತಾಲೂಕಿನ ಚಿಂಚೋಳಿ (ಹೆಚ್) ಗ್ರಾಮದಲ್ಲಿ ವಿನೂತನ ಮದುವೆ ಸಂಭ್ರಮ – ಗ್ರಾಮೀಣ ಸಂಸ್ಕೃತಿ ಮತ್ತು ರೈತರ ಒಗ್ಗಟ್ಟಿಗೆ ಸಾಕ್ಷಿಯಾದ ವಿವಾಹ ಸಮಾರಂಭ.

ಚಿಂಚೋಳಿ (ಹೆಚ್), ನ.22: ಕಾಳಗಿ ತಾಲೂಕಿನ ಚಿಂಚೋಳಿ (ಹೆಚ್) ಗ್ರಾಮದ ಪ್ರಗತಿಪರ ರೈತ ಮಶಾಕ್ ಪಟೇಲ್ ಅವರ ಪುತ್ರ ಯೂಸೂಫ್ ಪಟೇಲ್ ಹಾಗೂ ಉಸ್ಮಾನ್ ಪಟೇಲ್ ಅವರ ಪುತ್ರಿಯ ವಿವಾಹ ಸಮಾರಂಭವು ದಿನಾಂಕ 22-11-2026ರ ಭಾನುವಾರ ಸಂಜೆ ಅತ್ಯಂತ ಅದ್ದೂರಿಯಾಗಿ, ಸಂಭ್ರಮದಿಂದ ಹಾಗೂ ವಿನೂತನ ರೀತಿಯಲ್ಲಿ ಜರುಗಿತು.
ಇಂದಿನ ಆಧುನಿಕ ಯುಗದಲ್ಲಿ ಮದುವೆ ಸಮಾರಂಭಗಳು ವಿಭಿನ್ನ ಶೈಲಿಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ, ನಮ್ಮ ಗ್ರಾಮೀಣ ಸಂಸ್ಕೃತಿ, ಪರಂಪರೆ ಮತ್ತು ಹಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಮಶಾಕ್ ಪಟೇಲ್ ಅವರ ಕುಟುಂಬದವರು ತಮ್ಮ ಪುತ್ರನ ಮದುವೆಯನ್ನು ವಿಶೇಷ ರೀತಿಯಲ್ಲಿ ಆಚರಿಸಿದ್ದು ಎಲ್ಲರ ಗಮನ ಸೆಳೆಯಿತು.
ರೈತ ಮುಖಂಡರು, ರೈತರು ಹಾಗೂ ಗ್ರಾಮಸ್ಥರು ಒಗ್ಗೂಡಿ ಮದುಮಗ ಇಸುಪ್ ಪಟೇಲ್ ಅವರನ್ನು ಹಿಂದಿನ ಕಾಲದ ಸಂಪ್ರದಾಯದಂತೆ ಸುಂದರವಾಗಿ ಅಲಂಕರಿಸಿದ ಎತ್ತಿನ ಗಾಡಿಯಲ್ಲಿ ಕೂರಿಸಿ ಮೆರವಣಿಗೆ ನಡೆಸಿದರು. ಹಲಗಿ ಬಾಜೆಯ ಸದ್ದಿನೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತಿನ ಗಾಡಿಯ ಮೆರವಣಿಗೆ ಸಾಗುತ್ತಿದ್ದ ದೃಶ್ಯವು ಗ್ರಾಮೀಣ ಸಂಸ್ಕೃತಿಯ ವೈಭವವನ್ನು ಮತ್ತೊಮ್ಮೆ ನೆನಪಿಸಿತು.
ಇನ್ನೂ ವಿಶೇಷವೆಂದರೆ, ರೈತರ ಬದುಕು, ಕೃಷಿಯ ಮಹತ್ವ ಮತ್ತು ಅನ್ನದಾತನ ಶ್ರಮವನ್ನು ಬಿಂಬಿಸುವ ‘ಉಳುವ ಯೋಗಿ ನೋಡಿರಲಿ’ ಎಂಬ ರೈತರ ನೆಚ್ಚಿನ ಹಾಡಿನೊಂದಿಗೆ ರೈತರು ಹಾಗೂ ರೈತ ಮುಖಂಡರು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು.
ರೈತರ ಒಗ್ಗಟ್ಟು, ಕೃಷಿಯ ಮೇಲಿನ ಅಭಿಮಾನ ಹಾಗೂ ಗ್ರಾಮೀಣ ಸಂಸ್ಕೃತಿಯ ಮೇಲಿನ ಪ್ರೀತಿಯನ್ನು ಈ ಮೆರವಣಿಗೆ ಎತ್ತಿ ತೋರಿಸಿತು.
ಒಂದು ಕಾಲದಲ್ಲಿ ನಮ್ಮ ಹಳ್ಳಿಗಳಲ್ಲಿ ಮದುವೆ ಎಂದರೆ ಎತ್ತಿನ ಗಾಡಿ, ಹಲಗಿ ಬಾಜೆ, ಬಂಧು-ಬಳಗದ ಸಂಭ್ರಮ ಹಾಗೂ ಗ್ರಾಮೀಣ ಸೊಗಡಿನೊಂದಿಗೆ ನಡೆಯುತ್ತಿದ್ದವು. ಆದರೆ ಆಧುನಿಕತೆಯ ಭರಾಟೆಯಲ್ಲಿ ಇಂತಹ ಅನೇಕ ಸಂಪ್ರದಾಯಗಳು ಮರೆಯಾಗುತ್ತಿವೆ. ಈ ಸಂದರ್ಭದಲ್ಲಿ ಹಳೆಯ ಪದ್ಧತಿಯನ್ನು ಮತ್ತೆ ಜೀವಂತಗೊಳಿಸುವ ಮೂಲಕ ಮಶಾಕ್ ಪಟೇಲ್ ಅವರ ಕುಟುಂಬವು ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಸಾರಿದೆ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಇಮ್ತಿಹಾಜ್ಅಲಿ ಹೇರೂರು, ರಸುಲ್ ಪಟೇಲ್, ರೈತರು ಹಾಗೂ ರೈತ ಮುಖಂಡರಾದ ಶರಣಬಸಪ್ಪ ಮಮಷ್ಯೆಟ್ಟಿ, ಶಿವರಾಜ್ ಪಾಟೀಲ್, ಪವನ್ ಪಾಟೀಲ್, ಚಂದ್ರಶೇಖರ್ ತೆಂಗಳಿ, ಬಸವರಾಜ್ ರಾಕ, ಶಿವಕುಮಾರ್ ತೆಂಗಳಿ, ಮಲ್ಲು ತೆಲಿ, ಸುಂದರ್ ಸಾಗರ್, ರಮೇಶ್ ಹೆಬ್ಬಾಳ್, ರೇವಣಸಿದ್ಧ ದರಿ, ಮಲ್ಲು ಹೂಗಾರ್, ಅಶೋಕ್ ಪೂಜಾರಿ, ಜಗನ್ನಾಥ ತೇಲಿ, ಶರಣು ಪೂಜಾರಿ, ಶಂಕರ್ ತವಾಡಿ ಸೇರಿದಂತೆ ಅನೇಕ ರೈತರು, ರೈತ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿ ಮದುವೆಯ ಸಂಭ್ರಮವನ್ನು ಹೆಚ್ಚಿಸಿದರು.
ಈ ವಿನೂತನ ಹಾಗೂ ಮಾದರಿಯಾದ ಮದುವೆ ಸಮಾರಂಭವನ್ನು ಆಯೋಜಿಸಿದ ಪ್ರಗತಿಪರ ರೈತ ಮಶಾಕ್ ಪಟೇಲ್ ಹಾಗೂ ಅವರ ಕುಟುಂಬದವರಿಗೆ ರೈತ ಮುಖಂಡ ವೀರಣ್ಣ ಗಂಗಾಣಿ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ನವದಂಪತಿಗಳಾದ ಯೂಸೂಫ್ ಪಟೇಲ್ ಹಾಗೂ ಅವರ ಪತ್ನಿಗೆ ಸುಖಮಯ ದಾಂಪತ್ಯ ಜೀವನದ ಶುಭಾಶಯಗಳನ್ನು ಕೋರಿದರು.
ಇಂತಹ ಕಾರ್ಯಕ್ರಮಗಳು ಕೇವಲ ಮದುವೆಯ ಸಂಭ್ರಮಕ್ಕೆ ಸೀಮಿತವಾಗದೆ, ಮುಂದಿನ ಪೀಳಿಗೆಗೆ ಗ್ರಾಮೀಣ ಸಂಸ್ಕೃತಿ, ಕೃಷಿ ಪರಂಪರೆ, ಎತ್ತುಗಳ ಮಹತ್ವ ಹಾಗೂ ರೈತರ ಒಗ್ಗಟ್ಟಿನ ಸಂದೇಶವನ್ನು ಸಾರುತ್ತವೆ. ನಮ್ಮ ಹಳೆಯ ಸಂಪ್ರದಾಯಗಳನ್ನು ಮರೆಯದೆ ಮುಂದಿನ ಪೀಳಿಗೆಗೆ ಪರಿಚಯಿಸುವ ಇಂತಹ ಪ್ರಯತ್ನಗಳು ನಿಜಕ್ಕೂ ಶ್ಲಾಘನೀಯ.
ರೈತರ ಸಂಸ್ಕೃತಿ ಉಳಿಯಲಿ, ಗ್ರಾಮೀಣ ಪರಂಪರೆ ಬೆಳೆಯಲಿ, ಎತ್ತುಗಳ ವೈಭವ ಮತ್ತೆ ಮೆರೆಯಲಿ!
ಜೈ ಅನ್ನದಾತ – ಜೈ ರೈತ ಸಂಘ!

  • ವೀರಣ್ಣ ಗಂಗಾಣಿ
    ರೈತ ಮುಖಂಡರು
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!