ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೂಲ ಹಕ್ಕಿಪಿಕ್ಕಿ ಸೇರಿದಂತೆ ಆದಿವಾಸಿ ಜಾತಿಗಳನ್ನು ನಿಗಮಕ್ಕೆ ಸೇರಿಸಲು ಸರ್ಕಾರಕ್ಕೆ ಒತ್ತಾಯಿಸುವೆ : ಅನ್ನಪ್ಪ ಚವ್ಹಾಣ.

ಕಂಪ್ಲಿ: ಪಾರ್ಧಿ, ಹರಣಿಶಿಕಾರಿ, ಹಕ್ಕಿಪಿಕ್ಕಿ ಸೇರಿದಂತೆ ಮೂಲ ಆದಿವಾಸಿಯ ಆರೇಳು ಜಾತಿಗಳನ್ನು ಆದಿವಾಸಿ ಅಭಿವೃದ್ಧಿ ನಿಗಮಕ್ಕೆ ಸೇರಿಸಲು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಪಾರ್ಧಿ ಹರಣಶಿಕಾರಿ ವಿಮುಕ್ತ ಬುಡಕಟ್ಟು ಹಿತರಕ್ಷಣಾ ಸಮಿತಿಯ ಅನ್ನಪ್ಪ ಚವ್ಹಾಣ ಹೇಳಿದರು.
ಪಟ್ಟಣದ 12ನೇ ವಾರ್ಡಿನ ತುಳಜಾ ಭವಾನಿ ದೇವಸ್ಥಾನದ ಶಿಕಾರಿ ಕಾಲೋನಿಗೆ ಕರ್ನಾಟಕ ರಾಜ್ಯ ಪಾರ್ಧಿ ಹರಣ ಶಿಕಾರಿ ವಿಮುಕ್ತ ಬುಡಕಟ್ಟು ಹಿತರಕ್ಷಣಾಸಮಿತಿ ಮತ್ತು ಧಾರವಾಡ ಜಿಲ್ಲಾ ಆದಿವಾಸಿ ಪಾರ್ಧಿ ಕ್ಷೇಮಾಭಿವೃದ್ಧಿ ಸಂಘದ ತಂಡದವರು ಭೇಟಿ ನೀಡಿ, ಇಲ್ಲಿನ ಹಕ್ಕಿಪಿಕ್ಕಿ ಜನರ ಕುಂದು ಕೊರತೆಗಳನ್ನು ಆಲಿಸಿದ ನಂತರ ಮಾತನಾಡಿ, ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಶಿಕಾರಿ ಕಾಲೋನಿಗೆ ಮೊದಲ ಭೇಟಿ ನೀಡಿ, ಸಮುದಾಯದ ಸಮಸ್ಯೆಗಳನ್ನು ಆಲಿಸಿದ್ದು, ಮುಂದಿನ ದಿನದಲ್ಲಿ ಸಮಸ್ಯೆಗಳನ್ನು ಮುಕ್ತಿ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಲಾಗುವುದು. ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಂವಿಧಾನಿಕ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ನಂತರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಪಿ.ಶಿಕಾರಿ ರಾಮು ಮಾತನಾಡಿ, ಬದುಕು ಸಾಗಿಸಲೆಂದು ಬೇರೆ ಬೇರೆ ವಿದೇಶಿಗಳಲ್ಲಿ ಹಕ್ಕಿಪಿಕ್ಕಿ ಕುಟುಂಬಗಳು ಹೋಗಿದ್ದಾರೆ. ಆದರೆ, ಉಗಾಂಡದ ಕಾಂಗೋದಲ್ಲಿ ರಾಜ್ಯದ ಶಿವಮೊಗ್ಗದ 70 ಜನ ಮತ್ತು ದಾವಣಗೆರೆಯ 25 ಜನ ಸೇರಿದಂತೆ ಒಟ್ಟು 95 ಜನ ಹಕ್ಕಿಪಿಕ್ಕಿಯವರನ್ನು ಬಂಧಿಸಲಾಗಿದೆ. ಕೂಡಲೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿ, ಕೇಂದ್ರ ಸರ್ಕಾರ ಬಂಧಕ್ಕೊಳಗಾದ ಹಕ್ಕಿಪಿಕ್ಕಿಗಳನ್ನು ಬಿಡುಗಡೆ ಮಾಡಿಸಿ, ಸ್ವದೇಶಕ್ಕೆ ಕರೆತರಬೇಕು. ಆದಿವಾಸಿ ನಿಗಮದಲ್ಲಿ ಕೆಲ ಮೂಲ ಅದಿವಾಸಿ ಜಾತಿಗಳನ್ನು ಕೈಬಿಟ್ಟಿದ್ದು, ಸರ್ಕಾರ ಈ ಮೂಲ ಆದಿವಾಸಿಗಳನ್ನು ಸೇರಿಸಬೇಕು. ಇಲ್ಲದಿದ್ದರೆ, ಕಾನೂನು ಹೋರಾಟ ಮಾಡಲಾಗುವುದು. ರಾಜ್ಯದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಹಕ್ಕಿಪಿಕ್ಕಿ ಮತ್ತು ಅಲೆಮಾರಿಗಳು ಜೀವನ ನಡೆಸುತ್ತಿದ್ದು, ಈ ಸಮುದಾಯಕ್ಕೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು. ನಂತರ ಸಮಿತಿಯ ತಂಡವನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನೆಯ ಉಪಾಧ್ಯಕ್ಷ ರಾಮಣ್ಣ ಹರಣಶಿಕಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ವಾಸುದೇವ ಕಾಳೆ, ಸದಸ್ಯ ಕೃಷ್ಣಾ ಹರಣಶಿಕಾರಿ, ಧಾರವಾಡ ಜಿಲ್ಲಾ ಆದಿವಾಸಿ ಪಾರ್ಧಿ ಹರಣಶಿಕಾರಿ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಭೋವಿರಾಜ್, ಖಜಾಂಚಿ ಗಣೇಶ ಹರಣಶಿಕಾರಿ, ಉಪ ಖಜಾಂಚಿ ಬಸವರಾಜ್ ಅಣ್ಣಿಗೇರಿ, ದಾರವಾಡ ಸಂಘಟನೆಯ ಜಿಲ್ಲಾಧ್ಯಕ್ಷ ಚಂದ್ರ, ಉಪಾಧ್ಯಕ್ಷ ಪ್ರಕಾಶ ಕಟ್ಟಿಮನಿ, ಮೇದಾರ್ ಸಮಘದ ಅಧ್ಯಕ್ಷ ಎಂ.ಗಾಳಿಕುಮಾರ, ಹಕ್ಕಿಪಿಕ್ಕಿ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷೆ ಜಾನಕಿ, ಕೋಶಾಧ್ಯಕ್ಷ ಈರಣ್ಣ, ಮುಖಂಡರಾದ ಡಾ.ವಿಕಾಸ ಕಾಳೆ, ಗೋವಿಂದ ಚವ್ಹಾಣ, ಸೋಮು ಚವ್ಹಾಣ, ಮುಖಂಡರಾದ ಮೀನಾಕ್ಷಿ ವರೇಕಲ್, ಗುನ್ನುಸಿಂಗ್, ನಾಗರಾಜ, ಕಿರಣ್, ದೇವೇಂದ್ರ, ಕೆ.ಗೋವಿಂದ ಸೇರಿದಂತೆ ಸಮಾಜದವರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!