ಸಿಂಧನೂರು:ಜ.05 ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಪ್ರಮುಖ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದು,ಈಗಾಗಲೇ ಪಕ್ಷದ ಟಿಕೇಟ್ ಗಾಗಿ ಆಕಾಂಕ್ಷಿಗಳು ಸಂಪರ್ಕ ಮಾಡುತ್ತಿದ್ದಾರೆ.ಜ.15ರ ನಂತರ ಪಕ್ಷ ಪ್ರಣಾಳಿಕೆ ಮ್ಯಾನಿಫೆಸ್ಟ್ ಬಿಡುಗಡೆ ಮಾಡುವುದಾಗಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತಿಳಿಸಿದರು.ದಕ್ಷಿಣ ಕರ್ನಾಟಕ ಯಾವ ರೀತಿಯಾಗಿ ಅಭಿವೃದ್ಧಿ ಹೊಂದಿದೆಯೋ ಅದೇ ರೀತಿಯಾಗಿ ಉತ್ತರ ಭಾಗದ ಕರ್ನಾಟಕವನ್ನು ಅಭಿವೃದ್ಧಿ ಮಾಡುತ್ತೇನೆ ಹಾಗೂ ದಕ್ಷಿಣ ಕರ್ನಾಟಕ ಭಾಗದ ಜನರು ಉತ್ತರ ಕರ್ನಾಟಕವನ್ನು ಹಿಂತಿರುಗಿ ನೋಡುವ ಹಾಗೆ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿಯ ಮಲ್ಲಿಕಾರ್ಜುನ್ ನೆಟ್ಟಂಕಿ ಹಾಗೂ ಗಾಲಿ ಜನಾರ್ಧನ್ ರೆಡ್ಡಿ ಯುವ ಬಳಗ ಮತ್ತು ಗ್ರಾಮದ ಮುಖಂಡರು ಉಪಸ್ಥಿತಿಯಲ್ಲಿದ್ದರು
ವರದಿ: ವೆಂಕಟೇಶ.ಹೆಚ್.ಭೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.