ವಿಜಯಪುರ/ಇಂಡಿ:ಇಂಡಿಯ ಆಹಾರ ನಿರೀಕ್ಷಕ ಪರಮಾನಂದ ಹೂಗಾರ ಇವರ ನೇತೃತ್ವದಲ್ಲಿ ಹಠಾತ್ತನೆ ದಾಳಿ ಮಾಡಿ 8 ಲಕ್ಷ ರೂ ಮೌಲ್ಯದ ಅಕ್ಕಿ ವಶ ಪಡಿಸಿಕೊಂಡಿದ್ದಾರೆ.
ರಾಷ್ಟ್ರಿಯ ಹೆದ್ದಾರಿ ಮೇಲೆ ಬಸನಾಳ ಪೆಟ್ರೋಲ್ ಬಂಕ್ ಹತ್ತಿರ ಹೊರ್ತಿ ಸಮೀಪ ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.
ಲಾರಿಯಲ್ಲಿ ಸಾಗುತ್ತಿದ್ದ 572ಚೀಲ ಅಕ್ಕಿ ಅಂದಾಜು 28390ಕೆಜಿ ಇದ್ದು ಅದರ ಬೆಲೆ 8ಲಕ್ಷ 23,310ರೂ ಇದೆ.
ಹೊರ್ತಿಯ ಕ್ರೈಂ ಪಿಎಸ್ ಐ ಎಸ್.ಎಚ್.ಮಾಳೆಗಾಂವ ಮತ್ತು ಇತರೆ ಪೋಲಿಸ ಸಿಬ್ಬಂದಿ ದಾಳಿಯಲ್ಲಿ ಇದ್ದರು.
ಲಾರಿ ಅಕ್ಕಿ ತುಂಬಿಕೊಂಡು ಇಂಡಿ-ಚಡಚಣ ತಾಲೂಕಿನಿಂದ ವಿಜಯಪುರ ಕಡೆಗೆ ಹೊರಟಾಗ ದಾಳಿ ನಡೆದಿದೆ ಈ ಕುರಿತು ಹೋರ್ತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:ಅರವಿಂದ್ ಕಾಂಬಳೆ ಇಂಡಿ