ಕಳೆದು ಹೋಗ್ತಾ ಇರೋ ಈ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಏನೇ ಆಗಿದ್ರು ಅದಕ್ಕೆ ನೀವು ಒಂದು ಧನ್ಯವಾದ ಹೇಳಿ ಈ ಕಳೆದ ವರ್ಷ ನಿಮ್ಮ ಜೀವನದಲ್ಲಿ ಏಳು ಬೀಳು ಇರಬಹುದು ಅದು ಸಹಜ ಆದ್ರೆ ಅದಕ್ಕೆ ನೀವು ಬೇಜಾರು ಆಗಬಾರದು ಯಾಕಂದ್ರೆ ಇವತ್ತು ನೀವು ಏನು ಆಗಿದೀರೋ ಅದಕ್ಕೆ ಆ ದಿನಗಳೇ ಕಾರಣ ಆಗಿರೋ ಕಹಿ ಘಟನೆಗಳನ್ನ ಮರೆತು ನೋವಿನ ಪಾಠವನ್ನು ನೆನಪಲ್ಲಿ ಇಟ್ಟುಕೊಂಡು ಇರೋ ದಿನಗಳನ್ನ ಖುಷಿಯಾಗಿ ಕಳೆಯಿರಿ ಕ್ಯಾಲೆಂಡರ್ ಅಷ್ಟೇ ಬದಲಾಗುತ್ತಿದೆ ಅದೇ ದಿನ ಅದೇ ಸಂಬಂಧಗಳು ಹಾಗೆ ಇದೆ ಆದರೆ ಮನಸ್ಥಿತಿ ಬದಲಾಗಬೇಕಿದೆ ಒಳ್ಳೆಯ ಚಿಂತನೆಗಳೊಂದಿಗೆ ಹೊಸ ವರ್ಷ,ಹೊಸತನವನ್ನು ಸಂಭ್ರಮಿಸೋಣ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
-ಮಾನಸ.ಎಂ,ಸೊರಬ