ಹನೂರು :ತಾಲ್ಲೂಕಿನ ಸೂಳೆರೀಪಾಳ್ಯ ಗ್ರಾ. ಪಂ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಮಾರಮ್ಮನ ದೇವಾಲಯದ ಆವರಣದಲ್ಲಿ ನೀರಿನ ಪೈಪ್ ಹೊಡೆದು ನೀರು ಪೋಲಾಗುತ್ತಿದ್ದರೂ ಇಲ್ಲಿನ ಜನ ಪ್ರತಿನಿಧಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ.
ಕಳೆದ 10 ದಿನಗಳಿಂದ ನೀರಿನ ಪೈಪ್ ಹೊಡೆದು ನೀರು ಪೋಲಾಗುತ್ತಿದ್ದರೂ ಇಲ್ಲಿನ ವಾಟರ್ ಮ್ಯಾನ್ ಗಳು ದಿನ ನಿತ್ಯ ಇದೆ ದಾರಿಯಲ್ಲಿ ಓಡಾಡುತ್ತಾ ಇದ್ದರು ಇತ್ತ ಗಮನ ಹರಿಸಿ ಸರಿಪಡಿಸುವಲ್ಲಿ ಗ್ರಾ. ಪಂ ವಿಪಲವಾಗಿದೆ. ಎಷ್ಟೋ ಕಡೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಆದರೆ ಇಲ್ಲಿನ ಪಂಚಾಯತ್ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ.
ಇದೇ ವೇಳೆ ಮಾತನಾಡಿದ ಪಿ ಡಿ ಓ ಸುರೇಶ್ ರವರು ನನ್ನ ಗಮನಕ್ಕೆ ಬಂದಿದ್ದು, ಅದನ್ನ ಅತೀ ಶೀಘ್ರದಲ್ಲೆ ಸರಿಪಡಿಸುತ್ತೇವೆ ಎಂದರು.
ಆದರೆ ಅವರು ಹೇಳಿ 8 ದಿನವಾದರೂ ಸರಿಪಡಿಸಿಲ್ಲ.
ಮುಂದಾದರೂ ಕ್ರಮ ಕೈ ಗೊಳ್ಳುತ್ತಾರ ಕಾದು ನೋಡ ಬೇಕಿದೆ.
ವರದಿ:ಉಸ್ಮಾನ್ ಖಾನ್