ಕನಕಗಿರಿ : ಇಂದು ವೆಂಕಟೇಶ್ವರ ಹಿರಿಯ ಪ್ರಾಥಮಿಕ
ಶಾಲೆಯಲ್ಲಿ ನಮ್ಮ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಸಂವಿಧಾನದ ಪೂರ್ವ ಪೀಠಿಕೆ ಓದುವುದರ ಮೂಲಕ ಮತ್ತು ಸಂವಿಧಾನದ ಮಹತ್ವದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಮಾಹಿತಿಯನ್ನು ತಿಳಿಸುವುದರ ಮೂಲಕ ಸಂವಿಧಾನದ ಸಮರ್ಪಣ ದಿನಾಚರಣೆಯನ್ನು ಬಹಳಷ್ಟು ಅರ್ಥಗರ್ಭಿತವಾಗಿ ಅಚ್ಚುಕಟ್ಟಾಗಿ ಆಚರಿಸಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ನಾಗೇಶ್ ಮಾ ಟೂರ್, ಕುಮಾರ ವೆಂಕಟೇಶ್ ರೆಡ್ಡಿ ,ಶ್ರೀಮತಿ ಪ್ರಿಯಾಂಕ, ಶ್ರೀಮತಿ ರೇಖಾ ಶ್ರೀಮತಿ ನಂದಿನಿ ಸೇರಿದಂತೆ ಶಾಲೆಯ ಎಲ್ಲಾ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.




















