ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕುವೆಂಪು ಪ್ರೌಢಶಾಲೆಯಲ್ಲಿ ಸ್ವಚ್ಚತಾ ಸಂಕಲ್ಪ ಸಪ್ತಾಹ

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕುವೆಂಪು ಪ್ರೌಢಶಾಲೆ ಬಳಗನೂರ್ ಕ್ರಾಸ್ ನಲ್ಲಿ ಸ್ವಚ್ಚತಾ ಸಂಕಲ್ಪ ಸಪ್ತಾಹ ದಿನಾಂಕ 5 10 2023 ರಂದು ಊರಿನ ಪ್ರಮುಖ ಬೀದಿಗಳಲ್ಲಿ ಬೆಳಗ್ಗೆ 9:30ಕ್ಕೆ ಜರುಗಿತು.ಸ್ವಚ್ಛತಾ ಸಂಕಲ್ಪ ಸಪ್ತಾಹದ ನೈರ್ಮಲ್ಯದ ಮೇಲೆ ವಿಶೇಷವಾಗಿ ಗಾಂಧೀಜಿಯವರ ಬೋಧನೆಗಳಿಗೆ ಸಂಬಂಧಿಸಿದಂತೆ ಚರ್ಚೆಗಳನ್ನು ಏರ್ಪಡಿಸಬೇಕು ಶಾಲಾ ಕೊಠಡಿ ಹಾಗೂ ಪ್ರಯೋಗಾಲಯಗಳು ಗ್ರಂಥಾಲಯಗಳು ವಿದ್ಯಾರ್ಥಿಗಳು ಸ್ವಂತ ತಾವೇ ಸ್ವಚ್ಛಗೊಳಿಸುವದನ್ನು ರೂಢಿ ಮಾಡಿಕೊಳ್ಳಬೇಕು. ಶಾಲೆಯಲ್ಲಿರುವ ಕುಡಿಯುವ ನೀರಿನ ಪ್ರದೇಶ ಶೌಚಾಲಯ ಅಡುಗೆ ಮನೆಯನ್ನು ವಿದ್ಯಾರ್ಥಿಗಳು ಪ್ರತಿ ವಾರ ಒಂದು ತರಗತಿಯಂತೆ ಸ್ವಚ್ಛ ಮಾಡಬೇಕು ಶಾಲಾ ಆಟದ ಮೈದಾನಗಳು ಶಾಲಾ ಉದ್ಯಾನವನಗಳು ಹಾಗೂ ಶಾಲಾ ತರಗತಿಯಲ್ಲಿ ಸ್ವಚ್ಛತೆ ನಿರ್ವಹಣೆಯನ್ನು ಮಾಡಬೇಕು ವಿದ್ಯಾರ್ಥಿಗಳು ತಮ್ಮ ಗ್ರಾಮಗಳಲ್ಲಿ ಜಾಥಾ ಹೋಗುವ ಮೂಲಕ ಜನರಲ್ಲಿ ಸ್ವಚ್ಛ ಭಾರತದ ಉದ್ದೇಶವನ್ನು ಜನರಲ್ಲಿ ಮೂಡಿಸಬೇಕು ವಿದ್ಯಾರ್ಥಿಗಳು ಶಿಕ್ಷಕರ ಸಹಾಯದಿಂದ ಶಾಲೆಗಳಲ್ಲಿ ನೈರ್ಮಲ್ಯ ಮತ್ತು ಆರೋಗ್ಯದ ಮೇಲೆ ಪ್ರಭಾವ ಬೀರುವುದು ಸ್ವಚ್ಛತಾ ಘೋಷಣೆಗಳನ್ನು ಕೂಗುತ್ತಾ ಊರಿನ ನಾಗರಿಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಹಾಗೂ ಗ್ರಾಮ ಪಂಚಾಯತಿಯ ಅಧಿಕಾರಿಗಳು ಪಥ ಸಂಚಲನೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರಭಾತ ಪೇರಿ ಮಾಡಲಾಯಿತು ಹಾಗೂ ಸ್ವಚ್ಚತಾ ಸಂಕಲ್ಪ ಸಪ್ತಾಹ ಕಾರ್ಯಕ್ರಮ ಪ್ರಯುಕ್ತ ಕುವೆಂಪು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು ಪ್ರಬಂಧ ಸ್ಪರ್ಧೆಯಲ್ಲಿ ಪವನ್ ರಾಠೋಡ,ಸಂತಸದ ಕಲಿಕೆಯಲ್ಲಿ ಭೀಮಣ್ಣ ಅಡ್ಡಗುಡ್ಡ,ಚರ್ಚಾ ಸ್ಪರ್ಧೆಯಲ್ಲಿ ಅಭಿಲಾಷ ಹುಣಶ್ಯಾಳ,ಅತ್ಯುತ್ತಮ ವಿದ್ಯಾರ್ಥಿಯಾಗಿ ಆಕಾಶ್ ಹಾಗೂ ಶಿಕ್ಷಕರಾಗಿ ವಿನೋದ್.ಎನ್.ವಾಲಿ ಇವರಿಗೆ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನ ಮಾಡಲಾಯಿತು.
ವರದಿ:ಉಸ್ಮಾನ್ ಬಾಗವಾನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!