ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಂತ ಕವಿ ಕನಕದಾಸರ ನುಡಿಗಳು ಮತ್ತು ಕೀರ್ತನೆಗಳು ಸಾರ್ವಕಾಲಿಕ ಸತ್ಯ, ಅವುಗಳ ಪಾಲನೆ ಇಂದಿನ ಅಗತ್ಯ : ಡಾ. ಗಣಪತಿ ಲಮಾಣಿ

ಕೊಪ್ಪಳ: ನ.೧೮.ಕನಕದಾಸರ ನುಡಿಗಳು ಮತ್ತು ಕೀರ್ತನೆಗಳು ಸಾರ್ವಕಾಲಿಕ ಸತ್ಯ. ಅವುಗಳ ಪಾಲನೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ ಗಣಪತಿ ಕೆ ಲಮಾಣಿ ಅಭಿಪ್ರಾಯ ಪಟ್ಟರು.
ಅವರು ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ ಕನಕದಾಸ ಜಯಂತಿಯ ಕಾರ್ಯಕ್ರಮದಲ್ಲಿ ಭಾವಹಿಸಿ ಮಾತನಾಡುತ್ತಾ ಕನಕದಾಸರು ಮನುಕುಲಕ್ಕೆ ಸಮಾನತೆಯನ್ನು ಸಾರಿದರು. ಅವರ ಈ ಹೇಳಿಕೆಯನ್ನು ಮಾನವ ಪೀಳಿಗೆ ಅಳವಡಿಸಿಕೊಳ್ಳುವುದು ಜರೂರಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀ. ವಿಠೋಬ.ಎಸ್ ಮಾತನಾಡಿ, ಕನಕದಾಸರು ಒಬ್ಬ ಶ್ರೇಷ್ಠ ದಾರ್ಶನಿಕ. ಅವರು ಜಾತಿ ವರ್ಗವನ್ನು ಖಂಡಿಸಿದರು. ಕನಕದಾಸರು ಸಮಾನತೆಯನ್ನು ಕುರಿತು ಜನಸಾಮಾನ್ಯರಿಗೆ ತಿಳಿಸಿದ್ದಾರೆ ಎಂದರು.
ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಗವಿಸಿದ್ದಪ್ಪ ಮುತ್ತಾಳ ಮಾತನಾಡಿ ಕನಕದಾಸರು ಜಾತಿ ಭೇದ ಮಾಡಬಾರದು, ಇಲ್ಲಿ ಯಾರೂ ಶ್ರೇಷ್ಠರಲ್ಲ, ಯಾರೂ ಕನಿಷ್ಠರಲ್ಲ, ಎಲ್ಲರೂ ಸಮಾನರು ಎಂದು ಆ ಕಾಲಕ್ಕೆ ಕರೆ ನೀಡಿದ್ದಾರೆ ಎಂದು ಮಾತನಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಹುಲಿಗೆಮ್ಮ ಬಿ. ಮಾತನಾಡುತ್ತಾ ಕನಕದಾಸರ ಕೀರ್ತನೆಗಳು, ಸಾಹಿತ್ಯ, ಎಲ್ಲಾ ವರ್ಗದ ಜನರಿಗೂ ಮಾದರಿಯಾಗಿವೆ. ಕನಕದಾಸರು ಸ್ರೀ ಸಮಾನತೆಯ ಕುರಿತು ಆ ಕಾಲಘಟ್ಟದಲ್ಲಿಯೇ ಹೇಳಿದ್ದಾರೆ. ಆದರೆ ಈಗಲೂ ಕೂಡಾ ಮಹಿಳೆಯರಿಗೆ ಸಮಾನತೆ ಸಿಗದೇ ಇರುವುದು ವಿಷಾದನೀಯ ಎಂದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ನರಸಿಂಹ ಗುಂಜಳ್ಳಿ ಅವರು ಕನಕದಾಸರ ಜೀವನ ಹಾಗೂ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ಪ್ರದೀಪ್ ಕುಮಾರ್ ಯು, ಡಾ. ಮಲ್ಲಿಕಾರ್ಜುನ ಬಿ, ಶ್ರೀ ಇಬ್ರಾಹಿಂ, ಶ್ರೀ ಹನುಮಪ್ಪ ಮೇಟಿ, ಅತಿಥಿ ಉಪನ್ಯಾಸಕರಾದ ಶ್ರೀ ಶಿವಪ್ರಸಾದ್ ಹಾದಿಮನಿ, ಶಿ.ಕಾ ಬಡಿಗೇರ, ನಿಂಗಪ್ಪ ಕಿನ್ನಾಳ, ಕಲ್ಲಯ್ಯ ಪೂಜಾರ ಮತ್ತು ಬೋಧಕೇತರ ಸಿಬ್ಬಂದಿ ತಾರಮ್ಮ, ಲಕ್ಷ್ಮಿ ಎ.ಕೆ, ರುಕ್ಕಮ್ಮ, ಮತ್ತು ಗವಿಸಿದ್ದಪ್ಪ ಅಜ್ಜ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಡಾ.ಹುಲಿಗೆಮ್ಮ ಬಿ. ಅವರು ನಿರೂಪಿಸಿದರು, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರದೀಪ್ ಕುಮಾರ್ ಯು ಅವರು ವಂದಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ