ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘ ಮತ್ತು ಕಾರ್ಯಲಯ ಉದ್ಘಾಟನೆ

ಕೊಪ್ಪಳ ಜಿಲ್ಲಾ ಗಂಗಾವತಿ ಮಂಗಳವಾರ ಬೆಳಿಗ್ಗೆ 10. ಗಂಟೆಗೆ ರಾಯಚೂರು ರಸ್ತೆಯಲ್ಲಿ ಇರುವ ಟಿ.ಎ.ಪಿ.ಸಿ.ಎಮ್.ಎಸ್ ಕಾರ್ಯಾಲಯದ ಒಂದನೇ ಮಹಡಿಯಲ್ಲಿ ನೂತನವಾಗಿ ಪ್ರಾರಂಭಗೊಂಡ “ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘ ಮತ್ತು ಕಾರ್ಯಲಯ ಉದ್ಘಾಟನೆಯನ್ನು ಹೆಬ್ಬಾಳದ ಶ್ರೀ ನಾಗಭೂಷಣ್ ಶಿವಾಚಾರ್ಯ ಮಹಾಸ್ವಾಮಿಗಳಿಂದ ನೇರವೆರಿಸಲಾಯಿತು” ಹಾಗೂ ಸದರಿ ಉದ್ಘಾಟನೆಗೆ ತಾಲೂಕಿನ ಗಣ್ಯಮಾನ್ಯರು ಪಾಲ್ಗೊಂಡು ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರಿಯಾದರು.

ಈ ಸಂಧರ್ಭದಲ್ಲಿ ನೂತನವಾಗಿ ಸಂಘಕ್ಕೆ ಆಯ್ಕೆಗೊಂಡ ಸಂಘದ ಪದಾಧಿಕಾರಿಗಳು ಹಾಗೂ ತಾಲೂಕಿನ ಎಲ್ಲಾ ಪಡಿತರ ವಿತರಕರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೆ.ಮಂಜುನಾಥ ಇವರು ಮಾತನಾಡಿ ಸದರಿ “ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘವನ್ನು ನೋಂದಣಿ ಮಾಡಿಸಿರುವುದು ಮತ್ತು ಸಂಘದ ಕಾರ್ಯಾಲಯವನ್ನು ಸ್ಥಾಪಿಸಿರುವುದು ಇದೇ ಮೊದಲನೇಯದ್ದಾಗಿದೆ ಎಂದು ಮಾತನಾಡುತ್ತಾ ಸದರಿ ಸಂಘಕ್ಕೆ ಆಯ್ಕೆ ಎಲ್ಲಾ ಪದಾಧಿಕಾರಿಗಳು ಹಾಗೂ ವಿತರಕರು ಒಗ್ಗಟ್ಟಿನಿಂದ ನಡೆಯಲು ಕೋರಿದರು ಹಾಗೂ ಸದರಿ ಸಾರ್ವಜನಿಕ ವಲಯದಲ್ಲಿ ಪಡಿತರ ವಿತರಣೆಯನ್ನು ಸರಿಯಾದ ರೀತಿಯಲ್ಲಿ ವಿತರಿಸಿ ಸಂಘಕ್ಕೆ ಮತ್ತು ಸರ್ಕಾರಕ್ಕೆ ಒಳ್ಳೆಯ ಹೆಸರನ್ನು ತರಲು ಶ್ರಮಿಸಬೇಕೆಂದು ತಿಳಿಸಿದರು.ನಂತರ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಟಿ.ಎಮ್.ಚನ್ನಬಸವಶಾಸ್ತ್ರಿಯವರು ಟಿ.ಎ.ಪಿ.ಸಿ.ಎಂ.ಎಸ್ (ರಿ.) ಹಾಗೂ ವಿ.ಎಸ್.ಎಸ್.ಎನ್.ಸಂಘಗಳು (ರಿ.) ಒಗ್ಗಟ್ಟಾಗಿ ತಾಲೂಕಿನ ಎಲ್ಲಾ ವಿತರಕರು ಸೇರಿಕೊಂಡು ಸರಿಯಾದ ಕ್ರಮದಲ್ಲಿ ಕೆಲಸವನ್ನು ಮಾಡುವ ಮೂಲಕ ಸಂಘಕ್ಕೆ ಒಳ್ಳೆಯ ಹೆಸರನ್ನು ತರುವಂತೆ ಹೇಳಿ ಶುಭಕೋರಿದರು.ಇದೇ ಸಂದರ್ಭದಲ್ಲಿ ಸಂಘದ ನೂತನ ಪದಾಧಿಕಾರಿಗಳಾದ ಉಪಾಧ್ಯಕ್ಷರಾದ ಶ್ರೀ ಎಮ್.ಪಿ.ಪಂಪನಗೌಡ,ಕಾರ್ಯದರ್ಶಿಯಾದ ಶ್ರೀ ಎಮ್.ಡಿ.ಫಯಾಜ್,ಸಹಕಾರ್ಯದರ್ಶಿಯಾದ ಶ್ರೀ ಎಚ್.ವೀರಭದ್ರಪ್ಪ, ಖಜಾಂಚಿಯಾದ ಶ್ರೀ ಬಿ.ರಾಜಶೇಖರ,ನಿರ್ದೇಶಕರಾದ ಶ್ರೀ ವಾಜೆಂದ್ರರಾವ್ ದೇಶಪಾಂಡೆ,ಶ್ರೀ ಎಮ್.ಲಿಂಗಪ್ಪಮಠದ,ಶ್ರೀ ಬಸವರಾಜ,ಶ್ರೀಮತಿ ದೊಡ್ಡಬಸಮ್ಮ,ಶ್ರೀಮತಿ ಜಯಲಕ್ಷ್ಮೀ,ಶ್ರೀಮತಿ ಸರಸ್ವತಿ,ಶ್ರೀಮತಿ ಶ್ವೇತಾ, ಶ್ರೀಮತಿ ಶಿವಬಸಮ್ಮ,ಶ್ರೀ ಶಂಕರ ಹಾಗೂ ಶ್ರೀ ಚನ್ನಯ್ಯಸ್ವಾಮಿ,ನಾಗರಾಜ ನಾಯಕ,ಸಲೀಂ ಖಾನ್, ವಸಂತಗೌಡ,ಅನ್ವರ ವೆಂಕಟಗಿರಿ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ