ಅಂದು ಅದೆಷ್ಟು ಬಿಡುವು ಸಿಗುತಿತ್ತು
ಇಂದು ವಿರಾಮವಿಲ್ಲದ ಬದುಕು ನನ್ನದಾಗಿದೆ. ಮನಗಳು ಒಡಲು ತುಂಬಿ ಮಾತನಾಡುತ್ತಿತ್ತು ಆಗ, ಈಗ ಮನಬಿಚ್ಚಿ ಸಂಭಾಷಣೆಯೇ ಇಲ್ಲದ ಬಾಳು ಸಾಗುತ್ತಿದ್ದೇವೆ. ಜೊತೆಗೂಡಿ ಮಂಥಿಸುತ್ತಿದ್ದ ಆ ದಿನಗಳು ಬಲುಚೆನ್ನ.
ಒಡನಾಟ, ಭಾಂದವ್ಯ, ಚಿರಸ್ಮರಣೆ ಎಲ್ಲವೂ ಅಘನ್ಯ. ಓಡಾಡುತ್ತಿದ್ದ ಆ ಸುಂದರ ನೆನಪಿನ ಛಾಯೆ ಅಮಲು ಕೊಡುತ್ತಿತ್ತು.
ಆನಂತರದ ಸುಮಧುರ ಕ್ಷಣಗಳಾದ ಬೈಸಿಕಲ್ ನ ಚಿತ್ತಾರದ ಕೂರ್ಮೆ ಎಷ್ಟೊತ್ತಿಗೆ ಬೇಕಾದ್ರು ತಲುಪುತ್ತಿದ್ದ ಮಿತೃತ್ವ,
ವಾತ್ಸಲ್ಯದ ಕೊಡುಗೆ ಚರ್ಚಿಸುತ್ತಿದ್ದ ಘಳಿಗೆಯು ಅಮೋಘ.
ಅಂದಿನ ಆ ಚಿತ್ರಣ ಕಣ್ಮುಂದೆ ಬಂದ್ರೆ ಆ ನೋಟವೇ ಅತ್ಯಮೂಲ್ಯವೆನ್ನಬಹುದು.
ಅವು ಕಣ್ಮರೆಯಾಗದೆ ಮತ್ತೆ ಬಂದರೆ ಹೇಗಿರಬಹುದು ಊಹಿಸಲು ಅಸಾಧ್ಯವೆನ್ನಬಹುದು. ಮರುಕಳಿಸಿದರೆ ಏನೆಲ್ಲಾ ಪ್ರಯೋಜನವಾಗಬಹುದು. ಅದ ಚಿಂತಿಸಿದರೆ ಫಲವೋ, ಶೂನ್ಯವೋ ಪರಮಾತ್ಮನ ಕರುಣೆ ಅಲ್ಲವೇ.
✍🏻 ದೇವರಾಜು ಬಿ ಎಸ್ ಹೊಸಹೊಳಲು.
ಕಾವ್ಯನಾಮ : ಅರಸು




















