ಅವನ ಕೆತ್ತನೆಯ ಶಿಲ್ಪಗಳಲ್ಲಿ ಜೀವಂತಿಕೆಯ ಕಳೆ ಇರುತ್ತಿತ್ತು. ಮಹಾಶಿಲ್ಪಿ ಅವನು.. ಅಂದು ಯಾವುದೋ ಒಂದು ಮೂರ್ತಿಯನ್ನು ಕೆತ್ತುತ್ತಿದ್ದ.. ಅಷ್ಟರಲ್ಲಿ ಅಲ್ಲೊಬ್ಬ “ಸ್ವಾಮಿ ನಿಮ್ಮ ಮಗ ಇನ್ನೂ ಸುಧಾರಿಸಿಲ್ಲ, ಮತ್ತೆ ಕೊಲೆ ಕೇಸನಲ್ಲಿ ಆರೆಸ್ಟ್ ಆಗಿದಾನೆ..” ಎಂದು ಹೇಳಿ ಹೋದ..ಅಲ್ಲಿರುವ ಶಿಲ್ಪಗಳು ಅವನನ್ನು ನೋಡಿ ಅಣಕಿಸಿ ನಕ್ಕಂತಾಯಿತು…!
✍🏻ಮನು ಎಸ್ ವೈದ್ಯ