ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಗಳಗಿ ಗ್ರಾಮ ಪಂಚಾಯತಿ ಅಡಿಯಲ್ಲಿ ಬರುವ ಮಾವಿನಹಳ್ಳಿ ಗ್ರಾಮದಲ್ಲಿ ಎಚ್ ಪಿ ಎಸ್ ಸರಕಾರ ಶಾಲೆಯಲ್ಲಿ ಹೈಟೆಕ್ ಶೌಚಾಲಯ ಎಂದು ನಿರ್ಮಾಣ ಮಾಡಿದ್ದಾರೆ ಈ ಕೆಲಸವನ್ನು ಸರಿಯಾಗಿ ಮಾಡಲಾರದೆ ಕಳಪೆ ಮಟ್ಟದಿಂದ ಮಾಡಿ ಅಂದಾಜು ಮೆಟ್ರಿಲ್ ಪೇಮೆಂಟ್ ಅಂತ ಹೇಳಿ 2,70,000 ರೂಪಾಯಿಯನ್ನು ತೆಗೆದಿದ್ದಾರೆ ಅದೇ ರೀತಿಯಾಗಿ ಎಪ್ಪಂಡೆಪ್ಪ ಅಂತ ಹೇಳಿ ಎರಡು ಲಕ್ಷ ರೂಪಾಯಿ ಅನಾವಶ್ಯಕವಾಗಿ ಸರ್ಕಾರದ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ ಹೀಗಾಗಿ ಈ ಕಾಮಗಾರಿಯ ಕುರಿತು ಅಭಿವೃದ್ಧಿ ಅಧಿಕಾರಿಗೆ ಈ ಕಾಮಗಾರಿಯನ್ನು ಸರಿಯಾಗಿ ಆಗಿಲ್ಲ ಹೀಗಾಗಿ ಇದರ ಎಸ್ಟಿಮೇಟ್ ಕಾಫಿಯನ್ನು ಕೊಡಿ ಎಂದು ಲಿಖಿತ ರೂಪದಲ್ಲಿ ಬರೆದುಕೊಟ್ಟರು ಕೂಡ ಯಾವುದೇ ರೀತಿ ಕೊಡ್ತಾ ಇಲ್ಲ ಫೋನ್ ಕರೆ ಮಾಡಿದರು ಫೋನ್ ಕೆರೆಯನ್ನು ರಿಸೀವ್ ಮಾಡ್ತಾ ಇಲ್ಲ ರಿಸೀವ್ ಮಾಡ್ತಾ ಇಲ್ಲ ಅಂದರೆ ಇದಕ್ಕೆ ಕಾರಣವೂ ತುಂಬಾ ಕಳಪೆ ಮಟ್ಟದಿಂದ ಈ ಕಾಮಗಾರಿಯನ್ನು ಮಾಡಿದ್ದಾರೆ ಒಂದು ರೀತಿ ಸರ್ಕಾರದ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಅರ್ಥವಾಗುತ್ತದೆ ಇನ್ನು ಮುಂದೆಯಾದರೂ ಸಂಬಂಧಪಟ್ಟ ಅಧಿಕಾರಿಗಳು ಮೇಲಾಧಿಕಾರಿಗಳು ಈ ಸುದ್ದಿಯನ್ನು ನೋಡಿ ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಸೂಕ್ತವಾದ ಕಾನೂನು ಕ್ರಮವನ್ನು ಕೈಗೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡೋಣ…
ವರದಿ:ಅರವಿಂದ್ ಕಾಂಬಳೆ ಇಂಡಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.