ಇಳಕಲ್: ತಾಲೂಕಿನ ಸುಕ್ಷೇತ್ರ ನಂದವಾಡಗಿ ಇಲ್ಲಿನ ಮಹಾಂತೇಶ್ವರ ಸಂಸ್ಥಾನ ಬೃಹನ್ಮಠದ 50ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮದ ಅಂಗವಾಗಿ, ನವೆಂಬರ್ 24ರ ಮಂಗಳವಾರ ನಡೆದ ಸಮಾರಂಭದಲ್ಲಿ ನಗರದ ಪತ್ರಕರ್ತರನ್ನು ಗೌರವಪೂರ್ವಕವಾಗಿ ಸತ್ಕರಿಸಲಾಯಿತು.
ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಅಭಿನವ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕಾ ಮಿತ್ರರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಆಶೀರ್ವದಿಸಿದರು.
ಪತ್ರಿಕಾ ರಂಗದ ಸೇವೆಯನ್ನು ಗುರುತಿಸಿ ಗೌರವಿಸಿದ ಶ್ರೀಮಠದ ಪೂಜ್ಯ ಶ್ರೀಗಳಿಗೆ ಪತ್ರಕರ್ತರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯ ವರದಿಗಾರರಾದ ಮಹಾಂತೇಶ ಗೊರಜನಾಳ, ವಿಜಯ ಪಲ್ಲೇದ, ಸೈಯದ್ ಸಿರಾಜ್ ಖಾಜಿ, ಮುರ್ತುಜಾ ಬಾದಾಮಿ, ಖಾಜಾ ಸೋಲಾಪುರ, ಇಮಾಮ್ ಹುಸೇನ್ ಮುಲ್ಲಾ, ಶರಣಗೌಡ ಕಂದಕೂರ, ಮೆಹಬೂಬ ದೋಟಿಹಾಳ ಹಾಗೂ ವೀರೇಶ ಸಿಂಪಿ ಸೇರಿದಂತೆ ಅನೇಕ ಪತ್ರಿಕಾ ಮಿತ್ರರು ಉಪಸ್ಥಿತರಿದ್ದರು.




















