ಜತ್ತ: ನೆರೆಯ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗಿರಿಯಲ್ಲಿ ಬೆಳಗಾವಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಹೇಮಾವತಿ ಸೊನೊಳ್ಳಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣ ಜೊತೆಗೆ ಸಾಹಿತ್ಯ ಕಲಿಕೆಗೆ ಶಿಕ್ಷಣ ಇಲಾಖೆ ಇದರ ಬಗ್ಗೆ ವಿಚಾರ ಮಾಡಬೇಕು. ಪ್ರತಿಯೊಂದು ಶಾಲೆಯಲ್ಲಿ ಗ್ರಂಥಾಲಯಕ್ಕೆ ಒತ್ತು ನೀಡಬೇಕು ಬೆಳಗಾವಿ ವಿಜಯಪೂರ ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ಪ್ರಬಲವಾಗಿ ಬೆಳೆದು ಬಂದಿದೆ ಮಕ್ಕಳಲ್ಲಿ ನೈತಿಕ ಶಿಕ್ಷಣ ಇಲ್ಲದ ಕಾರಣ ಇಂದು ಗುರುಗಳಿಗೆ ಗೌರವ ನೀಡದಿರುವುದು ತಂದೆ ತಾಯಿಗಳನ್ನು ವೃದ್ಧಾಶ್ರಮಗಳಿಗೆ ಸೇರಿಸುವ ಕೆಟ್ಟ ಸಂಪ್ರದಾಯ ಬೆಳೆಯುತ್ತಿರುವುದು ವಿಷಾದನೀಯ ಆದ ಕಾರಣ ಮಕ್ಕಳಲ್ಲಿ ಒಳ್ಳೆಯ ಗುಣಗಳನ್ನು ತುಂಬುವ ಮೂಲಕ ನಾಡು ಕಟ್ಟುವ ಕೆಲಸ ಪ್ರತಿಯೊಬ್ಬರೂ ಕೈಜೋಡಿಸಿ ಕಾಯ೯ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಹಾಗೂ ಪಾಲಕರ ಪಾತ್ರ ದೊಡ್ಡದು ಸರ್ವಾಧ್ಯಕ್ಷರಾದ ಡಾ.ಹೇಮಾವತಿ ಸೊನೊಳ್ಳಿಯವರು ಕರೆ ನೀಡಿದರು.
ವೇದಿಕೆಯಲ್ಲಿ ಬಹು ಮುಖ ಪ್ರತಿಭೆ ಕಿರಿಯ ಸರ್ವಾಧ್ಯಕ್ಷರಾದ ಭಾರತಿ ಚಿಪ್ಪಲಕಟ್ಟಿ ಅಧ್ಯಕ್ಷರಾದ ಸಿದ್ರಾಮನಿಲಜಗಿ, ಮಹಾಂತೇಶ ಮೆಣಸಿನ ಕಾಯಿ .ಸುರೇಶ ಸಕ್ರೆನ್ನವರ, ಹನ ಮಂತರಾವ ನಾಗಪ್ಪಗೋಳ ಪ್ರಕಾಶ ಹೊಸಮನಿ ವಿಜಯ ಬಡಿಗೇರ ಮುಂತಾದವರು ವೇದಿಕೆಯಲ್ಲಿ ಭಾಗವಹಿಸಿದ್ದರು.




















