ಹಣ್ಣಾಗುವಂತೆ
ಮಾಗಿದರೂ ನನ್ನ ನಿನ್ನ
ದೇಹಗಳು ವಯಸಿನಲಿ
ಇನ್ನೂ ಮಾಗಬೇಕು
ನನ್ನ ನಿನ್ನ ಮನಸುಗಳು
ಬಾಳಿನ ಪಯಣದ ದಾರಿಯಲಿ
ನನ್ನೊಳಗಿನ ನೀನು
ನಿನ್ನೊಳಗಿನ ನಾನು
ಎಂದಿಗೂ ಬಾಡದ ಹೂವಿನಂತಿರಲಿ
ಹಣ್ಣರಿಯದೇ ಹಸಿರು ಎಲೆಯಂತಿರಲಿ
ನನ್ನ ನಿನ್ನ ಪ್ರೀತಿಯು
ಮಾಗಿದರೂ ಮುಪ್ಪಾಗದಿರಲಿ
ಸಾಗರಲ್ಲಿದ್ದರೂ ಉಪ್ಪಾಗದೇ
ಅಮೂಲ್ಯವಾದ ಮುತ್ತಾಗಿರಲಿ
✍️ಚನಬಸಪ್ಪ ಬಳಗಾರ,(ಮಾಜಿ ಸೈನಿಕ)ಪೊಲೀಸ್ ಇಲಾಖೆ