ಬೆಂಗಳೂರು:ಕೆ.ಆರ್.ಪುರ-ಬಿ ಖಾತೆ ಮಾಡಲು ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಆರ್ ಐ ಅಸಿಸ್ಟೆಂಟ್ ಲೋಕಾಯುಕ್ತ ಡಿವೈಎಸ್ಪಿ ಉಮಾ ದೇವಿ, ಪಿಐ ಬಸವರಾಜ್ ಪಿಪುಲ್ಹರಿ ಹಾಗೂ ತಂಡದ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ಕೆಆರ್ ಪುರದ ಬಸವನಪುರ ವಾರ್ಡ್ ನಂಬರ್ 53 ರ ಬಿಬಿಎಂಪಿ ಆರ್ ಐ ಹರೀಶ್ ರವರ ಖಾಸಗಿ ಸಹಾಯಕ ಗೋವಿಂದ ರಾಜು ಬಂಧನವಾಗಿದ್ದು ತಲೆಮರೆಸಿಕೊಂಡಿರುವ ಆರ್ ಐ ಹರೀಶ್ ಗಾಗಿ ಬಲೆ ಬೀಸಿದ್ದಾರೆ,
ದೂರುದಾರ ಸುಭಾಷ್ ಡಿಸೆಂಬರ್ 15 ರಂದು 400 ಅಡಿ ಮನೆಗೆ ಬಿಖಾತೆ ಮಾಡಿಸಲು ಅರ್ಜಿ ಹಾಕಿದ್ದರು, ಖಾತೆ ಮಾಡಬೇಕಾದರೆ 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು, 2500 ಮುಂಗಡ ನೀಡಿದ್ದು ಇಂದು ಉಳಿದ 2500ರೂ ಕೊಡುವುದಕ್ಕೂ ಮೊದಲು ಲೋಕಾಯುಕ್ತದಲ್ಲಿ ದೂರು ದಾಖಲಿಸಿ ಉಳಿಕೆ ಲಂಚದ ಹಣ ನೀಡುವಾಗ ಬಿಬಿಎಂಪಿ ಕಚೇರಿ ಆವರಣದಲ್ಲೆ ಹಣದ ಸಮೇತ ಗೋವಿಂದರಾಜುವನ್ನ ಬಂಧಿಸಿದ್ದಾರೆ, ಇನ್ನು ಹರೀಶ್ ಗಾಗಿ ಬಲೆ ಬೀಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.