ಬಳ್ಳಾರಿ / ಕುರುಗೋಡು : ಕುಟುಂಬ ಕಲ್ಯಾಣ ಕಾರ್ಯಕ್ರಮ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ವಿಭಾಗ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಕುರುಗೋಡು ಸಮುದಾಯ ಆರೋಗ್ಯ ಕೇಂದ್ರ ಕುರುಗೋಡು ಪಿ ಎಮ್ ಶ್ರೀ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕುರುಗೋಡು ಇವರುಗಳ ಸಹಯೋಗದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಜುಲೈ 11 2025ರ ಪ್ರಯುಕ್ತ ಜಾಗೃತಿ ಜಾಥಾ ಕಾರ್ಯಕ್ರಮ ಜರುಗಿತು.
ಘೋಷಣೆ: ಯೋಚಿತ ಪೋಷಕತ್ವವನ್ನು ಸರಿಯಾದ ಕಾಲಮಿತಿಯಲ್ಲಿ ಸೂಕ್ತ ಅಂತರದಲ್ಲಿ ಗರ್ಭಧಾರಣೆ ಹೊಂದುವುದುರಿಂದ ಪಡೆಯಬಹುದು ಮಹಿಳೆಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿರತೆಯು ತಾಯಿತನಕ್ಕೆ ಸರಿಯಾದ ವಯಸ್ಸನ್ನು ನಿರ್ಧರಿಸುತ್ತದೆ ಎಂಬ ಘೋಷಣೆಯನ್ನು ಕೂಗುತ್ತಾ ಸಮುದಾಯ ಕೇಂದ್ರ ಕುರುಗೋಡು ಆವರಣದಿಂದ ಪ್ರಾರಂಭವಾಗಿ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನ ಮುಂಭಾಗ ರಸ್ತೆ, ಹಳೆ ಮೈಸೂರು ಬ್ಯಾಂಕ್ ರಸ್ತೆ ತೇರುಬೀದಿ ರಸ್ತೆ, ಶ್ರೀ ನಾಡಗೌಡರ ಮುಖ್ಯವೃತ್ತ ಪುನಃ ಶಾಲೆಗೆ ತಲುಪಿತು.
ಆಯುಷ್ ವೈದ್ಯಾಧಿಕಾರಿಗಳ ಡಾ. ರಂಗಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ ಜನಸಂಖ್ಯೆ ಹೆಚ್ಚಳದಿಂದ ದೇಶದ ಅಭಿವೃದ್ಧಿಗೆ ಮಾರಕ ಹೆಣ್ಣಾಗಲಿ ಗಂಡಾಗಲಿ ಎರಡೇ ಮಕ್ಕಳನ್ನು ಪಡೆಯಿರಿ ಪ್ರತಿಯೊಬ್ಬರೂ ಕುಟುಂಬ ಕಲ್ಯಾಣ ಯೋಜನೆಗಳನ್ನು ಅಳವಡಿಸಿಕೊಳ್ಳಿ ಅರಿವು ಸಹ ಮೂಡಿಸಿದರು.
ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಸಿದ್ದಪ್ಪ, ಶಾಲೆಯ ಮುಖ್ಯ ಗುರುಗಳಾದ ಲಕ್ಷ್ಮಿ ಚಕ್ರವರ್ತಿ, ಸಹ ಶಿಕ್ಷಕರಾದ ಸುಧಾಕರ್ ಸರ್, ಶ್ರೀ ಪ್ರಭಾಕರ್ ಸರ್, ಆಯುಷ್ ವೈದ್ಯಾಧಿಕಾರಿಗಳಾದ ಡಾ. ರಂಗಸ್ವಾಮಿ. ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಕೆ. ಮಂಜುನಾಥ್. ಎಲ್ ಎಚ್ ವಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಶ್ರೀಮತಿ ರೇಣುಕಾ ಮತ್ತು ಗಿರಿಜಾ, ಫಾರ್ಮಸಿ ಅಧಿಕಾರಿಗಳಾದ ನಂದೀಶ್, ಕುಟುಂಬ ಕಲ್ಯಾಣ ಆಪ್ತ ಸಮಾಲೋಚಕರಾದ ವನಜಾಕ್ಷಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಆರೋಗ್ಯ ಮಿತ್ರರಾದ ಪಿ.ಹೊನ್ನೂರ್ ಸಾಬ್, ಡಿಇಓ ಆದ ಮಹಾಲಕ್ಷ್ಮಿ , ಸ್ನೇಹಾಕ್ಲಿನಿಕ್ ಆಪ್ತ ಸಮಲೋಚಕರಾದ ಮಹಬೂಬ್ ಭಾಷಾ, ಆಶಾ ಕಾರ್ಯಕರ್ತರು, ಶಾಲಾ ವಿದ್ಯಾರ್ಥಿಗಳು
ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















