ನೀರು ಸರಬರಾಜಿನಲ್ಲಿ ವ್ಯತ್ಯೆಯು ಉಂಟಾಗಿದೆ ಸಾರ್ವಜನಿಕರು ಕುಡಿಯುವ ನೀರನ್ನು ಫೋಲ್ ಮಾಡದೇ ಮಿತವಾಗಿ ಬಳಸಿ :ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸರುಲ್ಲಾ
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ಪಟ್ಟಣಕ್ಕೆ ಅಯ್ಯನಹಳ್ಳಿ ಹಗರಿ ಪಂಪ್ ಹೌಸ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ದುರಸ್ಥಿಯಲ್ಲಿರುವುದರಿಂದ ಹಾಗೂ ಕೊಟ್ಟೂರು ಪಟ್ಟಣದ ಕೆರೆ ಕೋಡಿ ಬಿದ್ದು, ಕೆರೆ ಅಂಗಳದ ಬೋರ್ ಗಳು ಜಲಾವೃತವಾಗಿ ಮೋಟಾರ್ ಗಳು ಸುಟ್ಟಿದ್ದು, ದುರಸ್ಥಿ ಮಾಡಲು ವಿಳಂಬವಾಗಿರುವುದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುತ್ತದೆ, ಇದರಿಂದಾಗಿ ಸಾರ್ವಜನಿಕರಿಗೆ ಸರದಿ ಪ್ರಕಾರ ಕಡಿಮೆ ಪ್ರಮಾಣದಲ್ಲಿ ನೀರು ಪೂರೈಕೆ ಮಾಡಲಾಗುತ್ತಿದ್ದು, ಕಾರಣ ಸಾರ್ವಜನಿಕರು ಕುಡಿಯುವ ನೀರನ್ನು ಫೋಲು ಮಾಡದೇ ಮಿತವಾಗಿ ಬಳಸಲು ಹಾಗೂ ಮಿನಿ ಸಿಸ್ಟನ್ಗಳ ಮೂಲಕ ಪೂರೈಕೆ ಮಾಡುವ ನೀರನ್ನು ಬಳಕೆಗೆ ಉಪಯೋಗಿಸುವ ಮೂಲಕ ಸಾರ್ವಜನಿಕರು ಸಹರಕರಿಸಲು ಪ್ರಕಟಣೆ ಮೂಲಕ ಎ, ನಸುರುಲ್ಲಾ ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯಿತಿ ಕೊಟ್ಟೂರು ರವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.