ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪೊಲೀಸ್ ಠಾಣೆಗೆ ಮಂಗಳೂರು ವಿಭಾಗದ ಐಜಿಪಿ ಅಮಿತ್ ಸಿಂಗ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಉತ್ತರ ಕನ್ನಡ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಹಾಗೂ ಶಿರಸಿ ಡಿವೈಎಸ್ಪಿ ಕೆ ಎಲ್ ಗಣೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪರಿಶೀಲನೆಗೆ ಮುನ್ನ ಮುಂಡಗೋಡ ಪೊಲೀಸ್ ಠಾಣೆ ಅಧಿಕಾರಿ ಗಳು ಹಾಗೂ ಸಿಬ್ಬಂದಿ ಗಳಿಂದ ಗಾರ್ಡ್ ಆಫ್ ಹಾನರ್ ( ಗೌರವ ರಕ್ಷೆ) ಸ್ವೀಕರಿಸಿದರು.