ಭಕ್ತಿ ಭಾವಕ್ಕೆ ಅಜರಾಮರವಾದ ಹೆಸರು
ಕನ್ನಡ ಭಾಷೆಯ ವಿಶಿಷ್ಟ ದಾಸಶ್ರೇಷ್ಠರು
ಯುದ್ಧದಲ್ಲಿ ಸೋತ ದಾಸ ಪರಂಪರೆಯ ಹರಿದಾಸರಾದರು
ಕಾಗಿನೆಲೆಯ ನಿವಾಸಿ ಶ್ರೀ ಕನಕದಾಸರು
ಹಾವೇರಿಯ ಬಾಡ ಗ್ರಾಮದ ತಿಮ್ಮಪ್ಪ ನಾಯಕ
ಚಿನ್ನದಂತಹ ಮಗನನ್ನು ಹೆತ್ತವರು ಬಚ್ಚಮ್ಮ-ಬೀರಪ್ಪ ನಾಯಕ
ವಿಜಯನಗರ ಸಾಮ್ರಾಜ್ಯದ ಗಂಡೆದೆಯ ದಂಡನಾಯಕ
ತಿರುಪತಿ ತಿಮ್ಮಪ್ಪನ ಆಶೀರ್ವಾದದ ಕುಲದೀಪಕ
ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿ
ಉಡುಪಿ ದೇಗುಲದಲ್ಲಿ ಕನಕನ ಕಿಂಡಿಗೆ ಜೀವವಾಗಿ
ಲೋಕ ಕಲ್ಯಾಣಕ್ಕಾಗಿ ಕೃಷ್ಣನ ಪ್ರೀತಿಯ ಭಕ್ತರಾಗಿ
ಜಾತಿ ಪದ್ಧತಿಯ ತಾರತಮ್ಯವನ್ನು ತಿರಸ್ಕರಿಸಿದರು ಮನುಕುಲಕ್ಕಾಗಿ
ಕಾಗಿನೆಲೆಯ ಆದಿಕೇಶವರಾಯರ ಅಂಕಿತದಲ್ಲಿ
ಕೀರ್ತನೆಗಳನ್ನು ರಚಿಸಿ ಹಾಡಿದರು ಕೃಷ್ಣನ ಸ್ಮರಣೆಯಲ್ಲಿ
ಮೋಹನತರಂಗಿಣಿ, ನಳಚರಿತ್ರೆ ಕೃತಿಗಳಲ್ಲಿ
ಹಲವು ವೈಶಿಷ್ಟ್ಯಗಳು ತಲೆಯೆತ್ತಿವೆ ಇವರ ಕೀರ್ತನೆಗಳಲ್ಲಿ
ಅನುದಿನ ಸತತವಾಗಿ ಶ್ರೀಕೃಷ್ಣನ ಕೀರ್ತನೆಯು
ನಾಡಿನೆಲ್ಲೆಡೆ ಹಬ್ಬಿದೆ ಕನಕದಾಸರ ಕೀರ್ತಿಯು
ಎತ್ತ ನೋಡಿದರತ್ತ ಸ್ಥಾಪಿಸಲಾಗಿದೆ ಅವರ ಮೂರ್ತಿಯು
ಹುಟ್ಟಿ ಬರಲಿ ಕನಕದಾಸರು ಮತ್ತೆ ಮನೆ ಮನೆಯಲ್ಲಿಯು

- ಶ್ರೀ ಮುತ್ತು ಯ. ವಡ್ಡರ
ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಮಳಗಾವಿ,
ಬಾಗಲಕೋಟೆ.




















