ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಡಣಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಅವಿರೋಧ ಆಯ್ಕೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ
ದಿ. 22-12-2024 ರಂದು ಜರುಗಿದ ಆಡಳಿತ ಮಂಡಳಿ ನಿರ್ದೆಶಕರ ಚುನಾವಣೆ ನಡೆದು. ಇಂದು ದಿನಾಂಕ 04-01-2025 ರ ಶನಿವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಜರುಗಿ ಕಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಂದು ನಾಮ ಪತ್ರ , ಉಪಾಧ್ಯಕ್ಷ ಸ್ಥಾನಕ್ಕೆ ಒಂದು ನಾಮ ಪತ್ರ ಸಲ್ಲಿಸಿ ಯಾವುದೇ ನಾಮ ಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಶ್ರೀರಾಮಬಾಬು ತಂದೆ ಶೇಷರಾವ ಸಾ.ಅಯೋಧ್ಯ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಶ್ರೀಮತಿ ಯಂಕಮ್ಮ ಗಂ/ ಬೆಟ್ಟಪ್ಪ ಭಾವಿಕಟ್ಟಿ ಡಣಾಪೂರ ಆಯ್ಕೆಯಾಗಿರುವುದನ್ನು ಚುನಾವಣಾಧಿಕಾರಿ ಜೆ ನಾಗರಾಜ ಘೋಷಣೆ ಮಾಡಿದರು.
ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿರುವ , ರಮೇಶ ಗುಂಡೂರ್ , ರಾಘವೇಂದ್ರ .ಬಿ , ಮಂಜುನಾಥ ಹೋಟೆಲ್ , ಈರಣ್ಣ ಬಡಿಗೇರ್ , ವೀರನಾಗಪ್ಪ , ರಾಘವೇಂದ್ರ .ಟಿ , ಭುವನೇಶ , ಲಕ್ಷ್ಮೀ ದೇವಿ , ಮಹಾಂಕಾಳಮ್ಮ , ಫಕೀರಮ್ಮ ವಂಕಲಕುಂಟಿ ಇವರುಗಳಿಗೆ ಆಯ್ಕೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.

ಈ ವೇಳೆಯಲ್ಲಿ ಈ ಚಿದಾನಂಪ್ಪ ಮಾತನಾಡಿ ಸರ್ವ ಸದಸ್ಯರು ಹಾಗೂ ಸಂಘದ ಅಧ್ಯಕ್ಷರು , ಸಿಬ್ಬಂದಿ ವರ್ಗ ಸೇರಿದಂತೆ ರೈತರ ಹಾಗೂ ವ್ಯಾಪಾರಸ್ಥರಿಗೆ ಒಳ್ಳೆಯ ಸೇವೆ ನೀಡಿ ಸಂಘವನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಸಂಘದ ಹೆಸರು ತರಬೇಕೆಂದರು.

ಅಧ್ಯಕ್ಷರಾದ ರಾಮಬಾಬು ಮಾತನಾಡಿ ಈವರೆಗೆ ಸಹಕರಿಸಿದ ರೈತ ಬಾಂಧವರಿಗೂ ಧನ್ಯವಾದಗಳನ್ನು ಹೇಳುತ್ತಾ ನಮಗೆ ನೀಡಿರುವ ಗೌರವವನ್ನು ಸಮರ್ಪಕವಾಗಿ ಉಳಿಸಿಕೊಂಡು ಕಾರ್ಯ ನಿರ್ವಹಿಸುತ್ತೇವೆಂದರು.

ಈ ವೇಳೆಯಲ್ಲಿ ಗ್ರಾಮದ ಹಿರಿಯರಾದ ಗುಂಡಯ್ಯ ಸ್ವಾಮಿ , ಅಮರೇಶ , ಈ ಚಿದಾನಂದಪ್ಪ , ಬೀರಲಿಂಗಪ್ಪ ಯರಡೊಣ ,ಹನುಮೇಶ ಡೊಳ್ಳು , ಕೃಷ್ಣ ಬಗೋಡಿ , ಟೀಕಯ್ಯ , ರುದ್ರಗೌಡ , ಹನುಮೇಶ , ನರಸಯ್ಯ , ಬಸವರಾಜ ,ನಾಗರಾಜ ಭಾವಿಕಟ್ಟಿ ,ಮಂಜುನಾಥ ಹೆಚ್ ,ಹನುಮೇಶ .ಜಿ , ಮಹಮ್ಮದ್ ಅಲಿ, ಹನುಮೇಶ‌.ಕೆ ಇತರರು ಭಾಗಿ ಇದ್ದರು ಸಂಘದ ಕಾರ್ಯದರ್ಶಿಯಾದ ಪಿ. ರಾಘವೇಂದ್ರ ರಿಟರ್ನಿಂಗ್ ಅಫೀಸರ ಜೆ ನಾಗರಾಜ ಸಂಘದ ರೈತರು ಸಿಬ್ಬಂದಿ ವರ್ಗ ಭಾಗಿ ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ