ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಳ್ಳಿಯ ದಾರಿ

ಒಂದು ಕಾಲದಲ್ಲಿ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ತೇರು ಎಂಬ ಸುಂದರವಾದ ಹಳ್ಳಿ ಇತ್ತು. ಆ ಹಳ್ಳಿಯ ಸುತ್ತಲೂ ದಟ್ಟವಾದ ಅರಣ್ಯವಿತ್ತು. ಹಳ್ಳಿಯ ನಡುವೆ ಒಂದು ದೊಡ್ಡ ಮರವಿತ್ತು, ಅದರ ಕೆಳಗೆ ಹಿರಿಯರು ಕುಳಿತುಕೊಳ್ಳುತ್ತಿದ್ದರು. ಅದಕ್ಕೆ ‘ಆಲದ ಮರ’ ಎಂದು ಹೆಸರು. ಆಲದ ಮರವೇ ಹಳ್ಳಿಯ ಕೇಂದ್ರಬಿಂದುವಾಗಿತ್ತು.

ಆ ಹಳ್ಳಿಯಲ್ಲಿ ಗೋಪಣ್ಣ ಎಂಬ ವೃದ್ಧ ಕೃಷಿಕನಿದ್ದ, ಅವನಿಗೆ ಒಬ್ಬನೇ ಮಗ, ಅವನ ಹೆಸರು ಕಿಶನ್. ಕಿಶನ್ ಹಳ್ಳಿಯಲ್ಲಿದ್ದರೂ, ನಗರದ ಆಧುನಿಕ ಜೀವನಕ್ಕೆ ಮನಸೋತಿದ್ದ. ಹಳ್ಳಿಯ ಸರಳ ಜೀವನ, ಕೃಷಿ, ಮತ್ತು ಸಂಪ್ರದಾಯಗಳು ಅವನಿಗೆ ಇಷ್ಟವಿರಲಿಲ್ಲ. ನಾನು ನಗರಕ್ಕೆ ಹೋಗಿ ದೊಡ್ಡ ಮನುಷ್ಯನಾಗಬೇಕು‌ ಎಂದು ಅವನು ಕನಸು ಕಾಣುತ್ತಿದ್ದ.

ಒಂದು ದಿನ, ಗೋಪಣ್ಣನಿಗೆ ಜ್ವರ ಬಂತು. ಔಷಧಿಗಾಗಿ ನಗರಕ್ಕೆ ಹೋಗಬೇಕಾಯಿತು. ಕಿಶನ್ ತಂದೆಯನ್ನು ಕರೆದುಕೊಂಡು ನಗರಕ್ಕೆ ಹೋದ. ಅಲ್ಲಿ ಅವನು ದೊಡ್ಡ ದೊಡ್ಡ ಕಟ್ಟಡಗಳು, ಆಧುನಿಕ , ಮತ್ತು ಅತಿ ವೇಗದ ಜೀವನವನ್ನು ನೋಡಿದ. ಅದು ಅವನಿಗೆ ಬಹಳ ಇಷ್ಟವಾಯಿತು. ಆಗ ಅವನು ಗೋಪಣ್ಣನ ಬಳಿ, ನಾನು ಇಲ್ಲಿಯೇ ಇರುತ್ತೇನೆ, ಇಲ್ಲಿಯೇ ಕೆಲಸ ಮಾಡುತ್ತೇನೆ ಎಂದನು, ಗೋಪಣ್ಣನಿಗೆ ಬೇಸರವಾಯಿತು. ಆದರೆ, ಮಗನ ಆಸೆಗೆ ಅಡ್ಡಿ ಪಡಿಸಲಿಲ್ಲ. ಸರಿ, ಆದರೆ ನಿನ್ನ ಸಂಸ್ಕೃತಿ ಮತ್ತು ಮೂಲವನ್ನು ಎಂದಿಗೂ ಮರೆಯಬೇಡ ಎಂದು ಗೋಪಣ್ಣ ಹೇಳಿದರು.

ಕಾಲ ಕಳೆದಂತೆ, ಕಿಶನ್ ನಗರದಲ್ಲಿ ಕೆಲಸ ಮಾಡುತ್ತಿದ್ದ, ಆದರೆ ಜೀವನ ಸುಲಭವಾಗಿರಲಿಲ್ಲ. ಸ್ಪರ್ಧೆ ಮತ್ತು ಒತ್ತಡ ಹೆಚ್ಚಾಗಿತ್ತು. ಅಲ್ಲಿ ಯಾರೂ ಒಬ್ಬರಿಗೊಬ್ಬರು ಸಹಾಯ ಮಾಡುವುದಿಲ್ಲ. ತನ್ನ ಬೇರನ್ನು ಮರೆತು, ಅಹಂಕಾರಿ ಆಗ್ತಾ ಇತ್ತು.

ಒಂದು ರಾತ್ರಿ, ತನ್ನದೇ ಮನೆಯ ನೆನಪಾಯಿತು. ನದಿ, ಗದ್ದೆಗಳು, ಆಲದ ಮರ – ಇದೆಲ್ಲ ಅವನ ಕಣ್ಣ ಮುಂದೆ ಬಂದವು. ತಕ್ಷಣ, ಅವನು ತನ್ನ ಕೆಲಸ ಬಿಟ್ಟು ಹಳ್ಳಿಗೆ ಹೋಗಲು ನಿರ್ಧರಿಸಿದ. ಅವನು ಹಳ್ಳಿಗೆ ಹಿಂತಿರುಗಿದಾಗ, ಗೋಪಣ್ಣನು ಕಿಶನ್ ಅವರನ್ನು ನೋಡಿದ ಕೂಡಲೇ ಅವನ ಕಣ್ಣುಗಳು ತೇವಗೊಂಡವು.

ಕಿಶನ್ ತನ್ನ ಹಳೆಯ ಜೀವನಕ್ಕೆ ಹಿಂತಿರುಗಲು ನಿರ್ಧರಿಸಿ  ಕೃಷಿಯನ್ನು ಮತ್ತೆ ಪ್ರಾರಂಭಿಸಿದ. ಮತ್ತು ನಗರದಲ್ಲಿನ ತಂತ್ರಜ್ಞಾನವನ್ನು ಕೃಷಿಗೆ ಅಳವಡಿಸಿಕೊಂಡು ಹಳ್ಳಿಯ ಜನರಿಗೆ ಸಹಾಯ ಮಾಡಿದ. ಈಗ ಹಳ್ಳಿಯ ಪ್ರಗತಿ ಹೆಚ್ಚಾಯಿತು. ಜನರು ಸಂತೋಷದಿಂದ ಬದುಕುತಿದ್ದರು. ಕಿಶನ್‌ನನ್ನು ಜನರು ಹಳ್ಳಿಯ ಪ್ರಗತಿಯ ರೂವಾರಿ ಎಂದರು.

ಕಿಶನ್‌ಗೆ ಈಗ ಅರ್ಥವಾಯಿತು. ನಿಜವಾದ ಸುಖ ಮತ್ತು ಶಾಂತಿ ಯಾವುದೇ ನಗರದ ಆಡಂಬರದ ಜೀವನದಲ್ಲಿ ಇಲ್ಲ. ಅದು ನಮ್ಮ ಬೇರಿನಲ್ಲಿದೆ, ನಮ್ಮ ಸಂಸ್ಕೃತಿಯಲ್ಲಿದೆ ಮತ್ತು ನಮ್ಮ ಹಳ್ಳಿಯ ಸರಳ ಜೀವನದಲ್ಲಿದೆ. ಹೀಗೆ ಕಿಶನ್ ತನ್ನ ಹಳ್ಳಿಯನ್ನು ಉಳಿಸಿಕೊಂಡನು ಮತ್ತು ಗೌಪಣ್ಣ ಅವರ ಮಗನಾಗಿದ್ದಕ್ಕೆ ಅವರಿಗೆ ಹೆಮ್ಮೆ ಇತ್ತು.

  • ಸಂದೀಪ್ ಜೋಷಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!