ಒಂದು ಎರಡು
ಮನೆಗೆ ಹೊರಡು
ಎರಡು ಮೂರು
ಓದಲು ತಯಾರು
ಮೂರು ನಾಲ್ಕು
ಗಣಿತದ ಲೆಕ್ಕ ಹಾಕು
ನಾಲ್ಕು ಐದು
ಕನ್ನಡ ಓದು
ಐದು ಆರು
ಇಂಗ್ಲಿಷ್ ಬರೆ ಜೋರು
ಆರು ಏಳು
ಹಿಂದಿ ಕಂಠಪಾಠ ಹೇಳು
ಏಳು ಎಂಟು
ಇರಲಿ ಸಮಾಜದ ನಂಟು
ಎಂಟು ಒಂಭತ್ತು
ವಿಜ್ಞಾನ ನಿಮಗೆಷ್ಟು ಗೊತ್ತು
ಒಂಭತ್ತು ಹತ್ತು ಹೀಗಿತ್ತು
ನಿತ್ಯ ಶಾಲೆಯ ಬಸ್ಸು ನೀ ಹತ್ತು
-ಶ್ರೀ ಮುತ್ತು ಯ. ವಡ್ಡರ ,ಶಿಕ್ಷಕರು,ಬಾಗಲಕೋಟ
9845568484