ಹನೂರು ತಾಲೂಕಿನಿಂದ ಬಂಡಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಸೇತುವೆ ಕಾಮಗಾರಿ ವಿಳಂಬ ಭಾರಿ ವಾಹನಗಳು ಸಂಚರಿಸಲು ಕಷ್ಟಕರ ಅದೆ ಮಾರ್ಗದ ರಸ್ತೆಯಲ್ಲಿ ಮಣ್ಣಿನ ಪ್ಯಾಚ್ ವರ್ಕ್
ಹನೂರು ತಾಲೂಕಿನಿಂದ ಬಂಡಳ್ಳಿ ಗ್ರಾಮಕ್ಕೆ ಸಂಚರಿಸುವ ಮುಖ್ಯ ರಸ್ತೆಯು ತುಂಬಾ ಹದಗಿಟ್ಟಿದೆ ರಸ್ತೆಯಲ್ಲಿ ಪ್ಯಾಚ್ ವರ್ಕ್ ಕೆಲಸ ಆರಂಭವಾಗಿದ್ದರೂ ಕೇವಲ ಮಣ್ಣಿನಿಂದ ರಸ್ತೆಯ ಮುಚ್ಚಲಾಗುತ್ತಿದೆ ಮಳೆ ಬಂದ ಸಂದರ್ಭದಲ್ಲಿ ಆ ಪ್ಯಾಚ್ ಗಳಿಗೆ ಹಾಕಿರುವ ಮಣ್ಣು ಕೊಚ್ಚಿ ಹೋಗಬಹುದು ಅಥವಾ ವಾಹನಗಳನ್ನು ಹಿಡಿದಿಟ್ಟು ವಾಹನಗಳು ಜಾರುವ ಸಂಭವವಿದೆ ಆದ್ದರಿಂದ ಪ್ರಯಾಣಿಕರು ಕಷ್ಟ ಪಡಬೇಕಾಗಿದೆ ಹಾಗೂ ಅದೆ ಮಾರ್ಗದ ಸೇತುವೆ ಕಾಮಗಾರಿ ವಿಳಂಬ ಆಗಿದೆ ಈ ಸೇತುವೆ ಇಲ್ಲದ ಕಾರಣ ವಾಹನಗಳು ಬೀಳುವ ಸಂಧರ್ಭ ಹೆಚ್ಚಾಗಿದೆ ಹಾಗೆಯೇ ಇದೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಯ ಪ್ಯಾಚ್ ವರ್ಕ್ ಗಳು ಮಣ್ಣಿನಿಂದ ಆಗುತ್ತಿರುವ ಹಿನ್ನೆಲೆಯಲ್ಲಿ ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಆದ್ದರಿಂದ ಆದಷ್ಟು ಬೇಗ ವಾಹನಗಳು ಸಂಚರಿಸಲು ಸೇತುವೆಗಳ ನಿರ್ಮಾಣಪೂರ್ಣಗೊಳ್ಳಬೇಕು ಮತ್ತು ಪ್ಯಾಚ್ ವರ್ಕ್ ಸರಿಯಾದ ರೀತಿಯಲ್ಲಿ ಡಾಂಬರೀಕರಣ ಮಾಡಿ ಮುಗಿಸಬೇಕು ಎಂದು ಜನರ ಮನವಿ ಆದರೆ ಜನಪ್ರತಿನಿಧಿಗಳು ಮತ್ತು ಕಾಂಟ್ರಾಕ್ಟರ್ ಗಳು ಇದಕ್ಕೆ ಸಹಕರಿಸುವರೇ? ಅಥವಾ ಇಲ್ಲವೇ ಯಕ್ಷಪ್ರಶ್ನೆಯಾಗಿದೆ ಎಲ್ಲದಕ್ಕೂ ಕಾಲವೇ ಉತ್ತರ ನೀಡಬೇಕು ಕಾದು ನೋಡಬೇಕು ಅಷ್ಟೇ
ವರದಿ-ಉಸ್ಮಾನ್ ಖಾನ್