ಶಹಾಪುರ:ನಗರದ ಸಮೀಪದ ಬೇನಕನಹಳ್ಳಿ (ಜೆ) ಗ್ರಾಮದಲ್ಲಿ ಶನಿವಾರದಂದು ಶ್ರೀ ಬಂಡೆ ರಂಗನಾಥ ದೇವರ ಛಟ್ಟಿ ಉತ್ಸವ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆ ಗ್ರಾಮದ ಬಂಡೆ ರಂಗನಾಥ ದೇವರ ಪಲ್ಲಕ್ಕಿ ಉತ್ಸವವು ಸ್ವಗ್ರಾಮದ ಹೊರವಲಯದಲ್ಲಿರುವ ಬಾವಿಗೆ ತೆರಳಿತು.
ನಂತರ ದೇವರ ಗಂಗಾ ಸ್ನಾನವನ್ನು ಮಾಡಿಕೊಂಡು ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಮಲ್ಲಿಕಾರ್ಜುನ್ ಮುತ್ಯಾ ಹೂಗಾರ್ ಅವರ ದಿವ್ಯ ಸಾನಿಧ್ಯದಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳೆಲ್ಲರೂ ಪಾಲ್ಗೊಂಡು ವಾದ್ಯ ಮೇಳಗಳೊಂದಿಗೆ ಕುಣಿದು ಕುಪ್ಪಳಿಸುತ್ತಾ, ಗ್ರಾಮದ ಮುಖ್ಯ ಬೀದಿಗಳಲ್ಲಿ ಶ್ರೀರಂಗನಾಥನದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆ ಕಾರ್ಯಕ್ರಮ ನೆರವೇರಿಸಿ
ಮಧ್ಯಾಹ್ನದ ನಂತರ ಭಕ್ತಾದಿಗಳು ಮಹಾ ಪ್ರಸಾದವನ್ನು ಸೇವಿಸಿ ತಮ್ಮ ಭಕ್ತಿಯನ್ನು ದೇವರಿಗೆ ಸಮರ್ಪಿಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್