ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೂಕಾರ ಗ್ರಾಮದಲ್ಲಿ ಹಲವು ವರ್ಷಗಳಿಂದ ಅನಾಥ ಸ್ಥಿತಿಯಲ್ಲಿ ಒಬ್ಬ ವ್ರದ್ಧ ವ್ಯಕ್ತಿ ಅಲೆಯುತ್ತಿದ್ದು ಊರಿನ ನಾಗರಿಕರು ಆತನಿಗೆ ಊಟ ನೀಡಿ ಆಶ್ರಯ ನೀಡಿದ್ದು ಆದರೆ ಈಗ ಈ ವೃದ್ಧ ವ್ಯಕ್ತಿ ಹಲವು ಕಾಯಿಲೆಗಳಿಂದ ಬಳಲುತ್ತಿರುವುದರಿಂದಾಗಿ ಈತನ ಮುಂದಿನ ಜೀವನಾಧಾರಕ್ಕಾಗಿ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮಕ್ಕೆ ಸೇರಿಸುವಂತೆ ಹೂಕಾರಿನ ದಯಾನಂದ ಗೊವಿಂದ ನಾಯ್ಕ ಮತ್ತು ಲಕ್ಷ್ಮಣ ಗೋವಿಂದ ನಾಯ್ಕ ಎನ್ನುವವರು ಸಿದ್ದಾಪುರ ಪೋಲೀಸ್ ಠಾಣೆಗೆ ಮನವಿ ಮಾಡಿಕೊಂಡ ಪ್ರಕಾರ ಸಿದ್ದಾಪುರ ಪೋಲೀಸರು ಅನಾಥ ಸ್ಥಿತಿಯಲ್ಲಿರುವ ಈ ವೃದ್ಧ ವ್ಯಕ್ತಿಯನ್ನು ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದಲ್ಲಿ ಸೇರಿಸಿಕೊಳ್ಳುವಂತೆ ಪೋಲಿಸರು ಕೋರಿಕೊಂಡ ಹಿನ್ನೆಲೆಯಲ್ಲಿ ಆಶ್ರಮದ ಮುಖ್ಯಸ್ಥರಾದ ಡಾ. ನಾಗರಾಜ ನಾಯ್ಕ ಅವರು ಹೋಗಿ ಆಶ್ರಮಕ್ಕೆ ಕರೆದುಕೊಂಡು ಬಂದು ಆಶ್ರಯ ನೀಡಿದ್ದಾರೆ.
ಈ ವ್ಯಕ್ತಿಯು ತನ್ನ ಹೆಸರನ್ನು ನಟರಾಜ ಮಲಬಾರಿ ಎಂದು ಹೇಳುತ್ತಿದ್ದಾನೆ. ತಾನು ಕಳೆದ 50 ವರ್ಷಗಳ ಹಿಂದೆ ಗಾರೆ ಕೆಲಸಕ್ಕೋಸ್ಕರ ಕೇರಳದಿಂದ ಸಿದ್ದಾಪುರಕ್ಕೆ ಬಂದು ಸಿದ್ದಾಪುರ ತಾಲೂಕಿನ ವಿವಿಧ ಕಡೆಗಳಲ್ಲಿ ಕೆಲಸ ಮಾಡಿದ್ದು, ತಾಲೂಕಾ ಸರಕಾರಿ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕೆಲಸ, ಎಂ ಜಿ ಸಿ ಕಾಲೇಜಿನ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ ಎಂದು ಹೇಳುತ್ತಿದ್ದಾನೆ. ಆದರೆ ಈಗ ವಯಸ್ಸು ಹಾಗೂ ಅನಾರೋಗ್ಯದಿಂದ ಕೆಲಸ ಮಾಡಲು ಆಗದ ಸ್ಥಿತಿಯಲ್ಲಿ ಈ ಅಜ್ಜ ಇದ್ದಾನೆ.
ಈತನ ಬಂಧುಗಳು ಪರಿಚಯದವರು ಯಾರಾದರೂ ಇದ್ದರೆ 8073197439, 9481389187 ನಂಬರಿಗೆ ಸಂಪರ್ಕಿಸಿ.
ಈತನ ರಕ್ಷಣೆಯಲ್ಲಿ, ಚಿಕಿತ್ಸೆಯಲ್ಲಿ, ಆರೈಕೆಯಲ್ಲಿ ಸಹಕರಿಸಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು.
ಇಂತಹ ಮಾನವೀಯ ಸೇವೆಗೆ ಸಹಾಯ ಮಾಡಲು ಆಸಕ್ತಿ ಇರುವವರು ಈ ಕೆಳಗಿನ ಖಾತೆ ಸಂಖ್ಯೆಗೆ ಸಹಾಯ ಮಾಡಬೇಕಾಗಿ ವಿನಂತಿ.
PUNITH RAJKUMAR ASHRAYADHAMA ANATHASHRAMA SEVA SAMITI
A/C NO : 40918142470
IFSC CODE : SBIN0040131
BANK NAME : STATE BANK OF INDIA
BRANCH : SIDDAPUR
UPI ID : 9481389187@ybl
PHONE PAY :9481389187
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ಡಾ. ನಾಗರಾಜ ನಾಯ್ಕ
ಮುಖ್ಯಸ್ಥರು,
ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮ ದೇವಸ್ಥಳ, ಮುಗದೂರು,
ಪೊ. ಕೊಂಡ್ಲಿ, ತಾ. ಸಿದ್ದಾಪುರ,
(ಉ.ಕ) – 581355
ಮೊ. 9481389187, 8073197439