ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಿಕ್ಷಣದ ಹರಿವು…

ಭಾರತ ಪ್ರಾಚೀನ ಕಾಲದಿಂದಲೂ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡಿತ್ತು ಮತ್ತು ಅಸ್ತಿತ್ವದಲ್ಲಿತ್ತು, ಎನ್ನುವುದಕ್ಕೆ ಅನೇಕ ಪ್ರಾಚ್ಯ ಆಕರಗಳು ಸಾಕ್ಷಿಯಾಗಿ ಶೈಕ್ಷಣಿಕ ಅಂಶಗಳ ಬಗ್ಗೆ ಮಾಹಿತಿ ಒದಗಿಸುತ್ತವೆ, ಸಿಂಧೂ ನಾಗರಿಕತೆಯ ಕಾಲದಲ್ಲಿ ಚಿಹ್ನೆ, ಚಿತ್ರಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವ ಪರಿಪಾಠವಿತ್ತು. ಆರ್ಯರು ಭಾರತಕ್ಕೆ ಆಗಮಿಸಿದ ಮೇಲೆ ವೇದಗಳು, ಉಪನಿಷತ್ತುಗಳು ಸೃಷ್ಟಿಯಾದವು ಮುಂದುವರೆದು ರಾಮಾಯಣ, ಮಹಾಭಾರತ ದಂತಹ ಮಹಾಕಾವ್ಯಗಳು ರಚನೆಯಾದವು, ಇವುಗಳು ಸಂಸ್ಕೃತ ಭಾಷೆಯಲ್ಲಿ ರಚಿತವಾಗಿರುವುದರಿಂದ ಸಂಸ್ಕೃತ ತಿಳಿಯದ ಬಹು ಸಂಖ್ಯಾತರಿಗೆ ಇವುಗಳ ಆಳ-ಅಗಲ ತಿಳಿಯದಾಯಿತು, ಶಿಕ್ಷಣವು ಕೇವಲ ಬ್ರಾಹ್ಮಣ ಮತ್ತು ರಾಜಪರಿವಾರಕ್ಕೆ ಸೀಮಿತಗೊಳಿಸಿಕೊಂಡಿದ್ದರು, ಮಠಗಳು, ದೇವಾಲಯ, ಗುರು ಕುಲಗಳು ಕಲಿಕಾ ಕೇಂದ್ರಗಳಾಗಿದ್ದು ಇಲ್ಲಿ ಸಾಂಪ್ರದಾಯಿಕ ವಿಷಯ ಗಳಾದ ವೇದಗಳು, ಉಪನಿಷತ್ ಭಗವದ್ಗೀತೆ, ಯುದ್ಧ ಕಲೆ ಮತ್ತಿತರ ಕಲಿಕಾ ವಿಷಯಗಳಿದ್ದವು, ಮುಂದೆ ರಾಜ ಮಹಾರಾಜರ ಆಶ್ರಯದಲ್ಲಿ ನಳಂದಾ, ವೈಜಯಂತಿ, ವಿಕ್ರಮ ಶೀಲ, ವಲ್ಲಭಿ, ಒದಂತಪುರಿಗಳು ಪ್ರಮುಖ ವಿಶ್ವವಿದ್ಯಾನಿಲಯಗಳಾಗಿ ರೂಪುಗೊಂಡವು, ಇಲ್ಲಿಯೂ ಕೂಡಾ ಕಲಿಕೆ ಉನ್ನತ ವರ್ಗಕ್ಕೆ ಸೀಮಿತವಾಗಿತ್ತು. ಮಧ್ಯಯುಗದಲ್ಲಿ ಅಂದರೆ ಮುಸ್ಲಿಮರ ಆಳ್ವಿಕೆಯ ಕಾಲದಲ್ಲಿ 9ನೇ ಶತಮಾನದಿಂದ 17ನೇ ಶತಮಾನದವರೆಗೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ ಕಂಡಿತು. ಪರ್ಶಿಯನ್ ,ಉರ್ದು ಭಾಷೆಗಳ ಪರಿಚಯ ವಾಯಿತು. ಮದರಸಗಳಲ್ಲಿ ಧರ್ಮ,ಕಲೆ, ಸಾಹಿತ್ಯ,ಗಣಿತ, ವೈದ್ಯಕೀಯ, ಇತಿಹಾಸ ಮತ್ತಿತರ ವಿಷಯಗಳನ್ನು ಸಂಸ್ಕೃತ, ಪರ್ಶಿಯನ್, ಅರೇಬಿಕ್ ಭಾಷೆಗಳಲ್ಲಿ ಅಭ್ಯಾಸ ಮಾಡಬೇಕಿತ್ತು. ರಾಜತ್ವದಲ್ಲಿ ತಮ್ಮ ತಮ್ಮ ಅರಮನೆಗಳಲ್ಲಿ ಕವಿಗಳು ಮತ್ತು ವಿದ್ವಾಂಸರುಗಳಿಗೆ ಆಶ್ರಯ ನೀಡಿದ್ದರು, ಆಯಾ ಕಾಲಘಟ್ಟದ ಪೋಷಿತ ಭಾಷೆಗಳಲ್ಲಿ ವಿದ್ವಾಂಸರು ಕೃತಿಗಳನ್ನು ರಚಿಸುತ್ತಿದ್ದರು. ರಾಜ್ಯದಲ್ಲಿ ಇತರ ಸಾಮಾನ್ಯ ಸಮಾಜಗಳು ಕುಲ ಕಸುಬುಗಳಿಗೆ ಸೀಮಿತವಾಗಿದ್ಧವು ಕಸುಬುಗಳ ಕಲಿಕೆಯೇ ಆಯಾ ಸಮುದಾಯಗಳಿಗೆ ವಂಶಪಾರಂಪರಿಕ ಅನೌಪಚಾರಿಕ ಶಿಕ್ಷಣವಾಗಿತ್ತು, ಇವರು ಔಪಚಾರಿಕ ಶಿಕ್ಷಣದಿಂದ ವಂಚಿತರಾಗಿದ್ದರು,12 ನೇ ಶತಮಾನದಲ್ಲಿ ಬಸವಣ್ಣ ನವರ ನೇತೃತ್ವದಲ್ಲಿ ಅಲ್ಲಮಪ್ರಭುವಿನ ಮುಂದಾಳುತ್ವದಲ್ಲಿ ವಚನ ಚಳುವಳಿ ಪ್ರಾರಂಭವಾಗಿ ಎಲ್ಲಾ ಸಮುದಾಯದ ಅನುಭವಿಗಳು ತಮ್ಮ ತಮ್ಮ ಅನುಭಾವಗಳನ್ನು ವಚನಗಳ ಮೂಲಕ ಅನುಭವ ಮಂಟಪದಲ್ಲಿ ಮಂಡಿಸುತ್ತಿದ್ದರು. ವಿಶೇಷವಾಗಿ ಮಹಿಳ ವಚನಗಾರ್ತಿಯರು ಕೂಡಾ ಈ ಕಾಲಘಟ್ಟದಲ್ಲಿ ಪುರುಷರಂತೆ ವಚನ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು ಅವರಲ್ಲಿ ಪ್ರಮುಖವಾಗಿ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಇತರರು ತರುವಾಯ ರಾಜತಾಂತ್ರಿಕ ಪರಿಧಿಯಲ್ಲೇ ಶೈಕ್ಷಣಿಕ ಚಟುವಟಿಕೆಗಳು ಮುಂದುವರಿಯಿತು,
ಕ್ರಿ.ಶ.1600 ರ ವೇಳೆಗೆ ಭಾರತಕ್ಕೆ ವ್ಯಾಪಾರಕ್ಕೆ ಆಗಮಿಸಿದ ಆಂಗ್ಲರಿಗೆ ಸ್ಥಳೀಯರೊಂದಿಗೆ ವ್ಯವಹರಿಸಲು ಭಾಷೆಯ ಸಮಸ್ಯೆ ಎದುರಾಯಿತು, ಅದಕ್ಕಾಗಿ 1600 ರಿಂದ 1813 ರ ವರೆಗೂ ಬಂಗಾಳದಲ್ಲಿ ಭಾರತೀಯ ಸಾಂಪ್ರದಾಯಿಕ ಶಿಕ್ಷಣ ನೀಡಲು ಸುಮಾರು ಎಂಬತ್ತು ಸಾವಿರ ಶಾಲೆಗಳನ್ನು ತೆರೆದರು, ಆರಂಭದಲ್ಲಿ ದೇಶಿಯ ಭಾಷೆಗಳಲ್ಲೆ ಶಿಕ್ಷಣ ನೀಡಿದರು ಇದು ವ್ಯವಹಾರಿಕವಾಗಿ ಸಹಕಾರಿಯಾಗ ಲಿಲ್ಲ. ತಮಗೆ ನೆರವಾಗಲು ಆಂಗ್ಲ ಭಾಷೆಯ ಶಾಲೆಗಳನ್ನು ತೆರೆದರು ಇದರಿಂದ ಭಾರತೀಯರು ವಿದೇಶಗಳಿಗೆ ತೆರಳಿ ಪಾಶ್ಚಿಮಾತ್ಯ ಶಿಕ್ಷಣ ಕಲಿಯವ ಅವಕಾಶವು ಕೂಡಾ ಲಭಿಸಿತು.
1796ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ರಾಜಾರಾಮ ಮೋಹನರಾಯರು ವಿದೇಶಕ್ಕೆ ತೆರಳಿ ಇಂಗ್ಲಿಷ್ ಶಿಕ್ಷಣವನ್ನು ಕಲಿತರು, ಮುಂದೆ ರಾಯರ ಸಲಹೆಯಂತೆ 1816ರಲ್ಲಿ ಕೋಲ್ಕತಾದಲ್ಲಿ ಮೊದಲ ಇಂಗ್ಲಿಷ್ ಶಾಲೆ ಆರಂಭಿಸಲಾಯಿತು, ಮುಂದೆ ರಾಜರಾಂ ಮೋಹನ್ ರಾಯ್ ರು 1817ರಲ್ಲಿ ಕಲ್ಕತ್ತಾದಲ್ಲಿ ಹಿಂದೂ ಕಾಲೇಜು (Hindu College) (ಇಂದಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ) ಸ್ಥಾಪಿಸಿದರು, ತರುವಾಯ ಪಾಶ್ಚಿಮಾತ್ಯ ಶಿಕ್ಷಣವನ್ನು ಭಾರತದಲ್ಲಿ ವಿಸ್ತರಿಸಲು ಸಮಾಜ ಸುಧಾರಕರರಾದ ಕೇಶವದಾಸ್, ಸರ್ ಸೈಯದ್ ಅಹಮದ್ ಖಾನ್ ಮುಂತಾದವರ ಕೋರಿಕೆಯ ಮೇರೆಗೆ ಕ್ರೈಸ್ತ ಮಿಷನರಿಗಳ ಮೂಲಕ ಆಂಗ್ಲ ಶಿಕ್ಷಣ ಪದ್ಧತಿ ಆರಂಭವಾದವು, ಇದರಿಂದ ಸಮಾಜ ಸುಧಾರಕರು ಮತ್ತು ಮಿಷನರಿಗಳ ಮೂಲಕ ಶಾಲೆಗಳಲ್ಲಿ ಹಿಂದುಳಿದ ವರ್ಗ, ದಲಿತರಿಗೂ ಶಿಕ್ಷಣದ ಬಾಗಿಲು ತೆರೆದವು,ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದ ಇತರ ಸಮುದಾಯಗಳಿಗೂ ಕ್ರಮ ಬದ್ಧವಾದ ಇಂಗ್ಲಿಷ್ ಶಿಕ್ಷಣ ಪಡೆಯಲು ಅವಕಾಶ ಲಭಿಸಿತು. ಮದ್ರಾಸ್ ಮತ್ತು ಬಾಂಬೆಯಲ್ಲಿ ಪ್ರೆಸಿಡೆನ್ಸಿ ಪಟ್ಟಣಗಳಲ್ಲಿ ಆಂಗ್ಲ ಶಾಲೆಗಳು ಸ್ಥಾಪನೆಯಾದವು, ಜ್ಯೋತಿಬಾ ಫುಲೆ ಯವರು ಶೂದ್ರ- ಅತಿಶೂದ್ರರ ಶಿಕ್ಷಣಕ್ಕಾಗಿ ಹೋರಾಟ ಮಾಡಿದರು ತಮ್ಮ ಪತ್ನಿ ಸಾವಿತ್ರಿ ಬಾಯಿ ಫುಲೆ ಯವರಿಗೆ ಶಿಕ್ಷಣ ಕಲಿಸುವ ಮೂಲಕ 1848ರಲ್ಲಿ ಪುಣೆಯಲ್ಲಿ ಬಾಲಕಿಯರು ಹಾಗೂ ತಳ ಸಮುದಾಯಗಳಿಗಾಗಿ ಮೊದಲ ಶಾಲೆ ಆರಂಭಿಸಿ ದರು. ಈ ನಡುವೆ ಮೇಲ್ವರ್ಗದವರಿಂದ ಸಾಕಷ್ಟು ತೊಂದರೆಗಳನ್ನು ಪುಲೇ ದಂಪತಿಗಳು ಎದುರಿಸಬೇಕಾಯಿತು. ಆದರೂ ಯಾವದಕ್ಕೂ ಎದೆಗುಂದದೆ ಈ ದಂಪತಿಗಳು ಶಾಲೆಗಳನ್ನು ಮುನ್ನಡೆಸಿದರು. ಹಾಗಾಗಿ ಭಾರತದಲ್ಲಿ ಮೊದಲ ಮಹಿಳಾ ಶಿಕ್ಷಕಿ ಎಂಬ ಕೀರ್ತಿಗೆ ಸಾವಿತ್ರಿ ಬಾಯಿ ಪುಲೇ ಯವರು ಭಾಜನರಾಗಿದ್ದಾರೆ, 1857ರಲ್ಲಿ ಕಲ್ಕತ್ತಾ, ಬಾಂಬೆ, ಮದ್ರಾಸ್ ವಿಶ್ವ ವಿದ್ಯಾಲಯಗಳು ಸ್ಥಾಪಿತವಾದವು, ಇದರಿಂದ ಉನ್ನತ ಶಿಕ್ಷಣಕ್ಕೆ ಅವಕಾಶವಾಯಿತು, ವಿದೇಶಗಳಲ್ಲಿ ಶಿಕ್ಷಣ ಪಡೆಯುವ ಅವಕಾಶ ದೊರೆಯಿತು.
ಮೈಸೂರು ಸಂಸ್ಥಾನದಲ್ಲೂ ತಳ ಸಮದಾಯದವರಿಗೆ ನಾಲ್ವಡಿಯವರು ಪಂಚಮ ಶಾಲೆಗಳನ್ನು ತೆರೆದರು. ಇದರಿಂದ ಹಳೆ ಮೈಸೂರು ಭಾಗದಲ್ಲಿ ಸಾಕಷ್ಟು ದಲಿತರಿಗೆ ಶಿಕ್ಷಣ ಕಲಿಕೆಗೆ ಅವಕಾಶವಾಯಿತು.
ಬರೋಡಾ ಸಂಸ್ಥಾನದ ಮಹಾರಾಜ ಸಯ್ಯಾಜಿರಾವ್ ಗಾಯಕ ವಾಡ್ ರವರು ತಮ್ಮ ಸಂಸ್ಥಾನದಲ್ಲಿ 1913ರಲ್ಲಿ ವಿದ್ಯಾರ್ಥಿ ವೇತನ ನೀಡುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಿದರು ಇದರ ಫಲವಾಗಿ ಭೀಮ್ ರಾವ್ಅಂಬೇಡ್ಕರ್ ಭಾರತದಲ್ಲಿ ಉನ್ನತ ಶಿಕ್ಷಣ ಪಡೆದ ಮೊದಲಿಗರಾದರು, ಅಮೇರಿಕಾ, ಇಂಗ್ಲೇಂಡ್, ಜರ್ಮನಿ ಮತ್ತಿತರ ವಿದೇಶಗಳಲ್ಲಿ ಸಂಶೋಧನೆ ಮಾಡಿದರು. ಭೀಮರಾವ್ ಅಂಬೇಡ್ಕರ್ ರು ಅಪರಿಮಿತ ಜ್ಞಾನಾರ್ಜನೆಯಿಂದ ಸ್ವಾತಂತ್ರ್ಯಾ ನಂತರ ಜಗತ್ತೇ ಮೆಚ್ಚುವ ಸಂವಿಧಾನ ರಚನೆ ಮಾಡಿದರು.
ಪ್ರಜಾಪ್ರಭುತ್ವ ಸರ್ಕಾರ 1950 ರಲ್ಲಿ ಅಸ್ತಿತ್ವಕ್ಕೆ ಬಂದ ಮೇಲೆ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾದವು.
1950 ಶಿಕ್ಷಣವನ್ನು ರಾಜ್ಯದ ಜವಾಬ್ದಾರಿ ಎಂದು ಘೋಷಣೆ ಮಾಡಲಾಯಿತು. 1948 ರಲ್ಲಿ ರಾಧಾಕೃಷ್ಣನ್ ಆಯೋಗವು ವಿಶ್ವ ವಿದ್ಯಾಲಯಗಳ ಶಿಕ್ಷಣ ಸುಧಾರಣೆಗೆ ಶಿಫಾರಸ್ಸು ಮಾಡಲಾಯಿತು, ಮುಂದೆ 1964–66 ರಲ್ಲಿ ಕೊಠಾರಿ ಆಯೋಗ 10+2+3 ರೂಪಿಸಿತು.
ರಾಷ್ಟ್ರೀಯ ಶಿಕ್ಷಣ ನೀತಿ (1968, 1986, 2020) – ಸಮಗ್ರ ಶಿಕ್ಷಣ ಸುಧಾರಣೆಗೆ ಕ್ರಮ ವಹಿಸಲಾಯಿತು,
RTE ಕಾಯಿದೆ (2009) – 6–14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಜಾರಿಗೆ ತರಲಾಯಿತು. 2020-22 ರ ಅವಧಿಯಲ್ಲಿ ಕೋವಿಡ್ ನಿಂದ ತತ್ತರಿಸಿದ ಭಾರತ ಶಿಕ್ಷಣ ವ್ಯವಸ್ಥೆಯನ್ನೆ ಬುಡಮೇಲು ಮಾಡಿತ್ತು. ಇದೇ ಅವಧಿಯಲ್ಲಿ NEP 2020 – ಬಹು ಶಾಖಾ ಶಿಕ್ಷಣ, ತಂತ್ರಜ್ಞಾನ ಬಳಕೆ, ಮಾತೃ ಭಾಷೆಗೆ ಒತ್ತು ನೀಡಲಾಗಿದ್ದುಡಿಜಿಟಲ್ ಶಿಕ್ಷಣ, ಆನ್‌ಲೈನ್ ಕಲಿಕೆಯು (DIKSHA, SWAYAM). ಉನ್ನತ ಶಿಕ್ಷಣದಲ್ಲಿ ಸಂಶೋಧನೆ ಮತ್ತು ನವೋದಯಕ್ಕೆ ಉತ್ತೇಜನ ನೀಡಲಾಗುತ್ತಿದೆ.
ಪ್ರಸ್ತುತ ಭಾರತದಲ್ಲಿ ಒಟ್ಟು ಶಾಲೆಗಳ ಸಂಖ್ಯೆ ಸುಮಾರು 14.7 ಲಕ್ಷ (1,471,891) ಶಾಲೆಗಳಿವೆ ಈ ಎಲ್ಲಾ ಶಾಲೆ ಗಳು ಪ್ರಾಥಮಿಕ ಶಾಲೆಯಿಂದ ಹೈಸ್ಕೂಲ್ ಮಟ್ಟದವರೆಗೆ ಸೇರಿಕೊಂಡಿವೆ.
ಆಧುನಿಕ ಭಾರತದಲ್ಲಿ ಶಿಕ್ಷಣವು ವಸಾಹತು ಕಾಲದ ಅಗತ್ಯಗಳಿಂದ ಆರಂಭವಾಗಿ, ಇಂದು ಸಮಾನತೆ, ವೈಜ್ಞಾನಿಕ ಚಿಂತನೆ ಮತ್ತು ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ, ಶಿಕ್ಷಣವನ್ನು ಪರಿಣಾಮ
ಕಾರಿಯಾಗಿ ಬಳಸಿಕೊಂಡು ಜಗತ್ತಿನ ನಾನಾ ಕಡೆ ಬದುಕನ್ನು ಕಟ್ಟಿಕೊಂಡಿರುವ ರಾಜ್ಯ ಕೇರಳ. ಇಂದು ಕೇರಳ ರಾಜ್ಯದಲ್ಲಿ ಪದವಿ ಹಂತದ ಶಿಕ್ಷಣವನ್ನು ಉಚಿತವಾಗಿ ನೀಡಲು ಮಾನ್ಯ ಪಿನರಾಯರವರ ನೇತೃತ್ವದ ಕೇರಳ ಸರ್ಕಾರ ಮುಂದಾಗಿದೆ, ಇಂತಹ ಕಾರ್ಯಕ್ರಮಗಳು ಶ್ಲಾಘನೀಯ ಇವರ ಮಾದರಿಯಲ್ಲಿ ದೇಶದ ಎಲ್ಲರಿಗೂ ಪದವಿ ಹಂತದ ಶಿಕ್ಷಣ ಸಿಗುವಂತಾಗಬೇಕು.
ಪ್ರಸ್ತುತ ಗುಜರಾತ್ ನಲ್ಲಿ ಪ್ರಾಥಮಿಕ ಹಂತದಲ್ಲೆ ಶಿಕ್ಷಣ ತೊರೆಯವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಇಂತಹ ಬೆಳವಣಿಗೆ ದೇಶದ ಅಭಿವೃದ್ಧಿಗೆ ಪೂರಕವಾಗುವುದಿಲ್ಲ.
ದಕ್ಷಿಣ ಆಫ್ರಿಕಾದ ಪರಿವರ್ತಕ ನೆಲ್ಸನ್ ಮಂಡೇಲಾ ರವರು ಶಿಕ್ಷಣ ಕುರಿತು ಅವರ ಹೇಳಿಕೆ ಎಷ್ಟು ಪೂರಕವಾಗಿದೆ ನೋಡಿ “ಶಿಕ್ಷಣ ಎಂಬುದು ಅತ್ಯಂತ ಪರಿಣಾಮಕಾರಿಯಾದ ಆಯುಧ, ಇದನ್ನು ಬಳಸಿಕೊಂಡು ಇಡಿ ಜಗತ್ತನ್ನೇ ಬದಲಿಸಬಹುದು”. ಇಂದು ಶಿಕ್ಷಣವು ಸಮಾಜ ಪರಿವರ್ತನೆಯ ಪ್ರಮುಖ ಸಾಧನವಾಗಿದೆ. ಇಂದು ದೇಶದಲ್ಲಿ ಪದವಿ ಹಂತದ ಶಿಕ್ಷಣವನ್ನು ದೂರ ಶಿಕ್ಷಣದ ಮೂಲಕ ಪಡೆಯುವ ಅವಕಾಶಗಳಿವೆ, ಡಾ.ಬಿ.ಆರ್. ಅಂಬೇಡ್ಕರ್ ರವರು ಹೇಳುವಂತೆ “ಓದು ಬರಹ ತಿಳಿಯದ ವ್ಯಕ್ತಿ ಬದುಕಿದ್ದು ಸತ್ತಂತೆ ಎಂದಿದ್ದಾರೆ.
ಇಂದು ಶಿಕ್ಷಣವು ಶಾಲಾ-ಕಾಲೇಜುಗಳಲ್ಲಿ ನಡೆಯುವ ಔಪಚಾರಿಕ ಕಲಿಕೆಯಿಂದ ಹಿಡಿದು ನಿತ್ಯ ಬದುಕಿನ ಅನುಭವಗಳ ಅನೌಪಚಾರಿಕ ಕಲಿಕೆಯವರೆಗೂ ವಿಸ್ತರಿಸಿದೆ, ಮತ್ತು ಇದರ ಗುರಿ ಮನಸ್ಸಿನ ಸಾಮರ್ಥ್ಯವನ್ನು ಹೆಚ್ಚಿಸಿ, ವಿಮರ್ಶಾತ್ಮಕ ಚಿಂತನೆಗಳನ್ನು ಉತ್ತೇಜಿಸುವುದು.

ಲೇಖನ – ಡಾ. ಸುರೇಶ್ ಎಸ್, ವಡಗಲಪುರ.
ಇತಿಹಾಸ ಉಪನ್ಯಾಸಕರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!