ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನಕದಾಸರು ಜಾತಿ ಮತ್ತು ವರ್ಗ ರಹಿತ ಸಮಾಜ ನಿರ್ಮಾಣ ಗುರಿ ಹೊಂದಿದ್ದರು : ಡಾ. ಗಣಪತಿ ಲಮಾಣಿ

ಕೊಪ್ಪಳ : ದಾಸ ಶ್ರೇಷ್ಠ ಭಕ್ತ ಕನಕದಾಸರು ಜಾತಿ ಮತ್ತು ವರ್ಗ ರಹಿತ ಸಮಾಜದ ನಿರ್ಮಾಣದ ಗುರಿ ಹೊಂದಿದ್ದರು ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿಯವರು ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ದಂದು ಹಮ್ಮಿಕೊಂಡಿದ್ದ ದಾಸ ಶ್ರೇಷ್ಠ ಭಕ್ತ ಕನಕದಾಸ ಅವರ 538 ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ
ಭಾರತದಲ್ಲಿ ಹಲವಾರು ಜಾತಿ ಮತ್ತು ಧರ್ಮಗಳಿವೆ, ಎಲ್ಲರೂ ಸಮಾನರು ಎಂಬ ಆಶಯವನ್ನು ಕನಕದಾಸರು ಹೊಂದಿದ್ದರು. ಯಾರೂ ಜಾತಿ ಭೇದ ಭಾವ, ಧರ್ಮ ಭೇದ ಭಾವ ಮಾಡಬಾರದು ಎಂದು ತಮ್ಮ ಕೀರ್ತನೆಗಳ ಮೂಲಕ ನಮ್ಮ ಸಮಾಜಕ್ಕೆ ತಿಳಿಸಿದ್ದಾರೆ. ಕನಕದಾಸರು ನಮ್ಮ ಸಮಾಜಕ್ಕೆ ಉತ್ತಮವಾದ ವಿಚಾರ ಗಳನ್ನು ನೀಡಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಮತ್ತು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ .
ಗವಿಸಿದ್ದಪ್ಪ ಮುತ್ತಾಳ ಅವರು ಮಾತನಾಡಿ ಕನಕದಾಸರ ತಂದೆಯವರು ವಿಜಯನಗರ ಸಾಮ್ರಾಜ್ಯ ದಲ್ಲಿ ಸೈನ್ಯದ ದಂಡ ನಾಯಕರಾಗಿದ್ದರು. ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದರು.
ಕನಕದಾಸರು ರಾಮಧಾನ್ಯ ಚರಿತೆ, ಮೋಹನ ತರಂಗಣಿ, ನಳ ಚರಿತೆ, ಇನ್ನೂ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಜಾತಿ ಭೇದ ಭಾವಗಳ ಕುರಿತು ತಮ್ಮ ಕೀರ್ತನೆಗಳಲ್ಲಿ ವ್ಯಕ್ತ ಪಡಿಸಿದ್ದಾರೆ. ಅಂದಿನ ಕಾಲದಲ್ಲಿ ಉಡುಪಿ ಕೃಷ್ಣ ಮಠಕ್ಕೆ ಕೆಳ ವರ್ಗಗಳಿಗೆ ಪ್ರವೇಶ ಇರಲಿಲ್ಲ. ಕನಕದಾಸರು ದೇವಸ್ಥಾನ ಹೊರಗಡೆಯಿಂದ ದರ್ಶನ ಪಡೆದರು. ಅವರ ದರ್ಶನ ಪಡೆದ ಸ್ಥಳವನ್ನು ಇಂದು ನವಗ್ರಹ ಕಿಂಡಿ, ಕನಕನ ಕಿಂಡಿ ಎಂದು ಕರೆಯುತ್ತಿದ್ದಾರೆ. ಭಕ್ತ ಕನಕದಾಸರ ವಿಚಾರಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಮತ್ತು ವಾಣಿಜ್ಯಶಾಸ್ತ್ರ ದ ಮುಖ್ಯಸ್ಥರಾದ ಶ್ರೀ ವಿಠೋಬ ಎಸ್ ಅವರು ಮಾತನಾಡಿ ದಾಸ ಅಂದರೆ ಅರ್ಪಿಸಿ ಕೊಳ್ಳುವುದು ಎಂದರ್ಥ. ಕನಕ ದಾಸರು ಸಮಾಜಕ್ಕೆ ತಮ್ಮನ್ನು ಸಮಾಜಕ್ಕೆ ಅರ್ಪಿಸಿಕೊಂಡಿದ್ದರು. ಭಾರತದಲ್ಲಿ ವಚನಕಾರರು, ತತ್ವ ಪದಕಾರರು, ಕನಕದಾಸರು, ಪುರಂದಾಸರು, ಸೂಫಿಗಳು, ಸಂತ ತುಕಾರಾಂ ಇನ್ನೂ ಹಲವಾರು ಸಂತರು ಭಕ್ತಿ ಪಂಥ ಚಳುವಳಿಯ ಮೂಲಕ ಸಮಾಜದಲ್ಲಿರುವ ಜಾತಿ, ಮೂಢನಂಬಿಕೆ, ಅಂದ ಶ್ರದ್ದೆ, ಕಂದಚಾರಗಳನ್ನು ಹೋಗಲಾಡಿಸಲು ದೊಡ್ಡ ಮಟ್ಟದ ಆಧ್ಯಾತ್ಮಿಕ ಹೋರಾಟವನ್ನು ಮಾಡಿದ್ದಾರೆ. ಇಂದು ನಮ್ಮ ಸಮಾಜದಲ್ಲಿ ಎಲ್ಲರೂ ತಮ್ಮ ತಮ್ಮ ಜಾತಿ ಸಂಘಟನೆ ಗಳನ್ನು ಕಟ್ಟುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕಾರದ ಶ್ರೀ ಮತಿ ನಾಗರತ್ನ ತಮ್ಮಿನಾಳ, ಡಾ. ಹುಲಿಗೆಮ್ಮ, ಡಾ. ಮಲ್ಲಿಕಾರ್ಜುನ, ಡಾ. ನರಸಿಂಹ, ಶುಭ, ಹನುಮಪ್ಪ ಮೇಟಿ, ಉಮೇಶ್ ಕಾತರಾಕಿ, ಶಿವಪ್ರಸಾದ್ ಹಾದಿಮನಿ, ತಾರಮ್ಮ, ಲಕ್ಷ್ಮೀ, ಗವಿಸಿದ್ದಪ್ಪ ಅಜ್ಜ ಹಾಗೂ ಕಾಲೇಜಿನ ಭೋಧಕ ಮತ್ತು ಭೋದಕೇತರ ಸಿಬ್ಬಂದಿಗಳು ಮತ್ತು ಕಾಲೇಜಿನ ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಹಿರಿಯ ಪ್ರಾಧ್ಯಾಪಕಿ ಮತ್ತು ಸಾಂಸ್ಕೃತಿಕ ಘಟಕದ ಸಂಚಾಲಕಿ ಡಾ. ಹುಲಿಗೆಮ್ಮ ನಿರೂಪಿಸಿ ಸ್ವಾಗತಿಸಿದರು. ಡಾ. ನರಸಿಂಹ ವಂದಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!