ಬಳ್ಳಾರಿ / ಕಂಪ್ಲಿ : ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಜನ್ಮದಿನದ ಪ್ರಯುಕ್ತ ಜೂ.11ರ ಗುರುವಾರದಂದು ವೀರಶೈವ ಲಿಂಗಾಯತ ಮಹಾ ವೇದಿಕೆಯಿಂದ ಪಟ್ಟಣದ ವೀರಶೈವ ಭವನದಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಸಂಘದ ತಾಲೂಕಾಧ್ಯಕ್ಷ ಎಸ್.ಎಂ.ನಾಗರಾಜ ಹೇಳಿದರು.
ಅವರು ಶನಿವಾರ ಪಟ್ಟಣದ ಶಾರದಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹದನ, ನೂತನ ಪದಾಧಿಕಾರಿಗಳ ಆಯ್ಕೆ, ಮುಂದಿನ ಸಂಘಟನಾತ್ಮಕ ಚಿಂತನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 2026ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.90%ಕ್ಕಿಂತ ಹೆಚ್ಚು ಅಂಕ ಪಡೆದ ಕಂಪ್ಲಿ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಎಮ್ಮಿಗನೂರು ಹಂಪಿ ಸಾವಿರ ದೇವರು, ಮಹಾಂತರ ಮಠದ ಪರಮ ಪೂಜ್ಯ ಶ್ರೀ ವಾಮದೇವ ಮಹಾಂತ ಶಿವಚಾರ್ಯ ಮಹಾಸ್ವಾಮಿ, ಕಂಪ್ಲಿ ಕಲ್ಯಾಣ ಚೌಕಿಮಠದ ಪರಮ ಪೂಜ್ಯ ಶ್ರೀ ಬಸವರಾಜ ಶಾಸ್ತ್ರಿ, ಮುಸ್ಲಿಂ ಧರ್ಮಗುರು ಶ್ರೀ ಹಜರತ್ ಸೈಯದ್ ಷಾ ಅಬುಲ್ ಹಸನ್ ಖಾದ್ರಿ, ಕಂಪ್ಲಿ ತಾಲೂಕು ಕ್ರಿಸ್ಟಿಯನ್ಸ್ ಪಾಸ್ಟರ್ಸ್ ವೆಲ್ವೇರ್ ಅಸೋಸಿಯೇಷನ್ ಶ್ರೀ ರೇವಪಾಲ್ ಪಂಪಾಪತಿ ಮತ್ತು ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾಧ್ಯಕ್ಷ ಶ್ರೀ ಹೊಸಕೋಟೆ ಜಗದೀಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವೀರಶೈವ ಲಿಂಗಾಯತ ಮಹಾ ವೇದಿಕೆಯ ರಾಜ್ಯಾಧ್ಯಕ್ಷ ಶ್ರೀ ಪ್ರಶಾಂತ್ ಕಲ್ಲೂರು ಅವರು ಮೊದಲ ಬಾರಿಗೆ ಕಂಪ್ಲಿಗೆ ಆಗಮಿಸಿ ಉದ್ಘಾಟಿಸಲಿದ್ದಾರೆ ಮತ್ತು ರಾಜ್ಯ ಉಪಾಧ್ಯಕ್ಷ ಶ್ರೀ ಬಿ.ವಿ.ಗೌಡ್ರು, ತಾಲೂಕಾಧ್ಯಕ್ಷ ಶ್ರೀ ಬಳೆ ಮಲ್ಲಿಕಾರ್ಜುನ ಇವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಹಾಗೂ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ, ಸಚಿವ ಸಂತೋಷ್ ಲಾಡ್, ಸ್ಥಳೀಯ ಶಾಸಕ ಜೆ.ಎನ್.ಗಣೇಶ ಸೇರಿದಂತೆ ಅನೇಕ ಜನಪ್ರತಿನಿಧಿ, ವೀರಶೈವ ಸಮಾಜದ ಮುಖಂಡರು, ಸರ್ವ ಜನಾಂಗದದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ನಂತರ ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಮಾತನಾಡಿ, ಮೊದಲ ಬಾರಿಗೆ ಕಂಪ್ಲಿಯಲ್ಲಿ ಜೂ.11ರಂದು ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ. ಮತ್ತು ರಾಜ್ಯಾಧ್ಯಕ್ಷ ಪ್ರಶಾಂತ ಕಲ್ಲೂರು ಆಗಮಿಸಲಿದ್ದಾರೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಹಲವು ಸಮಿತಿ ನೇಮಿಸಿ, ಜವಾಬ್ದಾರಿ ನೀಡಲಾಗುವುದು. ಮೊದಲಿಗೆ ಬೈಕ್ ರ‍್ಯಾಲಿ ಮಾಡಿದ ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸರ್ವ ಸಮಾಜದವರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದರು. ನಂತರ ಪ್ರತಿಭಾ ಪುರಸ್ಕಾರದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅರವಿ ಬಸನಗೌಡ, ಕೆ.ಎಂ.ಹೇಮಯ್ಯಸ್ವಾಮಿ, ಪಿ.ಮೂಕಯ್ಯಸ್ವಾಮಿ, ಇಟಗಿ ಬಸವರಾಜಗೌಡ, ಜಿ.ಲಿಂಗನಗೌಡ, ಕಲ್ಗುಡಿ ವಿಶ್ವನಾಥ್, ಮೆಟ್ರಿ ಹೊನ್ನಳ್ಳಿ ಶಿವಪುತ್ರಪ್ಪ, ಬಿ.ಮಹೇಶಗೌಡ, ಮಾಲಿಕೊಟ್ರಪ್ಪ, ಬಿ.ವಿ.ಗೌಡ, ಎಸ್.ಚಂದ್ರಶೇಖರಗೌಡ, ಬಳೆ ಮಲ್ಲಿಕಾರ್ಜುನ, ಜಗದೀಶ್, ಮೆಟ್ರಿ ಗಂಗಾಧರಗೌಡ, ಮನೋಜಗೌಡ, ಹಂಪಾರೆಡ್ಡಿ ಸೇರಿದಂತೆ ವೀರಶೈವ ಸಮಾಜದವರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















