ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿವಿಧ ಸಂಘಟನೆಗಳ ಮಹಾ ಒಕ್ಕೂಟದಿಂದ ಅಥಣಿ ಬಂದ್ ಯಶಸ್ವಿ.

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನ ಮಾಡಿದ ಹಾಗೂ ವಿಶ್ವರತ್ನ ಡಾ|| ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ರಾಕೇಶ್ ಕಿಶೋರ್ ಹಾಗೂ ಅನಿಲ್ ಮಿಶ್ರಾ ಇವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಹಾಗೂ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಅಥಣಿಯ ವಿವಿಧ ಸಂಘಟನೆಗಳ ಮಹಾ ಒಕ್ಕೂಟದಿಂದ ಅಥಣಿ ಬಂದ್ ಮಾಡಿ ಯಶಸ್ವಿಗೊಳಿಸಲಾಯಿತು.

ಬೆಳಿಗ್ಗೆಯಿಂದಲೇ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ನೀಡಿದ್ದಾರೆ. ವಿವಿಧ ದಲಿತ ಸಂಘಟನೆಗಳ ನಾಯಕರು ಹಾಗೂ ಕಾರ್ಯಕರ್ತರು ಬೆಂಬಲ ನೀಡಿದರು.

ಪೊಲೀಸರು ಭದ್ರತಾ ವ್ಯವಸ್ಥೆ ಕಟ್ಟಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಸಾರಿಗೆ ಸಂಚಾರ ಕೆಲ ಹೊತ್ತು ವ್ಯತ್ಯಯಗೊಂಡಿದ್ದರೂ, ಪರಿಸ್ಥಿತಿ ನಂತರ ಸಾಮಾನ್ಯ ಸ್ಥಿತಿಗೆ ಮರಳಿದೆ.
ಜನರ ಶಾಂತ ಸಹಕಾರದಿಂದ ಬಂದ್ ಶಾಂತಿಯುತವಾಗಿ ಸಂಪನ್ನವಾಯಿತು.

ಇದೇ ವೇಳೆ ವಿವಿಧ ಸಂಘಟನೆಗಳ ಮಹಾ ಒಕ್ಕೂಟದಿಂದ ಅಥಣಿಯ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ನೀಡಲಾಯಿತು.

ಇದೇ ವೇಳೆ ಅಥಣಿಯ ಖ್ಯಾತ ವಕೀಲರಾದ ಮಿತೀಶ್ ಪಟ್ಟಣ ಅವರು ಮಾತನಾಡಿ ರಾಕೇಶ್ ಕಿಶೋರ ಎಂಬುವರು ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಯತ್ನಿಸಿದ್ದಾನೆ. ಇವನ ಹಿಂದೆ ಬೆನ್ನೆಲುಬಾಗಿ ಆರ್ ಎಸ್ ಎಸ್ ನಿಂತಿದ್ದಾರೆ ಎಂದು ವಕೀಲರು ಹೇಳಿದರು ಏಕೆಂದರೆ ಘಟನೆ ನಡೆದಿದ್ದು 6 ತಾರೀಖಿಗೆ ಆದರೆ ಇನ್ನು ಸಹ ಆರ್ ಎಸ್ ಎಸ್ ನವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಅವರ ಕುಮ್ಮಕ್ಕಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಹೇಳಿದರು. ಅದಲ್ಲದೆ ನಮ್ಮ ವಿಷಯಕ್ಕೆ ಬಂದರೆ ಪೆನ್ನು ಹಿಡಿಯುವ ಕೈಯಲ್ಲಿ ಖಡ್ಗ ಹಿಡಿಯಬೇಕಾಗುತ್ತದೆ ಎಂದು ಹೇಳಿದರು.

ಇದೆ ಪ್ರತಿಭಟನೆಯಲ್ಲಿ ದಲಿತ ಯುವ ಮುಖಂಡರಾದ ಮಹಾಂತೇಶ್ ಬಾಡಗಿ, ವಕೀಲರಾದ ಶಶಿಕಾಂತ್ ಬಾಡಗಿ, ಸಂಕ ವಕೀಲರು, ಖೋಬ್ಬರಿ ವಕೀಲರು, ವನಜೋಳೆ ವಕೀಲರು, ದಯಾನಂದ ವಾಘಮೊರೆ, ಸದಾಶಿವ ಕಾಂಬಳೆ, ಅಪ್ಪಸಾಬ್ ಘಟಕಾಂಬಳೆ, ಕಪಿಲ್ ಘಟಕಾಂಬಳೆ, ವಿನೋದ್ ಪಾಟೀಲ, ನಂದು ಬನಸೋಡೆ, ಮಂಜು ಹೋಳಿಕಟ್ಟಿ , ಶಬ್ಬೀರ ಸಾತಬಚ್ಚೆ ,ಅಯಾಜ್ ಮಾಸ್ಟರ್, ಸಚಿನ್ ಕಾಂಬಳೆ,ರೂಪ ಕಾಂಬಳೆ, ಸವಿತಾ ಕಾಂಬಳೆ, ಜಯಶ್ರೀ ಕಾಂಬಳೆ, ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ದಲಿತ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ. ವಿಠ್ಠಲ ಖೋಕಾಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!